ವಿರಾಟ್ ಕೊಹ್ಲಿ ಯಾವುದೇ ಕಾರಣಕ್ಕೂ ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ರೇಕ್ ತೆಗೆದುಕೊಳ್ಳಬಾರದು. ಡ್ರೆಸ್ಸಿಂಗ್ ರೂಂನಲ್ಲಿ ಸುಮ್ಮನೆ ಕುಳಿತುಕೊಳ್ಳುವುದರಿಂದ ಫಾರ್ಮ್ ಬರುವುದಿಲ್ಲ. ಫಾರ್ಮ್ ಮರಳಿ ಪಡೆಯಲು ಹೆಚ್ಚು ಹೆಚ್ಚು ಕ್ರಿಕೆಟ್ ಆಡಬೇಕು ಎಂದು ಭಾರತ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ 3ನೇ ಬಾರಿಗೆ ಸೊನ್ನೆ ಸುತ್ತಿ ಕ್ರಿಕೆಟ್ ವಲಯದಲ್ಲಿ ತೀವ್ರ ನಿರಾಶೆ ಮ್ತತು ಅಚ್ಚರಿ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ತನ್ನ ಕ್ರಿಕೆಟ್ ಬದುಕಿನ ಅತ್ಯಂತ ಕಳಪೆ ಲಯದಲ್ಲಿದ್ದಾರೆ. ಇದು ಕ್ರಿಕೆಟ್ ಪ್ರಿಯರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಭಾರತ ತಂಡದ ಅನುಭವಿ ಕ್ರಿಕೆಟಿಗ ವ್ಯಾಪಕ ಟೀಕೆಗಳಿಗೂ ಗುರಿಯಾಗಿದ್ದಾರೆ. ಆರ್‌ಸಿಬಿ ತಂಡದ ಮಾಜಿ ನಾಯಕ ಈ ಬಾರಿಯ ಐಪಿಎಲ್‌ನ ಈವರೆಗಿನ 11 ಪಂದ್ಯಗಳಲ್ಲಿ ಕೇವಲ 216 ರನ್‌ಗಳನ್ನಷ್ಟೇ ಕಲೆ ಹಾಕಲು ಶಕ್ತರಾಗಿದ್ದಾರೆ. ಇದು ಪ್ರತಿ ಪಂದ್ಯದಲ್ಲಿ ಸರಾಸರಿ 20ರಷ್ಟಿದೆ. ನಿನ್ನೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ ಅವರು ಜಗದೀಶ್ ಸುಚಿತ್ ಅವರ ಮೊದಲ ಎಸೆತದಲ್ಲೇ ಔಟಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಗವಾಸ್ಕರ್, ಅವರ ವಿರಾಮ ಎನ್ನುವುದು ಭಾರತ ಪ್ರತಿನಿಧಿಸುವ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅನ್ವಯಿಸದೇ ಇದ್ದರೆ ಸಾಕು. ಭಾರತದ ಪಂದ್ಯಗಳಿಗೆ ಯಾವತ್ತೂ ಮೊದಲ ಪ್ರಾಶಸ್ತ್ಯವಿರಬೇಕು. ಇದು ಅಷ್ಟು ಸರಳವಾಗಿದೆ' ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳಬಹುದಿತ್ತು ಎಂದೂ ತಿಳಿಸಿದ್ದಾರೆ. 'ಸುಮ್ಮನೆ ಕುಳಿತುಕೊಳ್ಳುವುದರಿಂದ ನಿಮ್ಮ ಫಾರ್ಮ್ ಮರಳಿ ಬರುವುದಿಲ್ಲ. ನೀವು ಹೆಚ್ಚು ಕ್ರಿಕೆಟ್ ಆಡಬೇಕು. ಆ ಮೂಲಕವೇ ನಿಮ್ಮ ಫಾರ್ಮ್ ಮರಳಿ ಬರುವ ಸಾಧ್ಯತೆ ಹೆಚ್ಚು ಎನ್ನುವುದನ್ನು ಗವಾಸ್ಕರ್ ಒತ್ತಿ ಹೇಳಿದರು.
ಓದಿ: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 5,000 ಎಸೆತ ಎದುರಿಸಿದ ಮೊದಲ ಕ್ರಿಕೆಟಿಗ