ETV Bharat / sports

ಮಾತಿನ ಭರದಲ್ಲಿ 'ನಾನೂ ಬ್ರಾಹ್ಮಣ' ಎಂದೇಳಿ ವಿವಾದ ಮೈಮೇಲೆಳೆದುಕೊಂಡ ರೈನಾ - ಚೆನ್ನೈ ಸೂಪರ್ ಕಿಂಗ್ಸ್ ರೈನಾ

ಸುರೇಶ್​ ರೈನಾ 'ನಾನು ಕೂಡ ಬ್ರಾಹ್ಮಣ' ಎಂದು ಹೇಳಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಟುವಾಗಿ ಟೀಕೆಗಳು ವ್ಯಕ್ತವಾಗಿವೆ. ಚೆನ್ನೈ ಸಂಸ್ಕೃತಿ ಎಂಬುದು ಕೇವಲ ಬ್ರಾಹ್ಮಣರದ್ದಲ್ಲ, ಒಂದು ಪ್ರದೇಶದ ಸಂಸ್ಕೃತಿಯನ್ನು ಜಾತಿಯ ಮೂಲಕ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Suresh Raina
ಸುರೇಶ್ ರೈನಾ ವಿವಾದ
author img

By

Published : Jul 22, 2021, 6:00 PM IST

ಮುಂಬೈ: ಸಮಾಜಮುಖಿ ಕೆಲಸಗಳಿಂದ ಜನಮನ್ನಣೆ ಪಡೆದುಕೊಂಡಿದ್ದ ಭಾರತ ತಂಡ ಮಾಜಿ ಆಲ್​ರೌಂಡರ್​ ಸುರೇಶ್ ರೈನಾ ಮಾತಿನ ಭರದಲ್ಲಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿರುವ ರೈನಾ ಎರಡು ದಿನಗಳ ಹಿಂದೆ ಆರಂಭವಾದ ತಮಿಳುನಾಡು ಪ್ರೀಮಿಯರ್ ಲೀಗ್ ಕಾಮೆಂಟರಿ ಚಿಟ್​ಚಾಟ್​ನಲ್ಲಿ ಭಾಗವಹಿಸಿದ್ದ ವೇಳೆ ಚೆನ್ನೈ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ ಮತ್ತು ಇಲ್ಲಿನ ಸಂಸ್ಕೃತಿಯನ್ನು ಹೇಗೆ ಅಳವಡಿಸಿಕೊಂಡಿದ್ದೀರಿ ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ 34 ವರ್ಷದ ರೈನಾ, " ನಾನು ಕೂಡ ಬ್ರಾಹ್ಮಣ. 2004 ರಿಂದಲೂ ಚೆನ್ನೈನಲ್ಲಿ ಆಡುತ್ತಿದ್ದೇನೆ. ನಾನು ಇಲ್ಲಿನ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ನನ್ನ ಸಹ ಆಟಗಾರರನ್ನು ಇಷ್ಟಪಡುತ್ತೇನೆ. ಅಲ್ಲದೆ ನಾನು ಇಲ್ಲಿನ ಆಟಗಾರರಾದ ಅನಿರುದ್ಧ್ ಶ್ರೀಕಾಂತ್, ಬದ್ರಿ(ಎಸ್​ ಬದ್ರಿನಾಥ್), ಬಾಲ ಭಾಯ್(ಲಕ್ಷ್ಮೀಪತಿ ಬಾಲಾಜಿ) ಮುಂತಾದವರ ಜೊತೆ ಆಡಿದ್ದೇನೆ. ನೀವು ಅಲ್ಲಿಂದ ಏನಾದರೂ ಒಳ್ಳೆಯದನ್ನು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ನಮಗೆ ಉತ್ತಮ ಮ್ಯಾನೇಜ್​ಮೆಂಟ್​ ಇದೆ, ನಮ್ಮನ್ನು ಅನ್ವೇಷಿಸಿಕೊಳ್ಳಲು ನಮಗೆ ಲೈಸೆನ್ಸ್​ ಇದೆ. ನಾನು ಅಲ್ಲಿನ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ, ಮತ್ತು ನಾನು ಸಿಎಸ್‌ಕೆ ಭಾಗವಾಗಲು ಅದೃಷ್ಟಶಾಲಿ ಎಂದು ಹೇಳಿದ್ದರು.

ಆದರೆ ಅಭಿಮಾನಿಗಳು ರೈನಾ ಅವರ 'ನಾನು ಕೂಡ ಬ್ರಾಹ್ಮಣ' ಎಂದು ಹೇಳಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಟುವಾದ ಟೀಕೆಗಳು ವ್ಯಕ್ತವಾಗಿವೆ. ಚೆನ್ನೈ ಸಂಸ್ಕೃತಿ ಎಂಬುದು ಕೇವಲ ಬ್ರಾಹ್ಮಣರದ್ದಲ್ಲ, ಒಂದು ಪ್ರದೇಶದ ಸಂಸ್ಕೃತಿಯನ್ನು ಜಾತಿಯ ಮೂಲಕ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ನೆಟಿಜನ್ಸ್​ ಕಿಡಿಕಾರಿದ್ದಾರೆ.

ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದರು, ಸುರೇಶ್ ರೈನಾ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನು ಓದಿ:Ind Vs Eng ಗಾಯಗೊಂಡು ಇಂಗ್ಲೆಂಡ್ ಸರಣಿಯಿಂದಲೇ ಹೊರಬಿದ್ದ ವಾಷಿಂಗ್ಟನ್ ಸುಂದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.