ETV Bharat / sports

ದೀಪಕ್ ಚಾಹರ್ ಭರ್ಜರಿ ಬ್ಯಾಟಿಂಗ್: ಲಂಕಾ ವಿರುದ್ಧ ಭಾರತಕ್ಕೆ ರೋಚಕ ಜಯ - Indian B

ರೋಚಕ ಹಂತದಲ್ಲಿ ದೀಪಕ್ ಚಾಹರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡದ ವಿರುದ್ಧ ಭಾರತ ಗೆದ್ದಿದೆ. ಈ ಮೂಲಕ ಭಾರತ ಸರಣಿ ಗೆದ್ದಿದೆ.

Sri Lanka India cricket series
Sri Lanka India cricket series
author img

By

Published : Jul 20, 2021, 11:38 PM IST

Updated : Jul 21, 2021, 7:56 AM IST

ಕೊಲಂಬೊ: ದೀಪಕ್ ಚಾಹರ್ (69) ಭರ್ಜರಿ ಬ್ಯಾಟಿಂಗ್​ನಿಂದ ಶ್ರೀಲಂಕಾ ವಿರುದ್ಧ ಭಾರತ ತಂಡ ರೋಚಕ ಜಯ ದಾಖಲಿಸಿದೆ. ಈ ಮೂಲಕ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2 ಪಂದ್ಯ ಜಯಿಸಿ ಸರಣಿ ವಶಪಡಿಸಿಕೊಂಡಿದೆ.

ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್ ಅಂತರದಿಂದ ಭಾರತ ತಂಡ ಜಯಭೇರಿ ಸಾಧಿಸಿದೆ. ಭಾರತ 49.1 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಬಾರಿಸಿ ಜಯದ ಮಾಲೆ ಧರಿಸಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 276 ರನ್ ಬಾರಿಸಿ ಸ್ಪರ್ಧಾತ್ಮಕ ಗುರಿ ನೀಡಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದ ಪೃಥ್ವಿ ಶಾ (13), ಶಿಖರ್ ಧವನ್ (29) ಉತ್ತಮ ಆರಂಭದ ನಿರೀಕ್ಷೆ ಹುಸಿಗೊಳಿಸಿದರು. ತಂಡ 28 ರನ್ ಗಳಿಸುವಷ್ಟರಲ್ಲಿ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರು. ಬಳಿಕ ಇಶಾಕ್ ಕಿಶನ್ (1) ಬಂದಷ್ಟೇ ವೇಕವಾಗಿ ಪೆವಿಲಿಯನ್ ಸೇರಿಸಿದರು.

ನಂತರ ಜೊತೆಯಾದ ಮನಿಶ್ ಪಾಂಡೆ, ಧವನ್ ಜೋಡಿ ಉತ್ತಮ ರನ್ ಕಲೆ ಹಾಕುವ ಮುನ್ಸೂಚನೆ ನೀಡಿತ್ತು. ಆದ್ರೆ ತಂಡ 65 ರನ್ ಗಳಿಸಿದ್ದಾಗ ಧವನ್ ಔಟಾದರು. 37 ರನ್ ಗಳಿಸಿ ಪಾಂಡೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಸೊನ್ನೆ ಸುತ್ತಿದರು. ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿ 53 ರನ್ ಸಿಡಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಪ್ರಯತ್ನಿಸಿದರು. ಆದ್ರೆ ಎಲ್​ಬಿ ಬಲೆಗೆ ಬಿದ್ದು ಹೊರ ನಡೆದರು. (IND vs SL: ದೀಪಕ್​ ಚಹರ್​ ಅರ್ಧಶತಕ: ರೋಚಕ ತಿರುವು ಪಡೆದ ಎರಡನೇ ಏಕದಿನ ಪಂದ್ಯ)

160 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಕೃಣಾಲ್ ಪಾಂಡೆ 35 ರನ್ ಸಿಡಿಸಿ ಭರವಸೆ ಮೂಡಿಸುವಷ್ಟರಲ್ಲಿ ಔಟಾದರು. ಆಗ ತಂಡದ ಮೊತ್ತ 7 ವಿಕೆಟ್ ನಷ್ಟಕ್ಕೆ 193 ರನ್. ಈ ಹಂತದಲ್ಲಿ ಜಯದ ಆಸೆ ಮರೆಯಾಗಿತ್ತು. ಆದ್ರೆ ದೀಪಕ್ ಚಾಹರ್ ಭರ್ಜರಿ 69 ರನ್ ಬಾರಿಸಿ ಗೆಲುವು ತಂದಿತ್ತರು. ಕೊನೆಯ ಹಂತದಲ್ಲಿ ಭುವನೇಶ್ವರ್ ಕುಮಾರ್ (19) ಬ್ಯಾಟಿಂಗ್ ಚಾಹರ್​ಗೆ ಸಾಥ್ ನೀಡಿತು. ಈ ಮೂಲಕ ತಂಡ 49.1 ಓವರ್​ಗಳಲ್ಲಿ ಗುರಿ ಮುಟ್ಟಿತು.

