ಬೆಂಗಳೂರು : ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಬರೋಬ್ಬರಿ 10.75 ಕೋಟಿ ರೂ. ನೀಡಿ ಖರೀದಿಸಿದೆ. ಆರ್ಸಿಬಿ ಶ್ರೀಲಂಕಾದ ಆಲ್ರೌಂಡರ್ ವನಿಡು ಹಸರಂಗ ಅವರನ್ನು ಕೂಡ 10.75 ಕೋಟಿ ರೂ. ನೀಡಿ ಖರೀದಿಸಿದೆ.
2018ರ ಡಿಸೆಂಬರ್ನಲ್ಲಿ ನಡೆದಿದ್ದ ಹರಾಜಿನಲ್ಲಿ 4.2 ಕೋಟಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿತ್ತು. ಆದರೆ, ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರನ್ನು ರಿಟೈನ್ ಮಾಡಿಕೊಂಡಿರಲಿಲ್ಲ.
ವಿಕೆಟ್ ಕೀಪರ್ ವಿಭಾಗದಲ್ಲಿ ಹರಾಜಿನಲ್ಲಿದ್ದ 1.5 ಕೋಟಿ ರೂ. ನಿಗದಿ ಮಾಡಿಕೊಂಡಿದ್ದರು. ವಿಕೆಟ್ ಕೀಪರ್ ಸ್ಥಾನಕ್ಕಾಗಿ ಹೈದರಾಬಾದ್ ಮತ್ತು ಕೆಕೆಆರ್ ತಂಡಗಳು ಪೈಪೋಟಿ ನಡೆಸಿದ್ದರಿಂದ 10 ಕೋಟಿ ರೂ. ಮೀರಿತು. ಕೊನೆಗೆ ಸನ್ರೈಸರ್ಸ್ ಹೈದರಾಬಾದ್ 10.75 ಕೋಟಿ ರೂ.ಗೆ ಖರೀಸುವಲ್ಲಿ ಸಫಲವಾಯಿತು. ಇದು ಈ ವರ್ಷದ ಹರಾಜಿನಲ್ಲಿ ವಿದೇಶಿ ಆಟಗಾರ ಪಡೆದ ಗರಿಷ್ಠ ಮೊತ್ತವಾಗಿದೆ.
ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡರನ್ನು 9.25 ಕೋಟಿ ರೂ.ಗಳಿಗೆ ಪಂಜಾಬ್ ಕಿಂಗ್ಸ್ ತಂಡ ಖರೀದಿ ಮಾಡಿದ್ದು, ಇಂದಿನ ವಿದೇಶಿ ಆಟಗಾರನ ಗರಿಷ್ಠ ಬೆಲೆಯಾಗಿತ್ತು.
ಇನ್ನು ವಿದೇಶಿ ಆಟಗಾರರಲ್ಲಿ ವಿಂಡೀಸ್ ದೈತ್ಯ ಜೇಸನ್ ಹೋಲ್ಡರ್ 8.75 ಕೋಟಿ (LSG), ನ್ಯೂಜಿಲ್ಯಾಂಡ್ನ ವೇಗಿ ಟ್ರೆಂಟ್ ಬೌಲ್ಟ್(RR) 8 ಕೋಟಿ, ವಿಂಡೀಸ್ ಯುವ ಬ್ಯಾಟರ್ ಶಿಮ್ರಾನ್ ಹೆಟ್ಮಾಯರ್ 8.5 ಕೋಟಿ (RR), ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ 7.25 ಕೋಟಿ (KKR), ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ 7 ಕೋಟಿ (RCB) ಮತ್ತು ಡಿಕಾಕ್ 6.75 ಕೋಟಿ (LSG), ಇಂಗ್ಲೆಂಡ್ನ ಜಾನಿ ಬೈರ್ಸ್ಟೋವ್ 6.75 (PK), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 6.25 ಕೋಟಿ (DC) ಮತ್ತು ಮಿಚೆಲ್ ಮಾರ್ಷ್ 6.5 (DC) ಕೋಟಿ ರೂ. ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 2022ರ ಐಪಿಎಲ್ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಇಶಾನ್ ಕಿಶನ್