ETV Bharat / sports

ಕೊನೆಯ ಪಂದ್ಯ ಗೆದ್ದ ಶ್ರೀಲಂಕಾ ; ಆಸ್ಟ್ರೇಲಿಯಾಗೆ 4-1ರಲ್ಲಿ ಟಿ20 ಸರಣಿ - ಗ್ಲೇನ್​ ಮ್ಯಾಕ್ಸ್​ವೆಲ್

155 ರನ್​ಗಳ ಗುರಿ ಬೆನ್ನಟ್ಟಿದ ಲಂಕಾ ಪಡೆ 19.5 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕುಸಾಲ್ ಮೆಂಡಿಸ್​​ 58 ಎಸೆತಗಳಲ್ಲಿ 5 ಬೌಂಡರಿ,1 ಸಿಕ್ಸರ್ ಸಹಿತ ಅಜೇಯ 69 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇವರಿಗೆ ಸಾಥ್ ನೀಡಿದ ದಾಸುನ್ ಶನಕ 35 ರನ್​ಗಳಿಸಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಕೇನ್​ ರಿಚರ್ಡ್ಸನ್​ ವಿಕೆಟ್ ಒಪ್ಪಿಸಿದರು..

Sri Lanka won final T20, But Australia seal the series by 4-1
ಆಸ್ಟ್ರೇಲಿಯಾಗೆ 4-1ರಲ್ಲಿ ಟಿ20 ಸರಣಿ
author img

By

Published : Feb 20, 2022, 4:54 PM IST

ಮೆಲ್ಬೋರ್ನ್ ​: ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು 5 ವಿಕೆಟ್​ಗಳಿಂದ ಗೆಲ್ಲುವ ಮೂಲಕ ವೈಟ್​ ವಾಶ್​ ಮುಖಭಂಗವನ್ನು ತಪ್ಪಿಸಿಕೊಂಡಿದೆ. ಆದರೆ, 5 ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಕಾಂಗರೂ ಪಡೆ ವಶಪಡಿಸಿಕೊಂಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 154 ರನ್​ಗಳಿಸಿತ್ತು. ಮ್ಯಾಥ್ಯೂ ವೇಡ್​ 27 ಎಸೆತಗಳಲ್ಲಿ 43 ರನ್​ಗಳಿಸಿದರೆ, ಮ್ಯಾಕ್ಸ್​ವೆಲ್​ 29, ಇಂಗ್ಲಿಸ್​ 23 ರನ್​ಗಳಿಸಿದ್ದರು.

ಶ್ರೀಲಂಕಾ ಪರ ಲಹಿರು ಕುಮಾರ 34ಕ್ಕೆ 2, ದುಷ್ಮಂತ ಚಮೀರಾ 30ಕ್ಕೆ2, ಪ್ರವೀಣ್​ ಜಯವಿಕ್ರಮ 29ಕ್ಕೆ1 ಮತ್ತು ಕರುಣರತ್ನೆ 32ಕ್ಕೆ 1 ವಿಕೆಟ್ ಪಡೆದಿದ್ದರು.

155 ರನ್​ಗಳ ಗುರಿ ಬೆನ್ನಟ್ಟಿದ ಲಂಕಾ ಪಡೆ 19.5 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕುಸಾಲ್ ಮೆಂಡಿಸ್​​ 58 ಎಸೆತಗಳಲ್ಲಿ 5 ಬೌಂಡರಿ,1 ಸಿಕ್ಸರ್ ಸಹಿತ ಅಜೇಯ 69 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇವರಿಗೆ ಸಾಥ್ ನೀಡಿದ ದಾಸುನ್ ಶನಕ 35 ರನ್​ಗಳಿಸಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಕೇನ್​ ರಿಚರ್ಡ್ಸನ್​ ವಿಕೆಟ್ ಒಪ್ಪಿಸಿದರು.

ಈ ಸರಣಿಯಲ್ಲಿ ಒಂದು ಸೂಪರ್ ಓವರ್​ ಪಂದ್ಯ ಸೇರಿದಂತೆ ಮೊದಲ 4 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತ್ತು. 138 ರನ್​ ಮತ್ತು 1 ವಿಕೆಟ್​ ಪಡೆದಿದ್ದ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಓದಿ:ಇಂದು ವಿಂಡೀಸ್​ ವಿರುದ್ಧ ಕೊನೆಯ ಟಿ20 ಪಂದ್ಯ : ಗಾಯಕ್ವಾಡ್​-ಶ್ರೇಯಸ್​ ಅಯ್ಯರ್​ ಕಣಕ್ಕಿಳಿಯುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.