ETV Bharat / sports

"ಫಿನಿಕ್ಸ್​​ನಂತೆ ಮತ್ತೆ ಉತ್ತುಂಗಕ್ಕೇರುವಂತಾಗಲಿ".. ಪಂತ್​ ಭೇಟಿಯಾದ ರೈನಾ, ಬಜ್ಜಿ, ಶ್ರೀಶಾಂತ್​

ರಿಷಬ್​ ಪಂತ್​ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಕ್ರಿಕೆಟಿಗರು - 2022 ಡಿಸೆಂಬರ್​ 30 ರಂದು ಕಾರು ಅಪಘಾತಕ್ಕೊಳಗಾದ ಪಂತ್​ - ಹಾಡುಗಾರ ಗುರು ರಾಂಧವ ಪಂತ್​ ಭೇಟಿಯಾಗಿ ಚೇತರಿಕೆಗಾಗಿ ಪ್ರಾರ್ಥನೆ

Guru Randhawa meet rishabh pant
ಫಿನಿಕ್ಸ್​​ನಂತೆ ಮತ್ತೆ ಉತ್ತುಂಗಕ್ಕೇರುವಂತಾಗಲಿ
author img

By

Published : Mar 26, 2023, 4:20 PM IST

ನವದೆಹಲಿ: ಭಾರತ ತಂಡದ ಯುವ ಭರವಸೆಯ ಕ್ರಿಕೆಟಿಗ ರಿಷಬ್​ ಪಂತ್​ ಚೇತರಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 25 ರಂದು ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಶ್ರೀಶಾಂತ್ ರಿಷಬ್ ಪಂತ್ ಮನೆಗೆ ತೆರಳಿ ಭೇಟಿಯಾಗಿದ್ದಾರೆ. ಈ ಮೂವರು ಆಟಗಾರರು ರಿಷಬ್ ಪಂತ್ ಅವರ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಅಲ್ಲದೇ ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾರೆ.

ಈ ಮೂವರು ಆಟಗಾರರಲ್ಲದೆ ಪಂಜಾಬಿ ಗಾಯಕ ಗುರು ರಾಂಧವಾ ಕೂಡ ರಿಷಬ್ ಪಂತ್ ಅವರನ್ನು ಭೇಟಿ ಮಾಡಿದ್ದಾರೆ. ಗುರು ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ಪಂತ್ ಜೊತೆಗಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಈ ಹಿಂದೆ ಯುವರಾಜ್​ ಸಿಂಗ್​ ಪಂತ್​ ಅವರನ್ನು ಭೇಟಿಯಾಗಿದ್ದರು. ಅವರು ಚಾಂಪಿಯನ್​ ಮರಳಿ ಬರಲಿದ್ದಾರೆ ಎಂದು ಬರೆದುಕೊಂಡಿದ್ದರು.

2022ರ ಡಿಸೆಂಬರ್ 30 ರಂದು ಡೆಹಲಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತದಲ್ಲಿ ರಿಷಬ್ ಪಂತ್ ಗಾಯಗೊಂಡರು. ಹೊಡಿ ಬಡಿ ದಾಂಡಿಗ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಆದರೆ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರ, ಸುರೇಶ್ ರೈನಾ, ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ಪಂತ್ ಮನೆಗೆ ತೆರಳಿ ಅವರೊಂದಿಗೆ ಕೆಲ ಕ್ಷಣಗಳನ್ನು ಕಳೆದಿದ್ದಾರೆ.

ಸುರೇಶ್​ ರೈನಾ ತಮ್ಮ ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಭೇಟಿಯ ಬಗ್ಗೆ ಬರೆದುಕೊಂಡಿದ್ದಾರೆ. "ಭ್ರಾತೃತ್ವವೇ ಸರ್ವಸ್ವ ..ಕುಟುಂಬವೇ ನಮ್ಮ ಹೃದಯ ಇರುವಲ್ಲಿ..ನಮ್ಮ ಸಹೋದರನಿಗೆ ಹಾರೈಕೆ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಫಿನಿಕ್ಸ್​ನಂತೆ ಮೇಲಕ್ಕೇರಲಿ ಎಂದು. ನಿಮ್ಮೊಂದಿಗೆ ನಾವು ಎಂದಿಗೂ ಇದ್ದೇವೆ ಸಹೋದರ" ಎಂದು ಬರೆದುಕೊಂಡಿದ್ದಾರೆ.

