ಕೊಲಂಬೊ (ಶ್ರೀಲಂಕಾ): ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡುವುದೆಂದರೆ 10-15 ವರ್ಷಗಳ ಹಿಂದೆಲ್ಲ ಹೆಮ್ಮೆಯ ವಿಷಯವಾಗಿತ್ತು. ಆದರೆ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲು ಯುವ ಪ್ರತಿಭೆಗಳು ಅಷ್ಟು ಆಸಕ್ತಿ ತೋರಿಸುತ್ತಿಲ್ಲ. ಟೆಸ್ಟ್ ಕ್ರಿಕೆಟ್ ಹಳೆಯ ಛಾರ್ಮ್ ಕಳೆದುಕೊಂಡಿದೆ. ಆ್ಯಶಸ್‌ನಂತಹ ಸರಣಿಗೂ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಪ್ರಪಂಚಾದ್ಯಂತದ ಉದಯೋನ್ಮುಖ ಕ್ರಿಕೆಟಿಗರಿಗೆ ಟೆಸ್ಟ್ ಕ್ರಿಕೆಟ್ ಇನ್ಮುಂದೆ ಅಪೇಕ್ಷಿತ ಸ್ವರೂಪವಲ್ಲ ಎಂಬ ವಿಚಾರ ಇದೀಗ ಶ್ರೀಲಂಕಾದ ವನಿಂದು ಹಸರಂಗ ನಿವೃತ್ತಿಯಿಂದ ಸಾಬೀತಾಗಿದೆ.
26 ವರ್ಷದ ಆಲ್ರೌಂಡ್ ಕ್ರಿಕೆಟರ್ ವನಿಂದು ಹಸರಂಗ ಅವರು ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಸೀಮಿತ ಓವರ್‌ಗಳ ಸ್ಪೆಷಲಿಸ್ಟ್ ಆಗಿ ಮಾತ್ರ ತಮ್ಮ ವೃತ್ತಿಜೀವನ ಮುಂದುವರಿಸುವುದು ಈ ನಿರ್ಧಾರದ ಹಿಂದಿನ ಕಾರಣ ಎಂದು ವನಿಂದು ತಿಳಿಸಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಟೆಸ್ಟ್ ಆಡುವುದಿಲ್ಲ ಎಂಬ ಯುವ ಕ್ರಿಕೆಟಿಗನ ನಿರ್ಧಾರ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆ ಕುಗ್ಗುತ್ತಿರುವುದನ್ನು ಹೇಳುತ್ತಿದೆ ಅನ್ನೋದು ಪಂಡಿತರ ಮಾತು. ಇನ್ನೊಂದೆಡೆ, ವನಿಂದು ವೈಯುಕ್ತಿಕ ಕ್ರಿಕೆಟ್ ಅಂಕಿಅಂಶಗಳೂ ಇದಕ್ಕೆ ಕಾರಣ ಎಂದು ಹೇಳಬಹುದು.
-
Sri Lanka Men’s all-rounder Wanindu Hasaranga has informed Sri Lanka Cricket that he will retire from playing test cricket. -
— Sri Lanka Cricket 🇱🇰 (@OfficialSLC) August 15, 2023 " class="align-text-top noRightClick twitterSection" data="
READ: https://t.co/cPV4jbzHeZ #SLC
">Sri Lanka Men’s all-rounder Wanindu Hasaranga has informed Sri Lanka Cricket that he will retire from playing test cricket. -
— Sri Lanka Cricket 🇱🇰 (@OfficialSLC) August 15, 2023
READ: https://t.co/cPV4jbzHeZ #SLCSri Lanka Men’s all-rounder Wanindu Hasaranga has informed Sri Lanka Cricket that he will retire from playing test cricket. -
— Sri Lanka Cricket 🇱🇰 (@OfficialSLC) August 15, 2023
READ: https://t.co/cPV4jbzHeZ #SLC
ವೈಟ್ಬಾಲ್ ಕ್ರಿಕೆಟ್ನಲ್ಲಿ ಉತ್ತಮ ದಾಖಲೆ ಹೊಂದಿರುವ ಹಸರಂಗ, ಟೆಸ್ಟ್ ಕ್ರಿಕೆಟ್ನಲ್ಲಿ ಮೊನಚು ಬೌಲಿಂಗ್ ಪ್ರದರ್ಶಿಸುವಲ್ಲಿ ಎಡವಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿರುವ ಅವರು ಐಸಿಸಿ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ನಲ್ಲಿ ಪ್ರಭಾವಿ ಬೌಲರ್ ಎನಿಸುವ ನಿರೀಕ್ಷೆ ಇದೆ.
