ETV Bharat / sports

ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಶ್ರೀಲಂಕಾ: ಭಾರತದ ಏಷ್ಯಾ ಕಪ್​ ಫೈನಲ್​​ ಹಾದಿ ಕಠಿಣ - Etv bharat kannada

ಶ್ರೀಲಂಕಾ ವಿರುದ್ಧದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಏಷ್ಯಾ ಕಪ್​ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.

Sri Lanka Beat India
Sri Lanka Beat India
author img

By

Published : Sep 7, 2022, 7:31 AM IST

ದುಬೈ: ಪ್ರಸಕ್ತ ಸಾಲಿನ ಏಷ್ಯಾ ಕಪ್​ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಮೆಂಟ್​​ನಲ್ಲಿ ಭಾಗಿಯಾಗಿದ್ದ ರೋಹಿತ್​ ಶರ್ಮಾ ನಾಯಕತ್ವದ ಹಾಲಿ ಚಾಂಪಿಯನ್​​​ ಟೀಂ ಇಂಡಿಯಾ ಫೈನಲ್​ ಹಾದಿ ಕಠಿಣವಾಗಿದೆ. 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಎಡವಿಬಿದ್ದ ಭಾರತ, ಪ್ರಶಸ್ತಿ ಸುತ್ತು ತಲುಪಬೇಕಾದರೆ ಇತರೆ ಪಂದ್ಯಗಳ ಫಲಿತಾಂಶಗಳನ್ನೇ ಅವಲಂಬಿಸಬೇಕಿದೆ.

ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಸೂಪರ್​ 4 ಹಂತದ ನಾಲ್ಕನೇ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 6 ವಿಕೆಟ್​​​ಗಳ ಜಯ ಸಾಧಿಸಿತು. ಆಡಿರುವ ಎರಡು ಪಂದ್ಯಗಳಲ್ಲಿ ಗೆದ್ದು ಫೈನಲ್ ಹಾದಿ ಸುಗುಮಗೊಳಿಸಿದೆ. ಆದರೆ, ಸೂಪರ್​ ಫೋರ್​​​ನಲ್ಲಿ ಟೀಂ ಇಂಡಿಯಾ ಸತತ 2ನೇ ಸೋಲು ಕಂಡಿದೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ರೋಹಿತ್ ಬಳಗ ನಿಗದಿತ 20 ಓವರ್​​​​ಗಳಲ್ಲಿ 8 ವಿಕೆಟ್ ​ನಷ್ಟಕ್ಕೆ 173 ರನ್​​ ​​ಗಳಿಸಿತ್ತು. ಈ ಗುರಿ ಬೆನ್ನತ್ತಿದ ಸಿಂಹಳೀಯರು ಒಂದು ಎಸೆತ ಬಾಕಿ ಇರುವಂತೆ 4 ವಿಕೆಟ್​​​​ ಕಳೆದುಕೊಂಡು ಗೆಲುವಿನ ನಗೆ ಬೀರಿದರು.

ಟೀಂ ಇಂಡಿಯಾ ಇನ್ನಿಂಗ್ಸ್​ ಹೀಗಿತ್ತು..: ಟಾಸ್​ ಸೋತು ಬ್ಯಾಟ್ ಮಾಡಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಕೆ.ಎಲ್.ರಾಹುಲ್​(6) ಔಟಾದರು. ವಿರಾಟ್​​ ಕೊಹ್ಲಿ(0) ಕ್ಲೀನ್​ ಬೌಲ್ಡ್ ಆದರು. ಹೀಗಾಗಿ, ತಂಡ ಕೇವಲ 13 ರನ್​ ​​ಗಳಿಸುವಷ್ಟರಲ್ಲಿ 2 ಪ್ರಮುಖ ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರೀಸಿನಲ್ಲಿ ಒಂದಾದ ರೋಹಿತ್-ಸೂರ್ಯ ಜೋಡಿ 97 ರನ್‌ಗಳ ಜೊತೆಯಾಟ ನೀಡಿದರು.

