ಮುಂಬೈ : ಇಲ್ಲಿನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲಖನೌ ಸೂರಪ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ಸನ್‌ರೈಸರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಹೈದರಾಬಾದ್ ಸನ್‌ರೈಸರ್ಸ್ ತಂಡ ಲಖನೌ ವಿರುದ್ಧದ ಎರಡನೇ ಪಂದ್ಯದಲ್ಲಿ ಜಯಿಸುವ ಮೂಲಕ ಗೆಲುವಿನ ಹಳಿಗೆ ಬರುವ ಇರಾದೆಯಲ್ಲಿದೆ.
ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆದ್ದಿರುವ ಕೆಎಲ್ ರಾಹುಲ್ ನೇತೃತ್ವದ ಪಡೆ ಕೇನ್ ವಿಲಿಯಮ್ಸನ್ ಪಡೆಯನ್ನು ಹಣಿಯುವ ಹುಮ್ಮಸ್ಸಿನಲ್ಲಿದೆ.
-
A look at the Playing XI for #SRHvLSG
— IndianPremierLeague (@IPL) April 4, 2022 " class="align-text-top noRightClick twitterSection" data="
Live - https://t.co/89IMzVls6f #SRHvLSG #TATAIPL pic.twitter.com/rmZI4Tpxfa
">A look at the Playing XI for #SRHvLSG
— IndianPremierLeague (@IPL) April 4, 2022
Live - https://t.co/89IMzVls6f #SRHvLSG #TATAIPL pic.twitter.com/rmZI4TpxfaA look at the Playing XI for #SRHvLSG
— IndianPremierLeague (@IPL) April 4, 2022
Live - https://t.co/89IMzVls6f #SRHvLSG #TATAIPL pic.twitter.com/rmZI4Tpxfa
ಜಾಸನ್ ಹೋಲ್ಡರ್ಗೆ ಕ್ಯಾಪ್ : ಇನ್ನು ಈ ಪಂದ್ಯದಲ್ಲಿ ವಿದೇಶಿ ಕೋಟಾದಲ್ಲಿ ವೆಸ್ಟ್ ಇಂಡೀಸ್ ಆಟಗಾರ ಜಾಸನ್ ಹೋಲ್ಡರ್ ಸ್ಥಾನ ಪಡೆದಿದ್ದಾರೆ. ಕಳೆದ ಪಂದ್ಯದಲ್ಲಿ ಆಡಿದ್ದ ಶ್ರೀಲಂಕಾದ ಚಮೀರಾರನ್ನು ಕೈಬಿಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತಂಡಗಳು ಇಂತಿವೆ : ಲಖನೌ ಸೂಪರ್ ಜೈಂಟ್ಸ್ : ಕೆಎಲ್ ರಾಹುಲ್ (ನಾಯಕ), ಮನೀಷ್ ಪಾಂಡೆ, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜಾಸನ್ ಹೋಲ್ಡರ್, ದೀಪಕ್ ಹೂಡಾ, ಆಯುಷ್ ಬದೋನಿ, ಇವಿನ್ ಲೂಯಿಸ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಅವೇಶ್ ಖಾನ್.
ಸನ್‌ರೈಸರ್ಸ್ ಹೈದರಾಬಾದ್ : ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ರೊಮಾರಿಯೊ ಶೆಫರ್ಡ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.
ಓದಿ: ಕ್ರಿಕೆಟ್ ಬದುಕಿಗೆ ರಾಸ್ ಟೇಲರ್ ವಿದಾಯ...ನೆದರ್ಲ್ಯಾಂಡ್ ತಂಡದಿಂದ ಗಾರ್ಡ್ ಆಫ್ ಆನರ್ ಗೌರವ