ಬ್ರಿಸ್ಬೇನ್ : ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅನಿರ್ಧಿಷ್ಟಾವಧಿಗೆ ವಿಶ್ರಾಂತಿಯಲ್ಲಿದ್ದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಆ್ಯಶಸ್ ಸರಣಿ ಮೊದಲ ಪಂದ್ಯಕ್ಕೆ ಇಸಿಬಿ ಘೋಷಿಸಿರುವ 12 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆ್ಯಶಸ್ ಟೆಸ್ಟ್ ಸರಣಿ ಡಿಸೆಂಬರ್ 8ರಿಂದ ಬ್ರಿಸ್ಬೇನ್ನಲ್ಲಿ ಆರಂಭವಾಗಲಿದೆ.
ಜೂನ್ನಲ್ಲಿ ಬೆನ್ ಸ್ಟೋಕ್ಸ್ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್ಗಳ ಸರಣಿ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ಆ್ಯಶಸ್‌ಗೆ ಮರಳಿದ್ದಾರೆ. ಟಾಸ್ ವೇಳೆ ಆಡುವ 11ರ ಬಳಗದಲ್ಲಿ ಸ್ಟೋಕ್ಸ್ರನ್ನು ಆಯ್ಕೆ ಮಾಡುವುದನ್ನ ನಾಯಕ ರೂಟ್ ನಿರ್ಧರಿಸಲಿದ್ದಾರೆ.
ವೇಗಿ ಸಾಲ್ವಾರ್ಟ್ ಮತ್ತು ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದಿರುವ ಜೇಮ್ಸ್ ಆ್ಯಂಡರ್ಸನ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆದಿಲ್ಲ."ಜಿಮ್ಮಿ ಯಾವುದೇ ಗಾಯಕ್ಕೆ ಒಳಗಾಗಿಲ್ಲ. 6 ವಾರಗಳಲ್ಲಿ 5 ಪಂದ್ಯಗಳನ್ನಾಡಬೇಕಿದೆ. ಹಾಗಾಗಿ, ಕೆಲಸದ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಇಂಗ್ಲೆಂಡ್ ತಂಡದ ವಕ್ತಾರ ಹೇಳಿದ್ದಾರೆ.
2019ರ ಆ್ಯಶಸ್ ವೇಳೆ ಆ್ಯಂಡರ್ಸನ್ ಮೊದಲ ಪಂದ್ಯದಲ್ಲೇ ಕಣಕಾಲು ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರ ಬಿದ್ದಿದ್ದರು. ಇಡೀ ಸರಣಿಯಲ್ಲಿ ಇಂಗ್ಲೆಂಡ್ ಒಬ್ಬ ಬೌಲರ್ ಕೊರತೆಯನ್ನು ಅನುಭವಿಸಿತ್ತು. ಹಾಗಾಗಿ, ಈ ಬಾರಿ ಸ್ಟಾರ್ ಬೌಲರ್ ಬಗ್ಗೆ ವಿಶೇಷ ಕಾಳಜಿವಹಿಸುತ್ತಿದೆ.
ಮೊದಲ ಆ್ಯಶಸ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡ : ಜೋ ರೂಟ್ (ನಾಯಕ), ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಹಸೀಬ್ ಹಮೀದ್, ಜ್ಯಾಕ್ ಲೀಚ್, ಡೇವಿಡ್ ಮಲನ್, ಒಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.
ಇದನ್ನೂ ಓದಿ:ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