ಕೊಲಂಬೊ: ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಎಂದೇ ಬಿಂಬಿತವಾಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಳೆ ಅಡ್ಡಿ ನಡುವೆ ಆರಂಭವಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದ್ದು, ಇಲ್ಲಿ ಗೆದ್ದವರು ಸೆ.17 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದ್ದಾರೆ.
3 ಗಂಟೆಗೆ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭವಾಯಿತು. 2 ಗಂಟೆ ಆಟ ವ್ಯರ್ಥವಾದ ಕಾರಣ ಪಂದ್ಯವನ್ನು 45 ಓವರ್ಗಳಿಗೆ ಕಡಿತ ಮಾಡಲಾಗಿದೆ. 9 ಓವರ್ ಪವರ್ಪ್ಲೇ ಇರಲಿದೆ.
ಎರಡೂ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಪಾಕಿಸ್ತಾನದ ವೇಗಿಗಳಾದ ನಸೀಮ್, ಮೊಹಮದ್ ರೌಫ್ ಗಾಯಗೊಂಡಿದ್ದಾರೆ. ನಸೀಮ್ ಈಗಾಗಲೇ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
-
Pakistan opt to bat first after the rain relents 👊
— ICC (@ICC) September 14, 2023 " class="align-text-top noRightClick twitterSection" data="
It'll be 45 overs per side in Colombo 👀#AsiaCup2023 | #PAKvSL 📝: https://t.co/Xt9266nBcH pic.twitter.com/EEFcB1lsmC
">Pakistan opt to bat first after the rain relents 👊
— ICC (@ICC) September 14, 2023
It'll be 45 overs per side in Colombo 👀#AsiaCup2023 | #PAKvSL 📝: https://t.co/Xt9266nBcH pic.twitter.com/EEFcB1lsmCPakistan opt to bat first after the rain relents 👊
— ICC (@ICC) September 14, 2023
It'll be 45 overs per side in Colombo 👀#AsiaCup2023 | #PAKvSL 📝: https://t.co/Xt9266nBcH pic.twitter.com/EEFcB1lsmC
ಪ್ರಕಟಿತ ತಂಡದಲ್ಲೂ ಬದಲಾವಣೆ: ಪಾಕಿಸ್ತಾನ ಮೊದಲೇ ತಂಡವನ್ನು ಪ್ರಕಟಿಸಿತ್ತು. ಭಾರತದ ವಿರುದ್ಧ ಆಡಿದ್ದ ತಂಡದಲ್ಲಿ ಐದು ಆಟಗಾರರನ್ನು ಕೈ ಬಿಡಲಾಗಿದೆ. ನಸೀಮ್ ಮತ್ತು ರೌಫ್ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಆರಂಭಿಕ ಫಖರ್ ಜಮಾನ್ ಬದಲು ಮೊಹಮ್ಮದ್ ಹ್ಯಾರಿಸ್, ಅಘಾ ಅಸ್ಲಾಮ್ ಬದಲು ಸೌದ್ ಶಕೀಲ್, ಫಾಹಿಮ್ ಅಶ್ರಫ್ ಬದಲು ಮೊಹಮ್ಮದ್ ನವಾಜ್ಗೆ ಸ್ಥಾನ ನೀಡಲಾಗಿತ್ತು. ಗಾಯಗೊಂಡ ವೇಗಿಗಳ ಬದಲಾಗಿ ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ನವಾಜ್ ಮಾನ್ ಖಾನ್ಗೆ ಅವಕಾಶ ನೀಡಲಾಗಿತ್ತು. ಆದರೆ, ಇಮಾಮ್ ಉಲ್ ಹಕ್ ಬೆನ್ನು ನೋವಿಗೀಡಾಗಿದ್ದರೆ, ಸೌದ್ ಶಕೀಲ್ಗೆ ಜ್ವರ ಕಾಡುತ್ತಿದೆ. ಇಬ್ಬರ ಬದಲಿಗೆ ಫಖರ್ ಜಮಾನ್ ಮತ್ತು ಅಬ್ದುಲ್ಲಾ ಶಪೀಕ್ಗೆ ಸ್ಥಾನ ನೀಡಲಾಗಿದೆ.