ಕ್ರಿಕೆಟಿಗ ಶ್ರೀಶಾಂತ್​ ಮತ್ತು ಹರ್ಭಜನ್​ ಸಿಂಗ್​ ಕೂಡಾ ತಮ್ಮ ಖಾತೆಯಲ್ಲಿ ರಿಷಬ್​ ಪಂತ್​ ಅವರು ವೇಗವಾಗಿ ಚೇತರಿಸಿಕೊಂಡು, ಮೈದಾನಕ್ಕೆ ಮರಳಲಿ ಎಂದು ಬರೆದುಕೊಂಡಿದ್ದಾರೆ. ಪಂತ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್​ನ ಕೋಚ್​ ರಿಕ್ಕಿ ಪಾಂಟಿಂಗ್​ ಹೇಳಿದ್ದರು. ಅಲ್ಲದೇ ಅವರ ಜಾಗಕ್ಕೆ ಯಾವುದೇ ಬದಲಿ ಆಟಗಾರನನ್ನು ಹೋಲಿಸಲು ಸಾಧ್ಯವಿಲ್ಲ ಎಂದಿದ್ದರು.

ಪಂತ್ ಅವರಿಗೆ ಗುರು ರಾಂಧವ ಅವರ ವಿಶೇಷ ಸಂದೇಶ: ಪಂಜಾಬಿ ಗಾಯಕ ಗುರು ರಾಂಧವ ಕೂಡ ರಿಷಭ್ ಪಂತ್ ಅವರ ಮನೆಗೆ ಆಗಮಿಸಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಗುರು ರಿಷಬ್ ಪಂತ್ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, "ನನ್ನ ಸಹೋದರನನ್ನು ಭೇಟಿಯಾಗಿರುವುದು ನನಗೆ ಸಂತೋಷವಾಗಿದೆ. ಪಂತ್ ಶೀಘ್ರದಲ್ಲೇ ಚೇತರಿಸಿಕೊಂಡು ಮೈದಾನಕ್ಕೆ ಮರಳಲಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಪಂತ್​ ಬದಲು ವಾರ್ನರ್​ಗೆ ನಾಯಕತ್ವ: ಡೆಲ್ಲಿ ಕ್ಯಾಪಿಟಲ್ಸ್​ ನಾಯಕತ್ವವನ್ನು ರಿಷಬ್​ ಪಂತ್​ಗೆ ನೀಡಲಾಗಿತ್ತು. ಆದರೆ ಈ ಬಾರಿಯ ಐಪಿಎಲ್​ ಪಂತ್​ ಆಡುತ್ತಿಲ್ಲವಾದ್ದರಿಂದ ಕ್ಯಾಪ್ಟನ್ಸಿಯನ್ನು ಡೇವಿಡ್​ ವಾರ್ನರ್​ಗೆ ನೀಡಲಾಗಿದೆ. ವಾರ್ನರ್​ ಈ ಹಿಂದೆ ಸನ್ ​ರೈಸರ್ಸ್​ ಹೈದರಾಬಾದ್​ ತಂಡದ ನಾಯಕತ್ವ ನಿರ್ವಹಣೆ ಮಾಡಿದ್ದರು.

ಇದನ್ನೂ ಓದಿ: ವಿರಾಟ್​ ಕೊಹ್ಲಿ ಜರ್ಸಿ ಸಂಖ್ಯೆ 18.. ಇದರ ಹಿಂದಿದೆ ಭಾವನಾತ್ಮಕ ಕಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.