ಗಾಲೆ(ಶ್ರೀಲಂಕಾ): ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 39 ರನ್ ಹಾಗೂ ಇನ್ನಿಂಗ್ಸ್ ಜಯ ಸಾಧಿಸಿದೆ. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿ 1-1 ಅಂತರದಲ್ಲಿ ಡ್ರಾಗೊಂಡು, ಮುಕ್ತಾಯವಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿದ ಲಂಕಾ ಪಡೆ ಎದುರಾಳಿ ತಂಡದ ಮೇಲೆ ಸವಾರಿ ನಡೆಸಿತು.
-
10 wicket haul on a debut ✔️
— Sri Lanka Cricket 🇱🇰 (@OfficialSLC) July 11, 2022 " class="align-text-top noRightClick twitterSection" data="
Best figures by a Sri Lankan on a debut ✔️
Dream debut for Prabath Jayasuriya 🤩#SLvAUS pic.twitter.com/BeAg9pMZNv
">10 wicket haul on a debut ✔️
— Sri Lanka Cricket 🇱🇰 (@OfficialSLC) July 11, 2022
Best figures by a Sri Lankan on a debut ✔️
Dream debut for Prabath Jayasuriya 🤩#SLvAUS pic.twitter.com/BeAg9pMZNv10 wicket haul on a debut ✔️
— Sri Lanka Cricket 🇱🇰 (@OfficialSLC) July 11, 2022
Best figures by a Sri Lankan on a debut ✔️
Dream debut for Prabath Jayasuriya 🤩#SLvAUS pic.twitter.com/BeAg9pMZNv
ಶ್ರೀಲಂಕಾದ ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ, ಮೊದಲ ಇನ್ನಿಂಗ್ಸ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 364 ರನ್ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಶ್ರೀಲಂಕಾ ತಂಡ ಚಂಡಿಮಾಲ್(206ರನ್) ಅಜೇಯ ರನ್ಗಳ ನೆರವಿನಿಂದ 10 ವಿಕೆಟ್ ಕಳೆದುಕೊಂಡು 554ರನ್ಗಳಿಕೆ ಮಾಡುವ ಮೂಲಕ 190ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಈ ಟೆಸ್ಟ್ ಪಂದ್ಯದಲ್ಲಿ ಚಾಂಡಿಮಾನ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಾಧನೆ ಮಾಡಿದ್ದು, ಉಳಿದಂತೆ ಕರುಣರತ್ನೆ(86), ಕುಸಾಲ್ ಮೆಂಡಿಸ್(85), ಮ್ಯಾಥ್ಯೂಸ್(52) ಹಾಗೂ ಮೆಂಡಿಸ್(61)ರನ್ಗಳಿಕೆ ಮಾಡಿದರು.
190ರನ್ಗಳ ಹಿನ್ನಡೆ ಜೊತೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಬೌಲರ್ಗಳ ಎದುರು ಸಂಪೂರ್ಣವಾಗಿ ಮಂಡಿಯೂರಿದರು. 41 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 151ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಇನ್ನಿಂಗ್ಸ್ ಸೋಲು ಕಂಡಿದೆ.
ಇದನ್ನೂ ಓದಿರಿ: SL vs AUS 2nd Test: 1992ರ ಬಳಿಕ ಮೊದಲ ಸಲ ಆಸ್ಟ್ರೇಲಿಯಾ ವಿರುದ್ಧ 500+ ರನ್ಗಳಿಸಿದ ಲಂಕಾ
ಲಂಕಾ ಪರ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 6ವಿಕೆಟ್ ಪಡೆದುಕೊಂಡಿದ್ದ ಡೆಬ್ಯುಮ್ಯಾನ್ ಪ್ರಭಾತ್ ಜಯಸೂರ್ಯ ಎರಡನೇ ಇನ್ನಿಂಗ್ಸ್ನಲ್ಲೂ ಮಿಂಚು ಹರಿಸಿದರು. ತಾವು ಎಸೆದ 16 ಓವರ್ಗಳಲ್ಲಿ ಪ್ರಮುಖ 6 ವಿಕೆಟ್ ಗಳಿಕೆ ಮಾಡಿದರು. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ 12 ವಿಕೆಟ್ ಪಡೆದ ಸಾಧನೆ ಮಾಡಿದರು. ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಸರಣಿಯಲ್ಲಿ ಉತ್ತಮ ರನ್ಗಳಿಸಿದ ದಿನೇಶ್ ಚಾಂಡಿಮಾಲ್ ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 554(ಮೊದಲ ಇನ್ನಿಂಗ್ಸ್)
ಆಸ್ಟ್ರೇಲಿಯಾ 364 ಮತ್ತು 151ರನ್
ಫಲಿತಾಂಶ: ಶ್ರೀಲಂಕಾಗೆ ಇನ್ನಿಂಗ್ಸ್ ಹಾಗೂ 39ರನ್ಗಳ ಜಯ