ಇತ್ತ ಲಂಕಾ ತಂಡದಲ್ಲೂ ಇಬ್ಬರ ಬದಲಾವಣೆ ಮಾಡಲಾಗಿದೆ. ಬೌಲರ್ ರಜಿತ ಬದಲಿಗೆ ಪ್ರಮೋಧ್ ಮದುಶನ್, ದುಮಿತ್ ಕರುಣಾರತ್ನೆ ಬದಲಿಗೆ ಕುಶಾಲ್ ಜನಿತ್ಗೆ ಅವಕಾಶ ನೀಡಲಾಗಿದೆ.
-
Pakistan wins the toss and elects to bat first in Colombo!
— AsianCricketCouncil (@ACCMedia1) September 14, 2023 " class="align-text-top noRightClick twitterSection" data="
Pakistan have made 5 changes to their XI for this high-voltage fixture!
Can the Sri Lankan seamers make the best use of the conditions? Or will the Pakistan openers start strongly?
#AsiaCup2023 #PAKvSL pic.twitter.com/vjQ747K2QR
">Pakistan wins the toss and elects to bat first in Colombo!
— AsianCricketCouncil (@ACCMedia1) September 14, 2023
Pakistan have made 5 changes to their XI for this high-voltage fixture!
Can the Sri Lankan seamers make the best use of the conditions? Or will the Pakistan openers start strongly?
#AsiaCup2023 #PAKvSL pic.twitter.com/vjQ747K2QRPakistan wins the toss and elects to bat first in Colombo!
— AsianCricketCouncil (@ACCMedia1) September 14, 2023
Pakistan have made 5 changes to their XI for this high-voltage fixture!
Can the Sri Lankan seamers make the best use of the conditions? Or will the Pakistan openers start strongly?
#AsiaCup2023 #PAKvSL pic.twitter.com/vjQ747K2QR
ಪಾಕ್ ತಂಡಕ್ಕೆ ಗಾಯದ ಹೊಡೆತ: ಪ್ರಶಸ್ತಿ ಗೆಲ್ಲುವ ಫೇವರೀಟ್ ತಂಡವಾಗಿದ್ದ ಪಾಕಿಸ್ತಾನಕ್ಕೆ ಗಾಯದ ಸಮಸ್ಯೆ ಬಂದೊದಗಿದೆ. ಈಗಾಗಲೇ ನಸೀಮ್, ರೌಫ್ ಗಾಯಗೊಂಡಿದ್ದಾರೆ. ನಸೀಮ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ತಂಡ ನೆಚ್ಚಿನ ಆಟಗಾರರಿಲ್ಲದೇ ಸತ್ವ ಕಳೆದುಕೊಂಡಿದೆ. ನಾಯಕ ಬಾಬರ್ ಅಜಂ, ರಿಜ್ವಾನ್ ಹೊರತುಪಡಿಸಿ ಬೇರೆ ಬ್ಯಾಟರ್ಗಳು ರನ್ ಗಳಿಸುತ್ತಿಲ್ಲ. ಇದು ತಂಡಕ್ಕೆ ತೊಡಕಾಗಿದೆ.
ತಂಡಗಳು ಇಂತಿವೆ: ಶ್ರೀಲಂಕಾ- ಪತುಮ್ ನಿಸ್ಸಂಕಾ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ್ ಸಮರ ವಿಕ್ರಮ, ಚರಿತ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ(ನಾಯಕ), ದುನಿತ್ ವೆಲ್ಲಲಗೆ, ಮಹೇಶ್ ತೀಕ್ಷಣ, ಪ್ರಮೋದ್ ಮದುಶನ್, ಮತೀಶ್ ಪತಿರಣ.
ಪಾಕಿಸ್ತಾನ- ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಜಮಾನ್ ಖಾನ್.
ಇದನ್ನೂ ಓದಿ: ಏಕದಿನ ನಿವೃತ್ತಿ ವಾಪಸ್ ಪಡೆದು 182 ರನ್ ಸಿಡಿಸಿದ ಬೆನ್ ಸ್ಟೋಕ್ಸ್.. 3 ಸಾವಿರ ಗಡಿ ದಾಟಿದ 19 ಬ್ರಿಟಿಷ್ ಆಟಗಾರ