ಮುಂಬೈ: ಭಾರತ ತಂಡದ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಕ್ರಿಕೆಟ್ ಮೈದಾನದಲ್ಲೇ ಆಗಲಿ ಅಥವಾ ಕಮೆಂಟರಿ ಮಾಡುವಾಗಲೇ ಆಗಲಿ ಅವರಿಂದ ಹೊರಡುವ ಮಾತುಗಳು ಜನರನ್ನು ಆಕರ್ಷಿಸುವಂತಿರುತ್ತವೆ. ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಗವಾಸ್ಕರ್ ವಿಶೇಷ ವಿಷಯದೊಂದಿಗೆ ಹಾಸ್ಯ ಚಟಾಕಿ ಹಾರಿಸಿದರು.
-
#SunnyGavaskar demands the Kohinoor 😂 pic.twitter.com/TyE95ZqNFT
— Mohit Dinodia (@MohitDinodia) April 10, 2022 " class="align-text-top noRightClick twitterSection" data="
">#SunnyGavaskar demands the Kohinoor 😂 pic.twitter.com/TyE95ZqNFT
— Mohit Dinodia (@MohitDinodia) April 10, 2022#SunnyGavaskar demands the Kohinoor 😂 pic.twitter.com/TyE95ZqNFT
— Mohit Dinodia (@MohitDinodia) April 10, 2022
ಪಂದ್ಯದ ವಿರಾಮದ ವೇಳೆ ನೇರ ಪ್ರಸಾರದಲ್ಲಿ ಮುಂಬೈನಲ್ಲಿ ಸುಂದರವಾಗಿ ಮಿಂಚುತ್ತಿದ್ದ ಮರೈನ್ ಡ್ರೈವ್ ತೋರಿಸುತ್ತಿರುವಾಗ, ಬ್ರಿಟಿಷ್ ಕಮೆಂಟೇಟರ್ ಅಲನ್ ವಿಲ್ಕಿನ್ಸ್, ಮರೈನ್ ಡ್ರೈವ್ ಅನ್ನು ಬ್ರಿಟನ್ ಮಹಾರಾಣಿಯ ನೆಕ್ಲೆಸ್ಗೆ ಹೋಲಿಸಿದರು. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಗವಾಸ್ಕರ್, 'ನಾವು ಈಗಲೂ ನಮ್ಮ ಕೊಹಿನೂರ್ ಡೈಮಂಡ್ಸ್ಗಾಗಿ ಕಾಯುತ್ತಿದ್ದೇವೆ' ಎಂದು ನಗೆ ಚಟಾಕಿ ಹಾರಿಸಿದರು.
ಈ ಮಾತಿನ ನಂತರ ಇಬ್ಬರೂ ನಗೆಗಡಲಲ್ಲಿ ತೇಲಾಡಿದರು. ಅಷ್ಟಕ್ಕೆ ನಿಲ್ಲಿಸದ ಗವಾಸ್ಕರ್, ವಿಲ್ಕಿನ್ಸ್ಗೆ, 'ನೀವು ವಿಶೇಷ ಪ್ರಭಾವವನ್ನು ಹೊಂದಿದ್ದರೆ, ಬೆಲೆಯಿಲ್ಲದ ವಜ್ರವನ್ನು ಹಿಂದಿರುಗಿಸಲು ಬ್ರಿಟಿಷ್ ಸರ್ಕಾರವನ್ನು ವಿನಂತಿಸಿ' ಎಂದು ತಿಳಿಸಿದರು. ಇಬ್ಬರು ಕಮೆಂಟೇಟರ್ಗಳ ಮಾತುಕತೆ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ಗವಾಸ್ಕರ್ ಹಾಸ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಜಡೇಜಾ ಅಲ್ಲ, ಧೋನಿ ನಂತರ ಈತ ಸಿಎಸ್ಕೆ ನಾಯಕನಾಗಬೇಕಿತ್ತು: ರವಿ ಶಾಸ್ತ್ರಿ