ಲಂಡನ್ : ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಭಾರತ ವಿರುದ್ಧ ತವರಿನಲ್ಲಿ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 2 ಪಂದ್ಯಗಳಿಗೆ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರ್ರನ್ ರೆಡ್ ಬಾಲ್ ತಂಡಕ್ಕೆ ಮರಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿ 8 ವರ್ಷಗಳ ಹಳೆಯ ವಿವಾದಾತ್ಮಕ ಟ್ವೀಟ್ ಪ್ರಕರಣದಲ್ಲಿ ತಂಡದಿಂದ ಅಮಾನತುಗೊಂಡಿದ್ದ ಆಲ್ಲಿ ರಾಬಿನ್ಸನ್ಗೂ ಅವಕಾಶ ನೀಡಲಾಗಿದೆ.
ಸ್ಟಾರ್ ಬೌಲರ್ಗಳಾದ ಜೋಫ್ರಾ ಆರ್ಚರ್ ಮತ್ತು ಕ್ರಿಸ್ ವೋಕ್ಸ್ ಗಾಯಗಳಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಮೊದಲೆರಡು ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಆದರೆ, ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆಯಿದೆ. ಇನ್ನು, ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳು ಮತ್ತು ಐದು ವೇಗದ ಬೌಲರ್‌ಗಳಿಗೆ ಅವಕಾಶ ನೀಡಲಾಗಿದೆ. ಆಗಸ್ಟ್ 4ರಿಂದ ನಾಟಿಂಗ್ಹ್ಯಾಮ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.
ಇಂಗ್ಲೆಂಡ್ 17 ಸದಸ್ಯರ ತಂಡ
ಜೋ ರೂಟ್ (ನಾಯಕ), ಜೋಸ್ ಬಟ್ಲರ್, ಜ್ಯಾಕ್ ಲೀಚ್, ಆಲಿ ಪೋಪ್, ಜ್ಯಾಕ್ ಕ್ರಾಲೆ, ಡಾಮ್ ಬೆಸ್, ಸ್ಯಾಮ್ ಕರ್ರನ್, ಆಲಿ ರಾಬಿನ್ಸನ್, ಹಸೀಬ್ ಹಮೀದ್, ಡಾಮ್ ಸಿಬ್ಲಿ, ಡಾನ್ ಲಾರೆನ್ಸ್, ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್.
ಇದನ್ನು ಓದಿ: Icc Rankings: ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರ 5ರಲ್ಲಿರುವ ಏಕಮಾತ್ರ ಬ್ಯಾಟ್ಸ್ಮನ್ ಕೊಹ್ಲಿ