ETV Bharat / sports

ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ 2 ಕೋಟಿ ರೂ ಬಹುಮಾನ

author img

By

Published : Jul 31, 2021, 6:04 AM IST

ಕೋವಿಡ್​ 19 ನಿಂದ ಪೆಟ್ಟು ತಿಂದಿದ್ದ ಅನಾನುಭವಿ ಭಾರತ ತಂಡದ ಮೇಲೆ ಸವಾರಿ ಮಾಡಿದ್ದ ಸಿಂಹಳೀಯರು ಕೊನೆಯ 2 ಟಿ20 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ 13 ವರ್ಷಗಳ ನಂತರ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಗೆದ್ದಿತ್ತು. ಅಲ್ಲದೆ ಟಿ20 ಇತಿಹಾಸದಲ್ಲಿ ಭಾರತದ ವಿರುದ್ಧ ಇದೇ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ವಿಜಯ ಸಾಧಿಸಿದೆ.

ಟಿ20 ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ 2 ಕೋಟಿ ರೂ ಬಹುಮಾನ

ಕೊಲಂಬೊ: ಭಾರತದ ವಿರುದ್ಧ 2-1ರಲ್ಲಿ ಟಿ20 ಸರಣಿ ಗೆದ್ದ ಶ್ರೀಲಂಕಾ ತಂಡಕ್ಕೆ ಅಲ್ಲಿನ ಕ್ರಿಕೆಟ್ ಮಂಡಳಿ ಬಹುಮಾನವಾಗಿ 1,00,000 ಅಮೆರಿಕನ್ ಡಾಲರ್​ ನಗದು ಬಹುಮಾನವಾಗಿ ಘೋಷಿಸಿದೆ.

ಕೋವಿಡ್​ 19 ನಿಂದ ಪೆಟ್ಟು ತಿಂದಿದ್ದ ಅನಾನುಭವಿ ಭಾರತ ತಂಡದ ಮೇಲೆ ಸವಾರಿ ಮಾಡಿದ್ದ ಸಿಂಹಳೀಯರು ಕೊನೆಯ 2 ಟಿ20 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ 13 ವರ್ಷಗಳ ನಂತರ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಗೆದ್ದಿತ್ತು. ಅಲ್ಲದೆ ಟಿ20 ಇತಿಹಾಸದಲ್ಲಿ ಭಾರತದ ವಿರುದ್ಧ ಇದೇ ಮೊದಲ ಬಾರಿಗೆ ಟಿ20 ಸರಣಿಯಲ್ಲಿ ವಿಜಯ ಸಾಧಿಸಿದೆ.

ತಂಡಕ್ಕೆ ಅಗತ್ಯವಾಗಿದ್ದ ಸರಣಿ ತಂದುಕೊಟ್ಟ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ಪ್ರಯತ್ನವನ್ನು ಶ್ರೀಲಂಕಾ ಕ್ರಿಕೆಟ್‌ನ ಕಾರ್ಯನಿರ್ವಾಹಕ ಸಮಿತಿಯು ಪ್ರಶಂಸಿಸಿದೆ. ಈ ಪರಿಶ್ರಮಕ್ಕೆ ಬಹುಮಾನವಾಗಿ 1 ಲಕ್ಷ ಯುಎಸ್​ ಡಾಲರ್​( ಸುಮಾರು 2 ಕೋಟಿ ಶ್ರೀಲಂಕಾ ರೂಪಾಯಿ) ಮೊತ್ತವನ್ನು ನೀಡಲು ಮಂಡಳಿ ತೀರ್ಮಾನಿಸಿದೆ ಎಂದು ಎಸ್​ಎಲ್​ಸಿ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತೀಯ ಆಲ್​ರೌಂಡರ್​ ಕೃನಾಲ್ ಪಾಂಡ್ಯಗೆ ಕೊರೊನಾ ದೃಢಪಟ್ಟಿದ್ದರಿಂದ ಅವರ ಜೊತೆ ಸಂಪರ್ಕದಲ್ಲಿ ಸೂರ್ಯಕುಮಾರ್, ಪೃಥ್ವಿ ಶಾ, ಮನೀಶ್ ಪಾಂಡೆ, ದೀಪಕ್ ಚಹರ್ ಮತ್ತು ಕೃನಾಲ್ ಪಾಂಡೆ ಸೇರಿದಂತೆ ಟಾಪ್ ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟಿದ್ದರಿಂದ ಭಾರತ ಟಿ20 ಸರಣಿ ಸೋಲಿಗೆ ತುತ್ತಾಗಬೇಕಾಯಿತು.

ಇದನ್ನು ಓದಿ:ಬಯೋಬಬಲ್‌ ಉಲ್ಲಂಘನೆ: ಲಂಕಾದ ಮೂವರು ಕ್ರಿಕೆಟರ್ಸ್​ಗೆ ಎರಡು ವರ್ಷ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.