ಕೊಲಂಬೊ: ಫೈನಲ್ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ 1-1 ಅಂತರದಿಂದ ಸಮಬಲ ಸಾಧಿಸಿವೆ.
-
Hello & Good Evening from Colombo! 👋#TeamIndia have won the toss & elected to bat against Sri Lanka in the third & final #SLvIND T20I of the series.
— BCCI (@BCCI) July 29, 2021 " class="align-text-top noRightClick twitterSection" data="
Follow the match 👉 https://t.co/E8MEONwPlh
Here's India's Playing XI 👇 pic.twitter.com/QaQL0664Z9
">Hello & Good Evening from Colombo! 👋#TeamIndia have won the toss & elected to bat against Sri Lanka in the third & final #SLvIND T20I of the series.
— BCCI (@BCCI) July 29, 2021
Follow the match 👉 https://t.co/E8MEONwPlh
Here's India's Playing XI 👇 pic.twitter.com/QaQL0664Z9Hello & Good Evening from Colombo! 👋#TeamIndia have won the toss & elected to bat against Sri Lanka in the third & final #SLvIND T20I of the series.
— BCCI (@BCCI) July 29, 2021
Follow the match 👉 https://t.co/E8MEONwPlh
Here's India's Playing XI 👇 pic.twitter.com/QaQL0664Z9
ಮೊದಲ ಏಕದಿನ ಪಂದ್ಯದಲ್ಲಿ 38ರನ್ಗಳ ಅಂತರದೊಂದಿಗೆ ಗೆದ್ದಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ 4 ವಿಕೆಟ್ಗಳ ವಿರೋಚಿತ ಸೋಲು ಅನುಭವಿಸಿದೆ. ಆದರೆ ಇಂದಿನ ಪಂದ್ಯದಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಕೊರೊನಾ ಕಾರಣ ಟೀಂ ಇಂಡಿಯಾ ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿದಿದ್ದು, ಹೀಗಾಗಿ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಆಡುವ 11ರ ಬಳಗ
ಟೀಂ ಇಂಡಿಯಾ: ಶಿಖರ್ ಧವನ್(ಕ್ಯಾಪ್ಟನ್), ಋತುರಾಜ್ ಗಾಯ್ಕವಾಡ, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ವಿ,ಕೀ), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ರಾಹುಲ್ ಚಹರ್, ಸಂದೀಪ್ ವಾರಿಯರ್, ಚೇತನ್ ಸಕಾರಿಯಾ ಹಾಗೂ ವರುಣ್ ಚಕ್ರವರ್ತಿ.
ನಿನ್ನೆ ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡ್ತಿದ್ದ ಸಂದರ್ಭದಲ್ಲಿ ನವದೀಪ್ ಸೈನಿ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಸಂದೀಪ್ ವಾರಿಯರ್ ಅವಕಾಶ ಪಡೆದುಕೊಂಡಿದ್ದಾರೆ.
ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿ,ಕೀ), ಸದೀರಾ ಸಮರವಿಕ್ರಮ, ಪಾತುಮ್ ನಿಸ್ಸಂಕಾ, ದಾಸುನ್ ಶಾನಕ (ಕ್ಯಾ), ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ಧನಂಜಯ, ದುಷ್ಮಂತ ಚಮೀರಾ