ಇದಕ್ಕೂ ಮುನ್ನ ಲಂಕಾ ಆರಂಭಿಕ ಬ್ಯಾಟ್ಸ್​ಮನ್ ಆವಿಷ್ಕಾ ಫರ್ನಾಂಡೊ ಅವರ ಅರ್ಧಶತಕದ ಬಲದಿಂದ ತಂಡ 276 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್ ದಾಖಲಿಸಿತ್ತು.

ಟಾಸ್​ ಗೆದ್ದ ಶ್ರೀಲಂಕಾ ತಂಡಕ್ಕೆ ಆರಂಭಿಕರಾದ ಫರ್ನಾಂಡೊ ಮತ್ತು ಮಿನೋದ್ ಭನುಕ 77 ರನ್​ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿದರು. 36 ರನ್​ಗಳಿಸಿದ್ದ ಭನುಕ ವಿಕೆಟ್ ಪಡೆಯುವ ಮೂಲ ಚಹಲ್​ ಭಾರತಕ್ಕೆ ಮೊದಲ ಬ್ರೇಕ್ ನೀಡಿದರು. ನಂತರ ಬಂದ ರಾಜಪಕ್ಷ ಕೂಡ ಅದೇ ಓವರ್​ನಲ್ಲೇ ಗೋಲ್ಡನ್​ ಡಕ್​ ಆದರು.

4ನೇ ಕ್ರಮಾಂಕದಲ್ಲಿ ಬಂದ ಧನಂಜಯ ಡಿಸಿಲ್ವಾ ಫರ್ನಾಂಡೊ ಜೊತೆಗೂಡಿ 3ನೇ ವಿಕೆಟ್ ಜೊತೆಯಾಟದಲ್ಲಿ 47 ರನ್​ ಸೇರಿಸಿದರು. 71 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 50 ರನ್​ಗಳಿಸಿದ್ದ ಫರ್ನಾಂಡೊ ಭುವನೇಶ್ವರ್ ಕುಮಾರ್​ಗೆ ವಿಕೆಟ್​ ಒಪ್ಪಿಸಿದರು.10 ರನ್​ಗಳ ಅಂತರದಲ್ಲಿ 45 ಎಸೆತಗಳಲ್ಲಿ 32 ರನ್​ಗಳಿಸಿ ಎಚ್ಚರಿಕೆಯಿಂದ ಆಡುತ್ತಿದ್ದ ಡಿಸಿಲ್ವಾ ಅವರು ಚಹಾರ್​​ ಬೌಲಿಂಗ್​ನಲ್ಲಿ ಬಲಿಯಾದರು.

ನಾಯಕ ಶನಕ 16 ಮತ್ತು ಹಸರಂಗ ಕೇವಲ 8 ರನ್​ಗಳಿಗೆ ಸೀಮಿತವಾದರು.ಮೊದಲ ಪಂದ್ಯದಲ್ಲಿ ಮಿಂಚಿದ್ದ ಆಲ್​ರೌಂಡರ್​ ಚರಿತ್ ಅಸಲಂಕಾ 68 ಎಸೆತಗಳಲ್ಲಿ 6 ಬೌಂಡರಿ ಸಹಿತ 65 ರನ್​ ಮತ್ತು ಕರುಣರತ್ನೆ ಕೊನೆಯಲ್ಲಿ ಅಬ್ಬರಿಸಿ 33 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 44 ರನ್​ಗಳಿಸಿ ತಂಡದ ಮೊತ್ತವನ್ನು 250 ರನ್ ಗಡಿ ದಾಟಿಸಿದರು.ಭಾರತದ ಪರ ಭುವನೇಶ್ವರ್ ಕುಮಾರ್ 54ಕ್ಕೆ3, ದೀಪಕ್ ಚಾಹರ್, 53ಕ್ಕೆ2, ಯುಜ್ವೇಂದ್ರ ಚಹಲ್ 50ಕ್ಕೆ 3 ವಿಕೆಟ್ ಪಡೆದು ಶ್ರೀಲಂಕಾ ತಂಡದ ರನ್​ಗತಿಗೆ ಕಡಿವಾಣ ಹಾಕಿದರು.

ತಂಡದ ಸ್ಕೋರ್:

ಶ್ರೀಲಂಕಾ : 275/9 (50)

ಭಾರತ: 277/7 (49.1)

ಪಂದ್ಯ ಶ್ರೇಷ್ಠ: ದೀಪಕ್ ಚಾಹರ್

Last Updated : Jul 21, 2021, 7:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.