ETV Bharat / sports

'ಕ್ರಿಕೆಟ್​ ದೇವರ' ದೇಗುಲ ನಿರ್ಮಿಸಲಿರುವ ಸುಧೀರ್​... ಉದ್ಘಾಟನೆ ಮಾಡಲು ಸಚಿನ್​ಗೆ ಆಹ್ವಾನ! - ಸಚಿನ್ ತೆಂಡೂಲ್ಕರ್​ಗೋಸ್ಕರ ದೇವಾಲಯ

ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ ಅವರ ಅಭಿಮಾನಿಯಾಗಿರುವ ಸುಧೀರ್ ಕುಮಾರ್ ಇದೀಗ ಅವರಿಗೋಸ್ಕರ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ.

sudhir
sudhir
author img

By

Published : Jul 16, 2021, 3:10 AM IST

Updated : Jul 16, 2021, 7:18 AM IST

ಮುಜಾಫರಪುರ್​(ಬಿಹಾರ): ಭಾರತದ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಉತ್ಕಟ ಅಭಿಮಾನಿ ಸುಧೀರ್ ಕುಮಾರ್​ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಅವರಿಗೋಸ್ಕರ ಶೀಘ್ರದಲ್ಲೇ ಭವ್ಯ ದೇವಾಲಯ ನಿರ್ಮಾಣ ಮಾಡುವುದಾಗಿ ಸುಧೀರ್ ಹೇಳಿಕೊಂಡಿದ್ದಾರೆ. ಜತೆಗೆ ಅದರ ಉದ್ಘಾಟನೆಗೆ ಖುದ್ದಾಗಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ ಅವರಿಗೆ ಆಹ್ವಾನ ನೀಡಲಿದ್ದಾರೆ.

'ಕ್ರಿಕೆಟ್​ ದೇವರ' ದೇಗುಲ ನಿರ್ಮಿಸಲಿರುವ ಸುಧೀರ್

ಮುಜಾಫರಪುರ್​​ನಲ್ಲಿ ಕ್ರಿಕೆಟ್​​ ದೇವರು ಸಚಿನ್ ತೆಂಡೂಲ್ಕರ್​ಗೋಸ್ಕರ ದೇವಾಲಯ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿರುವ ಸುಧೀರ್​, ಈಗಾಗಲೇ ದೇವಾಲಯದ ರೂಪರೇಖೆ ಸಿದ್ಧಪಡಿಸಲು ಆರಂಭ ಮಾಡಿರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಈಟಿವಿ ಭಾರತ ಜೊತೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಮಿತಾಬ್​ ಬಚ್ಚನ್​, ರಜನಿಕಾಂತ್​​ ಅವರ ದೇವಾಲಯ ನಿರ್ಮಾಣ ಮಾಡಬಹುದು. ಆದರೆ ಸಚಿನ್ ತೆಂಡೂಲ್ಕರ್​ ದೇವಾಲಯ ಏಕೆ ನಿರ್ಮಾಣ ಮಾಡಬಾರದು ಎಂದು ಪ್ರಶ್ನೆ ಮಾಡಿರುವ ಸುಧೀರ್​, ಶತಮಾನದ ಶ್ರೇಷ್ಠ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಅವರಿಗೋಸ್ಕರ ಅಮೃತಶಿಲೆಯ ಪ್ರತಿಮೆಯೊಂದಿಗೆ ಬಿಹಾರದ ಮುಜಫರಪುರ್​ದಲ್ಲಿ ಭವ್ಯ ದೇವಾಲಯ ನಿರ್ಮಿಸಲು ನಿರ್ಧರಿಸಿದ್ದಾರೆ. ದೇವಾಲಯ ಉದ್ಘಾಟಿಸಲು 'ಸಚಿನ್​ ಸರ್​​' ಅವರನ್ನ ಬಿಹಾರಕ್ಕೆ ಆಹ್ವಾನ ಮಾಡುವುದಾಗಿ ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಸಚಿನ್​ ತೆಂಡೂಲ್ಕರ್ ಸರ್​​ ಬಿಹಾರಕ್ಕೆ ಆಗಮಿಸಿಲ್ಲ. ಈ ಕಾರ್ಯಕ್ರಮ ಉದ್ಘಾಟನೆ ಮಾಡಲು ಅವರು ಬರುತ್ತಾರೆಂಬ ನಂಬಿಕೆ ಇದೆ ಎಂದಿದ್ದಾರೆ.

ಇದನ್ನೂ ಓದಿರಿ: ಗಡ್ಡ ತೆಗಿಯಂಗಿಲ್ಲ, ಒಂಟಿಯಾಗಿ ಮಹಿಳೆ ಓಡಾಡಂಗಿಲ್ಲ, ಭಯೋತ್ಪಾದಕರಿಗೂ ಧೂಮಪಾನ ವರ್ಜಿತ: ಇದು ತಾಲಿಬಾನ್ ಕಾನೂನು!

ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಹಾಗೂ ಕ್ರೀಡಾಭಿಮಾನಿಗಳು ಇಲ್ಲದೇ ಪಂದ್ಯಗಳು ನಡೆಯುತ್ತಿರುವ ಕಾರಣ ಸದ್ಯ ಸುಧೀರ್​ ಕ್ರಿಕೆಟ್​ ಸ್ಟೇಡಿಯಂಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ಪ್ರತಿಯೊಂದು ಪಂದ್ಯದಲ್ಲೂ ಅವರು ಭಾರತ ತಂಡಕ್ಕೆ ಬೆಂಬಲ ಸೂಚಿಸುತ್ತಿದ್ದರು.

Sudhir kumar
ದೇಗುಲ ನಿರ್ಮಾಣಕ್ಕೆ ಮುಂದಾದ ಸುಧೀರ್​

ಪ್ರತಿಯೊಂದು ಪಂದ್ಯ ವೀಕ್ಷಣೆ ಮಾಡಲು ಮೂರು ಕೆಲಸ ಕಳೆದುಕೊಂಡಿರುವ ಸುಧೀರ್​, 2005ರಲ್ಲಿ ಪಾಕ್​-ಭಾರತ ನಡುವಿನ ಪಂದ್ಯ ವೀಕ್ಷಣೆಗೋಸ್ಕರ ರೈಲ್ವೆಯಲ್ಲಿನ ಟಿಕೆಟ್ ಕಲೆಕ್ಟರ್ ಹುದ್ದೆ ಸಹ ಕಳೆದುಕೊಂಡಿದ್ದಾರೆ.

Last Updated : Jul 16, 2021, 7:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.