ಕೇವಲ ನಾಲ್ಕು ಟೆಸ್ಟ್ ಪಂದ್ಯವಾಡಿರುವ ವನಿಂದು 7 ಇನ್ನಿಂಗ್ಸ್ನಿಂದ 100.75ರ ಸರಾಸರಿಯಲ್ಲಿ 3.59 ಎಕಾನಮಿಯಲ್ಲಿ 403 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದುಕೊಂಡಿದ್ದಾರೆ. 171 ರನ್ಗಳಿಗೆ 4 ವಿಕೆಟ್ ಪಡೆದಿದ್ದು ಅತ್ಯುತ್ತಮ ಬೌಲಿಂಗ್ ಸಾಧನೆ. ಬ್ಯಾಟಿಂಗ್ನಲ್ಲಿ 28ರ ಸರಾಸರಿಯಲ್ಲಿ 86 ಸ್ಟ್ರೈಕ್ರೇಟ್ನಿಂದ 196 ರನ್ ಗಳಿಸಿದ್ದಾರೆ. 59 ರನ್ ಅತ್ಯುತ್ತಮ ಸ್ಕೋರ್ ಆಗಿದೆ. 2020 ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾದ ತಂಡದ ವಿರುದ್ಧ ಇವರು ಟೆಸ್ಟ್ಗೆ ಪಾದಾರ್ಪಣೆ ಮಾಡಿದ್ದರು. ಕೊನೆಯದಾಗಿ ಬಾಂಗ್ಲಾದೇಶದೆದುರು 2021 ಏಪ್ರಿಲ್ನಲ್ಲಿ ಟೆಸ್ಟ್ ಆಡಿದ್ದರು. ನಂತರ ಎರಡು ವರ್ಷಗಳ ಕಾಲ ತಂಡದಲ್ಲಿ ಸ್ಥಾನ ಸಿಗದೇ ಇದೀಗ ನಿವೃತ್ತಿಯನ್ನು ನಿರ್ಧಾರ ತೆಗೆದುಕೊಂಡಿದ್ದಾರೆ.
ಹಸರಂಗ, ಏಕದಿನ ಕ್ರಿಕೆಟ್ನಲ್ಲಿ 48 ಪಂದ್ಯಗಳನ್ನಾಡಿ 61 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 58 ಇನ್ನಿಂಗ್ಸ್ನಿಂದ 91 ವಿಕೆಟ್ ಸಂಪಾದಿಸಿ ಪ್ರಭಾವಿ ಬೌಲರ್ ಆಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಈ ಬಾರಿ ಆರಂಭವಾದ ಮೇಜರ್ ಕ್ರಿಕೆಟ್ ಲೀಗ್ಗೆ (MCL) ತೆರಳುವಾಗ ರಾಷ್ಟ್ರೀಯ ತಂಡ ಟೆಸ್ಟ್ ಕ್ರಿಕೆಟಿಗರಿಗೆ ತರಬೇತಿ ಶಿಬಿರಕ್ಕೆ ಇವರನ್ನು ಆಯ್ಕೆ ಮಾಡಿತ್ತು. ಇದರಿಂದ ಎಂಸಿಎಲ್ ಪ್ರವಾಸವನ್ನು ಕಳೆದುಕೊಂಡಿದ್ದರು. ಐಪಿಎಲ್ 26 ಪಂದ್ಯಗಳಲ್ಲಿ 35 ವಿಕೆಟ್ ಪಡೆದು ಉತ್ತಮ ಆಲ್ರೌಂಡರ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಹಸರಂಗ, ಹೆಚ್ಚು ಲೀಗ್ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.
ಇದನ್ನೂ ಓದಿ: Maharaja Trophy: ಲವನಿತ್ - ಶ್ರೀಜಿತ್ ಶತಕದ ಜೊತೆಯಾಟ, ಹುಬ್ಬಳ್ಳಿ ಟೈಗರ್ಸ್ಗೆ 7 ವಿಕೆಟ್ ಜಯ