ಧರ್ಮಶಾಲಾ: ಭಾರತದ ಮಾರಕ ಬೌಲಿಂಗ್ ದಾಳಿಗೆ ಬೆದರಿದ ಶ್ರೀಲಂಕಾ ತಂಡ 3ನೇ ಟಿ20 ಪಂದ್ಯದಲ್ಲಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 146 ರನ್ಗಳಿಸಲಷ್ಟೇ ಶಕ್ತವಾಗಿದೆ.
ಕೊನೆಯ ಪಂದ್ಯವನ್ನಾದರೂ ಗೆದ್ದ ವೈಟ್ವಾಷ್ ಮುಖಭಂಗವನ್ನು ತಪ್ಪಿಸಿಕೊಳ್ಳುವ ಇರಾದೆಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು.
-
Innings Break!
— BCCI (@BCCI) February 27, 2022 " class="align-text-top noRightClick twitterSection" data="
After opting to bat first, Sri Lanka post a total of 146/5.#TeamIndia chase coming up shortly. Stay tuned!
Scorecard - https://t.co/rmrqdXJhhV #INDvSL @Paytm pic.twitter.com/RA8sdYJXGT
">Innings Break!
— BCCI (@BCCI) February 27, 2022
After opting to bat first, Sri Lanka post a total of 146/5.#TeamIndia chase coming up shortly. Stay tuned!
Scorecard - https://t.co/rmrqdXJhhV #INDvSL @Paytm pic.twitter.com/RA8sdYJXGTInnings Break!
— BCCI (@BCCI) February 27, 2022
After opting to bat first, Sri Lanka post a total of 146/5.#TeamIndia chase coming up shortly. Stay tuned!
Scorecard - https://t.co/rmrqdXJhhV #INDvSL @Paytm pic.twitter.com/RA8sdYJXGT
ಆರಂಭಿಕರಾಗಿ ಕಣಕ್ಕಿಳಿದಿದ್ದ ಗುಣತಿಲಕ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಸಿರಾಜ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಖಾತೆ ತೆರೆಯದೇ ನಿರ್ಗಮಿಸಿದರು.
ನಂತರ ಕಳೆದ ಪಂದ್ಯದಲ್ಲಿ 75 ರನ್ಗಳಿಸಿದ್ದ ನಿಸ್ಸಾಂಕ(1) ಮತ್ತು ಅಸಲಂಕಾ ಕೇವಲ 4 ರನ್ಗಳಿಸಿ ಆವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದರು. ಜನಿತ್ ಲಿಯಾನಗೆ(9) ಆಟವನ್ನು ರವಿ ಬಿಷ್ಣೋಯ್ ನಿಲ್ಲಿಸಿದರು.
29ಕ್ಕೆ4 ವಿಕೆಟ್ ಕಳೆದುಕೊಂಡಿದ್ದ ವೇಳೆ ಒಂದಾದ ನಾಯಕ ದಸುನ್ ಶನಕ ಮತ್ತು ವಿಕೆಟ್ ಕೀಪರ್ ಅಸಲಂಕ 5ನೇ ವಿಕೆಟ್ಗೆ 31 ರನ್ ಸೇರಿಸಿದರು. ಚಾಂಡಿಮಲ್ 25 ರನ್ಗಳಿಸಿ ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ವೆಂಕಟೇಶ್ ಅಯಯ್ಯರ್ಗೆ ಕ್ಯಾಚ್ ನೀಡಿ ಔಟಾದರು.
ಆದರೆ ಕೊನೆಯವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದ ಶನಕ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 74 ರನ್ಗಳಿಸಿ ಲಂಕಾ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ತಪ್ಪಿಸಿದರು. ಕರಣುರತ್ನೆ 19 ಎಸೆತಗಳಲ್ಲಿ 12 ರನ್ಗಳಿಸಿದರು.
ಭಾರತದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಆವೇಶ್ ಖಾನ್ 23ಕ್ಕೆ 2, ರವಿ ಬಿಷ್ಣೋಯ್ 32ಕ್ಕೆ1, ಹರ್ಷಲ್ ಪಟೇಲ್ 29ಕ್ಕೆ1, ಮೊಹಮ್ಮದ್ ಸಿರಾಜ್ 22ಕ್ಕೆ1 ವಿಕೆಟ್ ಪಡೆದರು.
ಇದನ್ನೂ ಓದಿ: ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಕ್ರಿಕೆಟಿಗ : ರೋಹಿತ್ ಶರ್ಮಾ ಹೆಸರಿಗೆ ವಿಶ್ವದಾಖಲೆಯ ಗರಿ