ಮುಂಬೈ : ವೆಸ್ಟ್ ಇಂಡೀಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅನುಭವಿ ಸ್ಪಿನ್ನರ್ ಸುನಿಲ್ ನರೈನ್ ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಸ್ಪಿನ್ ಬೌಲಿಂಗ್ಗೆ ಅತ್ಯುತ್ತಮವಾಗಿ ಆಡುವ ಬ್ಯಾಟರ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ನಲ್ಲಿ ದಶಕದ ಅನುಭವ ಇರುವ ನರೈನ್ಗೆ ನಿಮ್ಮ ಬೌಲಿಂಗ್ಗೆ ಉತ್ತಮವಾಗಿ ಯಾರು ಆಡುವುದು ಎಂದು ಕೇಳಿದ್ದಕ್ಕೆ ಸಚಿನ್ ಬಿಟ್ಟು ಸೆಹ್ವಾಗ್ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ನಾನು ಬಹುಶಃ ವೀರೇಂದ್ರ ಸೆಹ್ವಾಗ್ ಎಂದು ಹೇಳಬೇಕಾಗಿದೆ. ಅವರಿಗೆ ಬೌಲಿಂಗ್ ಮಾಡುವಾಗಲೆಲ್ಲ ನನಗೆ ಕಠಿಣ ಎನಿಸುತ್ತಿತ್ತು. ಏಕೆಂದರೆ, ಅವರು ತಂಡ ಯಾವುದೇ ಪರಿಸ್ಥಿತಿಯಲ್ಲಿದ್ದರೂ ಯಾವಾಗಲೂ ಪಂದ್ಯವನ್ನು ಮುಂದುವರಿಸಿಕೊಂಡು ಹೋಗುವ ವ್ಯಕ್ತಿಯಾಗಿದ್ದರು ಮತ್ತು ಅವರು ಬಯಸಿದ ರೀತಿಯಲ್ಲಿಯೇ ಬ್ಯಾಟಿಂಗ್ ಮಾಡುತ್ತಿದ್ದರು ಎಂದು ಕೆಕೆಆರ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕೆಕೆಆರ್ ಬಿಟ್ಟು ಬೇರೆ ಫ್ರಾಂಚೈಸಿಯಲ್ಲಿ ಆಡಲು ಬಯಸಲ್ಲ : ಸೋಮವಾರ ರಾಜಸ್ಥಾನ್ ವಿರುದ್ಧ 150ನೇ ಐಪಿಎಲ್ ಪಂದ್ಯವನ್ನಾಡಲಿರುವ ನರೈನ್ ತಾವೂ ತಮ್ಮ ವೃತ್ತಿ ಜೀವನವನ್ನು ಕೆಕೆಆರ್ ಜೊತೆಯಲ್ಲಿಯೇ ಅಂತ್ಯಗೊಳಿಸು ಬಯಸುತ್ತೇನೆ ಮತ್ತು ಅದು ಶ್ರೇಷ್ಠ ಸಾಧನೆ ಕೂಡ ಎಂದಿದ್ದಾರೆ.
ನಾನು ವೆಂಕಿ(ಕೆಕೆಆರ್ ಸಿಇಒ) ಅವರಿಗೆ ನಾನು ಆಶಾದಾಯಕವಾಗಿ ಬೇರೆ ಫ್ರಾಂಚೈಸಿಯಲ್ಲಿ ಆಡಲು ಬಯಸುವುದಿಲ್ಲ ಎಂದು ಹೇಳುತ್ತಿರುತ್ತೇನೆ. ಕೆಕೆಆರ್ನಲ್ಲಿಯೇ ಇರಲು ನನಗೆ ಇಷ್ಟ. ಆಶಾದಾಯಕವಾಗಿ, ನಾನು ಇಲ್ಲಿಯೇ ಆರಂಭಿಸಿದ್ದೇನೆ ಮತ್ತು ಇಲ್ಲಿ ಅಂತ್ಯಗೊಳಿಸಲು ಬಯಸುತ್ತೇನೆ. ನನ್ನ ಪ್ರಕಾರ ಇದು ಶ್ರೇಷ್ಠ ಸಾಧನೆ.
ನೀವು ವಿದೇಶಿ ಆಟಗಾರ ಒಂದೇ ಫ್ರಾಂಚೈಸಿಯಲ್ಲಿ ಹೆಚ್ಚು ವರ್ಷಗಳ ಕಾಲ ಆಡಿರುವುದನ್ನು ನೀವು ಹೆಚ್ಚಾಗಿ ನೋಡಿರುವುದಿಲ್ಲ. ನಾನು ಕೆಲವೇ ಕೆಲವರಲ್ಲಿ ಒಬ್ಬ, ನಾನು ಭವಿಷ್ಯದಲ್ಲೂ ಕೆಕೆಆರ್ ಪರವೇ ಆಡಲಿದ್ದೇನೆ ಎಂಬ ಭರವಸೆಯಿದೆ. ನಿವೃತ್ತಿ ನಂತರವೂ ನಾನೂ ಇದೇ ತಂಡಕ್ಕೆ ಕೋಚ್ ಆಗುವೆ. ನನಗಾಗಿ ಇಲ್ಲಿ ಬಾಗಿಲು ತೆರೆದಿರುತ್ತದೆ ಎಂಬುದರ ಬಗ್ಗೆ ಖಾತ್ರಿಯಿದೆ ಎಂದಿದ್ದಾರೆ.
ಇದನ್ನೂ ಓದಿ:ಈ ಅನ್ಕ್ಯಾಪ್ಡ್ ಆಟಗಾರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿರಲು ಅರ್ಹ: ಹರ್ಭಜನ್ ಸಿಂಗ್