ಕೇಪ್ಟೌನ್: ಬ್ಯಾಟಿಂಗ್ನಲ್ಲಿ ವಿಫಲರಾದರೂ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ಭಾರತ ತಂಡ ಸರಣಿಯಲ್ಲಿ ಮೇಲುಗೈ ಸಾಧಿಸುತ್ತಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅತಿಥೇಯರನ್ನು 210 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಕೊಹ್ಲಿ ಪಡೆಯ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ವೇಗಿ ಬುಮ್ರಾ ಪ್ರದರ್ಶನ ಅತಿಥೇಯ ತಂಡಕ್ಕೆ ದೊಡ್ಡ ತಲೆನೋವು ತಂದಿದೆ ಎಂದು ತಿಳಿಸಿದ್ದಾರೆ.
ಭಾರತ 223ಕ್ಕೆ ಆಲೌಟ್ ಆದ ನಂತರ ಇನ್ನಿಂಗ್ಸ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಬುಮ್ರಾ ಆರಂಭದಲ್ಲೇ ಆಘಾತ ನೀಡಿದ್ದರು. ಅವರು ಮೊದಲ ದಿನವೇ ಕಳೆದ ಪಂದ್ಯದ ಹೀರೋ ಡೀನ್ ಎಲ್ಗರ್ ವಿಕೆಟ್ ಪಡೆದಿದ್ದರು.
ಎರಡನೇ ದಿನವೂ ಅತಿಥೇಯರ ಪಾಲಿಗೆ ಸಿಂಹಸ್ವಪ್ನರಾದ ಬುಮ್ರಾ ತಮ್ಮ ಮೊದಲ ಓವರ್ನಲ್ಲಿ ಐಡೆನ್ ಮಾರ್ಕ್ರಮ್ ವಿಕೆಟ್ ಪಡೆದರು. ಇನ್ನಿಂಗ್ಸ್ ಪೂರ್ತಿ ಹರಿಣ ಪಡೆಯನ್ನು ಕಾಡಿದ ಅವರು ಒಟ್ಟಾರೆ 42 ರನ್ ನೀಡಿ 5 ವಿಕೆಟ್ ಪಡೆದರು.
-
BOOM BOOM 🔥
— BCCI (@BCCI) January 12, 2022 " class="align-text-top noRightClick twitterSection" data="
7th 5-wkt haul in Test cricket for @Jaspritbumrah93 👏👏#TeamIndia #SAvIND pic.twitter.com/CYhZD86JsY
">BOOM BOOM 🔥
— BCCI (@BCCI) January 12, 2022
7th 5-wkt haul in Test cricket for @Jaspritbumrah93 👏👏#TeamIndia #SAvIND pic.twitter.com/CYhZD86JsYBOOM BOOM 🔥
— BCCI (@BCCI) January 12, 2022
7th 5-wkt haul in Test cricket for @Jaspritbumrah93 👏👏#TeamIndia #SAvIND pic.twitter.com/CYhZD86JsY
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ನಂತರ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿನ ಸಂವಾದದಲ್ಲಿ ಮಾತನಾಡುವ ವೇಳೆ ಗವಾಸ್ಕರ್ಸ" ಸರಣಿಯನ್ನು ನಿರ್ಣಯಿಸುವ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಎಚ್ಚೆರಿಕೆ ವಹಿಸುತ್ತಾರೆ ಎಂದು ಹೇಳಿದ್ದಾರೆ.
" ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ ಹೆಚ್ಚು ಎಚ್ಚರಿಕೆ ವಹಿಸುವ ಬೌಲರ್ ಎಂದರೆ ಬುಮ್ರಾ, ಜಸ್ಪ್ರೀತ್ ಬುಮ್ರಾ ಏನು ಮಾಡಬಹುದು ಎಂಬುದನ್ನ ನೀವೆ ನೋಡಿದ್ದೀರಾ. ಆತ ಸ್ಲೋವರ್ ಡಿಲೆವರಿ ಮಾಡಬಲ್ಲರು. ಡೀನ್ ಎಲ್ಗರ್ ವಿಕೆಟ್ ಪಡೆದುಕೊಂಡಿದ್ದನ್ನು ನೋಡಿದರೆ ಎಡಗೈ ಬ್ಯಾಟರ್ಗಳು ಆತನ ಬೌಲಿಂಗ್ನಲ್ಲಿ ಹೆಚ್ಚು ಎಸೆತಗಳನ್ನು ಬಿಟ್ಟು ಬಿಡಲು ಪ್ರಯತ್ನಿಸುತ್ತಾರೆ" ಎಂದು ಗವಾಸ್ಕರ್ ಬುಮ್ರಾ ಬೌಲಿಂಗ್ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಮ್ರಾ ವೇಗದ ಯಾರ್ಕರ್, ನಿಧಾನಗತಿಯ ಯಾರ್ಕರ್ಗಳನ್ನು ಹೊಂದಿದ್ದಾರೆ. ಜೊತೆಗೆ ತುಂಬಾ ಮೊನಚಾದ ಬೌನ್ಸರ್ಗಳನ್ನು ಅತ್ಯುತ್ತಮವಾಗಿ ಮಾಡಬಲ್ಲರು ಎಂದು ಗವಾಸ್ಕರ್ ಬುಮ್ರಾ ಏಕೆ ಪರಿಣಾಮಕಾರಿ ಬೌಲರ್ ಎಂಬುದನ್ನು ತಮ್ಮದೇ ಆದ ಗ್ರಹಿಕೆಯಿಂದ ವಿವರಿಸಿದ್ದಾರೆ.
ನಿನ್ನೆ ಎಲ್ಗರ್ ವಿಕೆಟ್ ಪಡೆದಿದ್ದ ಬುಮ್ರಾ ಇಂದು ಮಾರ್ಕ್ರಮ್, ಕೀಗನ್ ಪೀಟರ್ಸನ್, ಮಾರ್ಕೊ ಜಾನ್ಸನ್ ಮತ್ತು ಲುಂಗಿ ಎಂಗಿಡಿ ವಿಕೆಟ್ ಪಡೆದರು.
ಇದನ್ನೂ ಓದಿ:ಬ್ಯಾಟಿಂಗ್ನಲ್ಲಿ ಮಿಸ್, ಫೀಲ್ಡಿಂಗ್ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