ETV Bharat / sports

ರಿಷಭ್ ಪಂತ್​ ಭವಿಷ್ಯದಲ್ಲಿ ಭಾರತದ ನಾಯಕನಾಗಲಿದ್ದಾರೆ: ಸುನೀಲ್ ಗವಾಸ್ಕರ್​ - ಭಾರತದ ಭವಿಷ್ಯದ ನಾಯಕ ರಿಷಭ್ ಪಂತ್

ಡೆಲ್ಲಿ ತಂಡದ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡು ಐಪಿಎಲ್​ನಿಂದ ಹೊರ ಬಿದ್ದಿದ್ದರಿಂದ ರಿಷಬ್ ಪಂತ್​ಗೆ ನಾಯಕತ್ವವಹಿಸಲಾಗಿತ್ತು. ಅವರು ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದರು. ಪಂತ್ ನಾಯಕನಾಗಿ ಕಲಿತು ಸಾಕಷ್ಟು ಬುದ್ದಿವಂತನಾಗಿದ್ದಾರೆ. ಆತ ಐಪಿಎಲ್​ನಲ್ಲಿ ನಾಯಕತ್ವದ ಕಿಚ್ಚನ್ನು ತೋರಿಸಿದ್ದಾರೆ ಎಂದು ಸ್ಪೋರ್ಟ್ಸ್​ ಸ್ಟಾರ್​ಗೆ ಬರೆದ ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.

ರಿಷಭ್ ಪಂತ್​ ಭವಿಷ್ಯದಲ್ಲಿ ಭಾರತದ ನಾಯಕನಾಗಲಿದ್ದಾರೆ

author img

By

Published : May 13, 2021, 7:27 PM IST

ಮುಂಬೈ: 2021ರ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಯುವ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್​ ಭವಿಷ್ಯದಲ್ಲಿ ಒಬ್ಬ ಅದ್ಭುತ ನಾಯಕನಾಗಲಿದ್ದಾನೆ ಎಂದು ದಂತಕತೆ ಸುನೀಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.

ಡೆಲ್ಲಿ ತಂಡದ ಖಾಯಂ ನಾಯಕ ಶ್ರೇಯಸ್ ಅಯ್ಯರ್ ಗಾಯಗೊಂಡು ಐಪಿಎಲ್​ನಿಂದ ಹೊರಬಿದ್ದಿದ್ದರಿಂದ ರಿಷಬ್ ಪಂತ್​ಗೆ ನಾಯಕತ್ವವಹಿಸಲಾಗಿತ್ತು. ಅವರು ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದರು. ಪಂತ್ ನಾಯಕನಾಗಿ ಕಲಿತು ಸಾಕಷ್ಟು ಬುದ್ದಿವಂತನಾಗಿದ್ದಾರೆ. ಆತ ಐಪಿಎಲ್​ನಲ್ಲಿ ನಾಯಕತ್ವದ ಕಿಚ್ಚನ್ನು ತೋರಿಸಿದ್ದಾನೆ ಎಂದು ಸ್ಪೋರ್ಟ್ಸ್​ ಸ್ಟಾರ್​ಗೆ ಬರೆದ ತಮ್ಮ ಅಂಕಣದಲ್ಲಿ ತಿಳಿಸಿದ್ದಾರೆ.

"ಯಂಗ್ ರಿಷಭ್ ಪಂತ್ ನೇತೃತ್ವದ ತಂಡ ದೆಹಲಿ ಕ್ಯಾಪಿಟಲ್ಸ್ ಎದ್ದುಕಾಣುವ ಒಂದು ತಂಡವಾಗಿ ನಿಂತಿತ್ತು. ಆರನೇ ಪಂದ್ಯದ ಸಮಯದಲ್ಲಿ ನಾಯಕತ್ವ ನಿರ್ವಹಣೆ ಬಗ್ಗೆ ಕೇಳಿದಾಗ, ಅವರು ಆಯಾಸಗೊಂಡವರಂತೆ ಕಂಡುಬಂದಿದ್ದನ್ನು ನೀವು ನೋಡಿರಬಹುದು. ಆಟದ ನಂತರದ ಸಮಾರಂಭದಲ್ಲಿ ಪ್ರತಿಯೊಬ್ಬ ನಿರೂಪಕರು ಅವರಿಗೆ ಅದೇ ಪ್ರಶ್ನೆ ಕೇಳುತ್ತಿದ್ದರು. ಆದರೆ ಮುಂದೆ ಆತ ಇದೇ ಕಿಡಿಯನ್ನು ತೋರಿಸುತ್ತಾ ತಮ್ಮ ನೈಸರ್ಗಿಕ ಆಟವನ್ನು ಆಡಿದರೆ ಖಂಡಿತ ಆತ ಘರ್ಜಿಸುವ ಬೆಂಕಿಯಾಗಬಹುದು" ಎಂದು ಗವಾಸ್ಕರ್​ ಹೇಳಿದ್ದಾರೆ.

ಹೌದು, ಅವನು ಕೆಲವು ತಪ್ಪುಗಳನ್ನು ಮಾಡುತ್ತಾನೆ; ಯಾವ ಕ್ಯಾಪ್ಟನ್ ಮಾಡುವುದಿಲ್ಲ? ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.

ಆದರೆ, ಐಪಿಎಲ್​ ಪಂದ್ಯಗಳಲ್ಲಿ ಅವರು ತೋರಿದ ಬುದ್ದಿವಂತಿಕೆ ಕಲಿಯುವುದಕ್ಕೆ ಸಾಕಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಹೊರಬರಲು ಅವರು ತಮ್ಮದೇ ಆದ ವಿಧಾನವನ್ನು ಕಂಡುಕೊಳ್ಳುತ್ತಿದ್ದರು. ಆದ್ದರಿಂದ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಅವರು ಖಂಡಿತ ಭವಿಷ್ಯದಲ್ಲಿ ಭಾರತವನ್ನು ಮುನ್ನಡೆಸುವವರಲ್ಲಿ ಒಬ್ಬನಾಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅದನ್ನು ಅವರು ಈಗಾಗಲೇ ನಿರೂಪಿಸಿದ್ದಾರೆ ಎಂದು ಟೀಮ್​ ಇಂಡಿಯಾ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಪಂತ್ ಟೂರ್ನಿಯಲ್ಲಿ 8 ಇನ್ನಿಂಗ್ಸ್​ಗಳಿಂದ 131ರ ಸ್ಟ್ರೈಕ್​ರೇಟ್​ನಲ್ಲಿ 213 ರನ್​ಗಳಿಸಿದ್ದರು. ಇವರ ನೇತೃತ್ವದ ಡೆಲ್ಲಿ ತಂಡ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲುಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು. ಆದರೆ, ಕೋವಿಡ್ 19 ಕಾರಣ 14ನೇ ಆವೃತ್ತಿಯ ಐಪಿಎಲ್ ರದ್ದುಗೊಂಡಿದ್ದರಿಂದ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಆಗೆಯೇ ಉಳಿದುಕೊಂಡಿದೆ.

ಇದನ್ನು ಓದಿ:ಭಾರತ ಆಸ್ಟ್ರೇಲಿಯಾವನ್ನು ಹಿಂದಿಕ್ಕಲು, ಯುವ ಆಟಗಾರರು ಬೆಳೆಯಲು ದ್ರಾವಿಡ್​ ಕಾರಣ: ಗ್ರೇಗ್ ಚಾಪೆಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.