ETV Bharat / sports

ಭಾರತ ವಿಶ್ವಕಪ್​ ಗೆಲ್ಲುವ ಪ್ರಬಲ ಸ್ಪರ್ಧಿ, ಬಲಶಾಲಿ ತಂಡ ಹೊಂದಿದೆ ಎಂದ ಸ್ಟೀವ್ ಸ್ಮಿತ್ - ಟೀಂ ಇಂಡಿಯಾ ವಿಶ್ವಕಪ್​

ಐಸಿಸಿ ಟಿ-20 ವಿಶ್ವಕಪ್​ ಗೆಲ್ಲುವ ಪ್ರಬಲ ಸ್ಫರ್ಧಿಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ ಎಂದು ಆಸ್ಟ್ರೇಲಿಯಾದ ಆಟಗಾರ ಸ್ಟೀವ್​ ಸ್ಮಿತ್​ ಹೇಳಿದ್ದಾರೆ.

Steve Smith
Steve Smith
author img

By

Published : Oct 21, 2021, 2:57 PM IST

ದುಬೈ: ಐಸಿಸಿ ಟಿ-20 ವಿಶ್ವಕಪ್​ ಮಹಾಸಮರ ಆರಂಭಗೊಂಡಿದ್ದು, ಟೀಂ ಇಂಡಿಯಾ ಅಕ್ಟೋಬರ್​​ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ. ಅದಕ್ಕೂ ಮೊದಲು ನಡೆದಿರುವ ಎರಡು ಅಭ್ಯಾಸ ಪಂದ್ಯಗಳಲ್ಲಿ ಗೆಲುವು ಮಾಡುವ ಮೂಲಕ ವಿರಾಟ್​ ಪಡೆ ಭರ್ಜರಿಯಾಗಿ ತಯಾರಾಗಿದೆ.

ಟೀಂ ಇಂಡಿಯಾದ ಬಗ್ಗೆ ಇದೀಗ ಆಸ್ಟ್ರೇಲಿಯಾದ ಆಟಗಾರ ಸ್ಟೀವ್​​ ಸ್ಮಿತ್​​​ ಮೆಚ್ಚುಗೆ ಮಾತುಗಳನ್ನಾಡಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದು, ವಿಶ್ವಕಪ್​ ಗೆಲ್ಲುವ ಉತ್ತಮ ಪ್ಲೇಯರ್​​ಗಳನ್ನು​​ ಹೊಂದಿದೆ ಎಂದು ಹೇಳಿದ್ದಾರೆ.

ಭಾರತ-ಆಸ್ಟ್ರೇಲಿಯಾ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಕಾಂಗರೂ ತಂಡದ ಪರ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟರ್​ ಸ್ಮೀವ್​ ಸ್ಮಿತ್​, ಪಂದ್ಯದ ಬಳಿಕ ಮಾತನಾಡಿದರು. ಈ ವೇಳೆ, ಭಾರತ ಟಿ-20 ವಿಶ್ವಕಪ್​ ಗೆಲ್ಲಲು ಅರ್ಹವಾಗಿದೆ ಎಂದಿದ್ದಾರೆ. ಭಾರತ ಅತ್ಯುತ್ತಮ ತಂಡವಾಗಿದ್ದು, ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಗಳಾಗಿದ್ದಾರೆ ಎಂದರು.

ಭಾರತೀಯ ಪ್ಲೇಯರ್ಸ್​ ಕಳೆದ ಕೆಲ ತಿಂಗಳಿಂದ ಈ ಪರಿಸ್ಥಿತಿಯಲ್ಲಿ ಆಡುತ್ತಿದ್ದು, ಈಗಷ್ಟೇ ಐಪಿಎಲ್​ ಮುಗಿದಿರುವ ಕಾರಣ ಇಲ್ಲಿನ ಪಿಚ್​​ಗಳ ಬಗ್ಗೆ ಅವರಿಗೆ ಸಂಪೂರ್ಣವಾಗಿ ಗೊತ್ತಿದೆ ಎಂದು ಸ್ಮಿತ್ ಹೇಳಿದರು.

ಇದನ್ನೂ ಓದಿರಿ: ರಿಷಭ್​ ಪಂತ್​ಗೆ ಮಾಸ್ಟರ್​ ಆದ ಧೋನಿ.. ವಿಕೆಟ್​ ಕೀಪಿಂಗ್​​ ಪಾಠ ಹೇಳಿಕೊಟ್ಟ ಮಾಹಿ

ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿದ್ದು, ರೋಹಿತ್ ಶರ್ಮಾ(60), ಕೆಎಲ್​ ರಾಹುಲ್​(39), ಸೂರ್ಯಕುಮಾರ್​ ಯಾದವ್​(38) ರನ್​ಗಳಿಕೆ ಮಾಡಿದರು.

ಪಂದ್ಯದ ವೇಳೆ ವಿರಾಟ್​​ ಕೊಹ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು. ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸ್ಟೀವ್​ ಸ್ಮಿತ್​​​​ 48 ಎಸೆತಗಳಲ್ಲಿ 57ರನ್​ಗಳಿಕೆ ಮಾಡಿದ್ದರು. ತಮ್ಮ ಬ್ಯಾಟಿಂಗ್​ ಬಗ್ಗೆ ಮಾತನಾಡಿದ ಅವರು, ನಾನು ಐಪಿಎಲ್​​ನಲ್ಲಿ ಹೆಚ್ಚಿನ ಪಂದ್ಯ ಆಡಲಿಲ್ಲ. ಆದರೆ ನೆಟ್ಸ್​​ನಲ್ಲಿ ಹೆಚ್ಚಿನ ಸಮಯ ಕಳೆದಿದ್ದೇನೆ. ಹೀಗಾಗಿ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಇದು ಸಹಕಾರಿಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.