ವೆಸ್ಟ್ ಇಂಡೀಸ್: ಯುವ ಆಟಗಾರ ಡೊಮಿನಿಕ್ ಡ್ರೇಕ್ಸ್ ಅಜೇಯ ಬ್ಯಾಟಿಂಗ್ ನೆರವಿನಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೆಟ್ರಿಯಾಟ್ಸ್ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ಪೇಟ್ರಿಯಾಟ್ಸ್ 3 ವಿಕೆಟ್ಗಳ ರೋಚಕ ಜಯ ದಾಖಲಿಸಿದೆ.
ಬುಧವಾರ ಬಾಸ್ಟೆರೆನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ 160 ರನ್ಗಳ ಗುರಿ ಬೆನ್ನಟ್ಟಿದ ಪೆಟ್ರಿಯಾಟ್ಸ್ ಆರಂಭಿಕ ಆಘಾತ ಅನುಭವಿಸಿತು. ಕ್ರಿಸ್ ಗೇಲ್ ಶೂನ್ಯ ಹಾಗೂ ಲೆವಿಸ್ 6 ರನ್ ಗಳಿಸಿ ಪೆವಿಲಿಯನ್ಗೆ ಸೇರಿಕೊಂಡರು. ಬಳಿಕ ಜೊಸೌ ಸಿಲ್ವ (37) ಹಾಗೂ ರುಧರ್ಫೋರ್ಡ್ (25) ಉತ್ತಮ ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಇವರಿಬ್ಬರು ಔಟ್ ಆದ ಬಳಿಕ ಬ್ರಾವೋ ಕೂಡ 8 ರನ್ಗೆ ವಿಕೆಟ್ ಒಪ್ಪಿಸಿದರು. ಆಗ ಪೆಟ್ರಿಯಾಟ್ಸ್ 95 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
-
WHAT A FINISH! Dominic Drakes seals the win with a @fun88eng Magic moment. pic.twitter.com/tvyn72hbmP
— CPL T20 (@CPL) September 15, 2021 " class="align-text-top noRightClick twitterSection" data="
">WHAT A FINISH! Dominic Drakes seals the win with a @fun88eng Magic moment. pic.twitter.com/tvyn72hbmP
— CPL T20 (@CPL) September 15, 2021WHAT A FINISH! Dominic Drakes seals the win with a @fun88eng Magic moment. pic.twitter.com/tvyn72hbmP
— CPL T20 (@CPL) September 15, 2021
ಆದರೆ, ಡೊಮಿನಿಕ್ ಡ್ರೇಕ್ಸ್ 24 ಎಸೆತಗಳಲ್ಲಿ 48 ರನ್ ಗಳಿಸಿ ಅಜೇಯರಾಗುಳಿದು ತಂಡಕ್ಕೆ ಗೆಲುವು ತಂದಿತ್ತರು. ಫಾಬಿಯನ್ ಅಲೆನ್ 20 ರನ್ ಬಾರಿಸಿ ಡ್ರೇಕ್ಸ್ಗೆ ಸಾಥ್ ನೀಡಿದರು. ಅಂತಿಮ ಓವರ್ನಲ್ಲಿ ಗೆಲುವಿಗೆ 9 ರನ್ ಬೇಕಾಗಿತ್ತು. ಕೊನೆಯ ಎಸೆತದಲ್ಲಿ ಪೆಟ್ರಿಯಾಟ್ಸ್ ತಂಡವು ಗೆಲುವಿನ ದಡ ಸೇರಿತು. ಅಲ್ಲದೇ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿದ್ದ ಬ್ರಾವೋ ನೇತೃತ್ವದ ತಂಡ ಚಾಂಪಿಯನ್ಪಟ್ಟ ಅಲಂಕರಿಸಿದೆ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸೇಂಟ್ ಲೂಸಿಯಾ ಕಿಂಗ್ಸ್ 7 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು. ಆಲ್‌ರೌಂಡರ್‌ಗಳಾದ ರಹಕೀಮ್ ಕಾರ್ನ್‌ವಾಲ್ ಮತ್ತು ರೋಸ್ಟನ್ ಚೇಸ್ ತಲಾ 43 ರನ್ ಬಾರಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಅಬ್ಬರಿಸಿದ ಕೀಮೋ ಪಾಲ್, 21 ಎಸೆತಗಳಲ್ಲಿ ಐದು ಸಿಕ್ಸರ್‌ಗಳೊಂದಿಗೆ 39 ರನ್ ಸಿಡಿಸಿ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು.
ಅಂಡ್ರೆ ಪ್ಲೆಚರ್ ನೇತೃತ್ವದ ಸೇಂಟ್ ಲೂಸಿಯಾ ಕಿಂಗ್ಸ್ ಸತತ ಎರಡನೇ ಬಾರಿಗೆ ಫೈನಲ್ ತಲುಪಿ ಸೋಲು ಅನುಭವಿಸಿದೆ.
ಇದನ್ನೂ ಓದಿ: 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ರೀತಿ ಭಾರತವನ್ನು ಸೋಲಿಸುವೆವು: ಪಾಕ್ ಕ್ರಿಕೆಟಿಗನ ಕನಸು