ETV Bharat / sports

AUS vs WI Test: ಶತಕ ಸಿಡಿಸಿ ರೋಹಿತ್​, ಡಾನ್​ ಬ್ರಾಡ್ಮನ್​ ದಾಖಲೆ ಸರಿಗಟ್ಟಿದ ಸ್ಮಿತ್​ - ಸ್ಟೀವ್​ ಸ್ಮಿತ್​ ದಾಖಲೆ

ವೆಸ್ಟ್​ ಇಂಡೀಸ್ ವಿರುದ್ಧದ ಪರ್ತ್ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿರುವ ಆಸೀಸ್​ ಮಾಜಿ ನಾಯಕ ಸ್ಟೀವ್​ ಸ್ಮಿತ್​​ ಕೆಲ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

Steve Smith Equals Rohit Sharma, Don Bradman With 29th Test Century
ರೋಹಿತ್​, ಡಾನ್​ ಬ್ರಾಡ್ಮನ್​ ದಾಖಲೆ ಸರಿಗಟ್ಟಿದ ಸ್ಮಿತ್​
author img

By

Published : Dec 1, 2022, 12:00 PM IST

ಪರ್ತ್: ವೆಸ್ಟ್​ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್​ ಮೊತ್ತ ದಾಖಲಿಸುವತ್ತ ಸಾಗುತ್ತಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಮಾರ್ನಸ್​ ಲ್ಯಾಬುಶೇನ್ ದ್ವಿಶತಕ ಹಾಗೂ ಮಾಜಿ ನಾಯಕ ಸ್ಟೀವ್​ ಸ್ಮಿತ್​ ಭರ್ಜರಿ ಶತಕ (147*) ಗಳಿಸಿ ಆಸೀಸ್​ಗೆ ಮೇಲುಗೈ ಒದಗಿಸಿದ್ದಾರೆ. ಹಲವು ದಿನಗಳ ಬಳಿಕ ಮೂರಂಕಿ ಮೊತ್ತ ತಲುಪಿದ ಸ್ಮಿತ್​ ಕೆಲ ದಾಖಲೆಗಳನ್ನೂ ಬರೆದಿದ್ದಾರೆ.

ಪ್ರಸ್ತುತ ರೆಡ್ ಬಾಲ್ ಕ್ರಿಕೆಟ್​ನಲ್ಲಿ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾದ ಸ್ಟೀವ್​ ಸ್ಮಿತ್​ ಪರ್ತ್​ ಟೆಸ್ಟ್​ ಪಂದ್ಯದಲ್ಲಿ 29ನೇ ಶತಕ ದಾಖಲಿಸಿದ್ದಾರೆ. ಈ ಮೂಲಕ ಸ್ಮಿತ್ ಸುದೀರ್ಘ ಸ್ವರೂಪದ ಕ್ರಿಕೆಟ್​ನಲ್ಲಿ ಶತಕಗಳ ಆಸೀಸ್​ನ ದಿಗ್ಗಜ ಸರ್ ಡಾನ್​ ಬ್ರಾಡ್ಮನ್(29 ಶತಕ) ಅವರನ್ನು ಸರಿಗಟ್ಟಿದರು. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಮಿತ್​ಗೆ ಇದು 41ನೇ ಶತಕವಾಗಿದೆ. ಸಕ್ರಿಯ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ(41 ಶತಕ) ಅವರನ್ನು ಸ್ಮಿತ್​ ಸರಿಗಟ್ಟಿದರು.

ಇದಕ್ಕೂ ಮುನ್ನ ಗುರುವಾರ ಎರಡನೇ ದಿನದಾಟ ಮುಂದುವರೆಸಿದ ಆಸೀಸ್​ಗೆ ಸ್ಟೀವ್​ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೇನ್​ ಅವರು ಮೂರನೇ ವಿಕೆಟ್​ಗೆ ದಾಖಲೆಯ 251 ರನ್​ ಜೊತೆಯಾಟವಾಡಿದರು. ಮೊದಲ ದಿನ ಶತಕ ಬಾರಿಸಿದ್ದ ಲ್ಯಾಬುಶೇನ್​ ಅದನ್ನು ದ್ವಿಶತಕವಾಗಿ ಪರಿವರ್ತಿಸಿದರು. 350 ಎಸೆತಗಳಲ್ಲಿ 205 ರನ್​ ಬಾರಿಸಿದ ಮಾರ್ನಸ್ ಬ್ರಾಥ್​ವೈಟ್​ ಬೌಲಿಂಗ್​ನಲ್ಲಿ ಔಟಾದರು.

ಬಳಿಕ ಸ್ಟೀವ್​ ಸ್ಮಿತ್ ಜೊತೆಗೂಡಿರುವ ಟ್ರಾವಿಸ್​ ಹೆಡ್​(43*) ಕೆರಿಬಿಯನ್​ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದು, ಬ್ಯಾಟಿಂಗ್​ ಮುಂದುವರೆಸಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ 136 ಓವರ್​ಗಳಲ್ಲಿ 3 ವಿಕೆಟ್​ಗೆ 484 ರನ್​ ಪೇರಿಸಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್‌: ಭರತ್​ ಸೂಪರ್​ 10 ವ್ಯರ್ಥ, ಪ್ಯಾಂಥರ್ಸ್ ಅಬ್ಬರಕ್ಕೆ ಮಂಕಾದ ಬುಲ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.