ಇದನ್ನೂ ಓದಿ: ರವೀಂದ್ರ ಜಡೇಜಾ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ..ಅನಾರೋಗ್ಯದಿಂದ ಆವೇಶ್​ಖಾನ್​ ಟೂರ್ನಿಯಿಂದ ಔಟ್​

ಹಿಟ್​ಮ್ಯಾನ್ ಖ್ಯಾತಿಯ ರೋಹಿತ್‌ ಶರ್ಮಾ​​ 72 ರನ್​, ಸೂರ್ಯಕುಮಾರ್ ಯಾದವ್​ 34 ರನ್​​​ಗಳಿಕೆ ಮಾಡಿದರು. ಇವರ ವಿಕೆಟ್​ ಬೀಳುತ್ತಿದ್ದಂತೆ ಹಾರ್ದಿಕ್ ಪಾಂಡ್ಯ (17), ಪಂತ್ ​(17), ದೀಪಕ್ ಹೂಡಾ (3) ಹಾಗೂ ಅಶ್ವಿನ್​ ಅಜೇಯ(15) ರನ್​​​ಗಳಿಕೆ ಮಾಡಿದರು.

ಲಂಕಾ ಪರ ದಿಲ್ಯಾನ್ 3 ವಿಕೆಟ್​, ಕರುಣರತ್ನೆ, ಶಾನಕ ತಲಾ 2 ವಿಕೆಟ್ ಪಡೆದುಕೊಂಡರೆ, ತೀಕ್ಷಣ​​ 1 ವಿಕೆಟ್​ ಕಿತ್ತರು.

ಸಿಂಹಳೀಯರ ಇನ್ನಿಂಗ್ಸ್​​: 174 ರನ್​​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕ ಜೋಡಿ ನಿಸ್ಸಾಂಕ​-ಕುಸಾಲ್ ಮೆಂಡಿಸ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​​​​ಗೆ 97 ರನ್​​​​ ಆಟವಾಡಿತು. ಕೊನೆಗೂ, ಈ ಜೋಡಿಯ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಬೌಲರ್ಸ್​ ಕಮ್​​ಬ್ಯಾಕ್​ ಮಾಡಿದ್ದರು. ಮಧ್ಯಮ ಕ್ರಮಾಂಕದ ಅಸಲಂಕಾ(0) ಹಾಗೂ ಗುಣತಿಲಕ​(1) ವಿಕೆಟ್ ಪಡೆದು ಗೆಲುವಿನ ಮುನ್ಸೂಚನೆ ನೀಡಿದ್ದರು. ಆದರೆ, ಈ ವೇಳೆ ಒಂದಾದ ರಾಜಪಕ್ಸೆ ಹಾಗೂ ಕ್ಯಾಪ್ಟನ್ ಶಾನಕ ತಂಡವನ್ನು ಗೆಲ್ಲಿಸಿಕೊಟ್ಟರು.

ರಾಜಪಕ್ಸೆ-ಶಾನಕರನ್ನು ಕಾಡಿದ ಅರ್ಷ್‌ದೀಪ್​: ಶ್ರೀಲಂಕಾ ತಂಡಕ್ಕೆ ಕೊನೆ ಓವರ್​​ನಲ್ಲಿ ಗೆಲುವು ಸಾಧಿಸಲು 7 ರನ್​​​ಗಳ ಅವಶ್ಯಕತೆ ಇತ್ತು. ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಅರ್ಷ್‌ದೀಪ್​ ಲಂಕಾ ಬ್ಯಾಟರ್​​​​ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 5ರನ್​ ಬಿಟ್ಟುಕೊಟ್ಟರು. ಆದರೆ, 5ನೇ ಎಸೆತದಲ್ಲಿ ರನೌಟ್ ಮಾಡುವ ಭರದಲ್ಲಿ ಥ್ರೋ ಮಾಡಲು ಹೋಗಿ ಎರಡು ರನ್​​ ಬಿಟ್ಟುಕೊಟ್ಟರು. ಜೊತೆಗೆ ರನ್​ಔಟ್​​​ ಅವಕಾಶ ಸಹ ತಪ್ಪಿಸಿಕೊಂಡರು. ಹೀಗಾಗಿ, ಶ್ರೀಲಂಕಾ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಏಷ್ಯಾ ಕಪ್​ ಫೈನಲ್​ ಆಡುವುದನ್ನು ಖಚಿತಪಡಿಸಿಕೊಂಡಿದೆ.

ಟೀಂ ಇಂಡಿಯಾ ಪರ ಚಹಲ್​ 3 ವಿಕೆಟ್ ಪಡೆದುಕೊಂಡರೆ, ಆರ್​​.ಅಶ್ವಿನ್​ 1 ವಿಕೆಟ್​ ಕಿತ್ತರು. ಉಳಿದಂತೆ ಯಾವುದೇ ಬೌಲರ್​​ ಕೂಡಾ ಗಮನಾರ್ಹ ಪ್ರದರ್ಶನ ನೀಡಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.