ETV Bharat / sports

ಏಷ್ಯಾಕಪ್ 2023: ಹಸರಂಗ ಸೇರಿ ನಾಲ್ವರು ಅನುಭವಿಗಳ ಕೊರತೆ ಎದುರಿಸುತ್ತಿದೆ ಶ್ರೀಲಂಕಾ! - ಏಷ್ಯಾಕಪ್ 2023

Wanindu Hasaranga ruled out of Asia Cup 2023: ಏಷ್ಯಾಕಪ್​ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಶ್ರೀಲಂಕಾ ತಂಡವನ್ನು ಪ್ರಕಟಿಸಿದ್ದು, ಅನುಭವಿ ನಾಲ್ವರು ಬೌಲರ್​ಗಳು ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Aug 30, 2023, 2:14 PM IST

ಕೊಲಂಬೊ (ಶ್ರೀಲಂಕಾ): ಇಂದಿನಿಂದ ಆರಂಭವಾಗಲಿರುವ ಏಷ್ಯಾಕಪ್​ಗೆ ಶ್ರೀಲಂಕಾ ತಡವಾಗಿ ತಂಡವನ್ನು ಪ್ರಕಟಿಸಿದೆ. ಅನಾರೋಗ್ಯ ಮತ್ತು ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿರುವ ಸಿಂಹಳೀಯರು ಹಲವಾರು ಪ್ರಮುಖ ಆಟಗಾರರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕಬೇಕಾಗಿದೆ. ನಿನ್ನೆ (ಮಂಗಳವಾರ) ಏಷ್ಯಾಕಪ್ 2023 ಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಲೆಗ್ ಸ್ಪಿನ್ನರ್​ ಮತ್ತು ಆಲ್‌ರೌಂಡರ್ ವನಿಂದು ಹಸರಂಗಾ ತಂಡದಿಂದ ಹೊರಗಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಸರಂಗ ಏಷ್ಯಾಕಪ್​ನ ನಡುವೆಯೂ ತಂಡವನ್ನು ಸೇರುತ್ತಿಲ್ಲ. ಅವರ ಜೊತೆಗೆ ವೇಗಿಗಳಾದ ದುಷ್ಮಂತ ಚಮೀರ, ಲಹಿರು ಮಧುಶಂಕ ಮತ್ತು ಲಹಿರು ಕುಮಾರ ಕೂಡ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ಪ್ರಮುಖ ನಾಲ್ವರ ಬದಲಿಯಾಗಿ ಬಿನೂರ ಫೆರ್ನಾಂಡೋ ಮತ್ತು ಪ್ರಮೋದ್ ಮಧುಶನ್ ತಂಡವನ್ನು ಸೇರಿಕೊಂಡಿದ್ದಾರೆ. ಕುಸಾಲ್ ಪೆರೇರಾ ಏಕದಿನ ತಂಡದಿಂದ ಎರಡು ವರ್ಷದ ನಂತರ ಮರಳಿದ್ದು, ಅವರಿನ್ನೂ ಜ್ವರದಿಂದ ಬಳಲುತ್ತಿದ್ದಾರೆ. ಆದರೆ, ಅವರು ಗುಣಮುಖರಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ ಹೇಳಿದೆ.

ಇತ್ತಿಚೆಗೆ ನಡೆದ ಶ್ರೀಲಂಕಾ ಪ್ರೀಮಿಯರ್​ ಲೀಗ್​ 2023ರಲ್ಲಿ ಲಂಕಾದ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ವನಿಂದು ಹಸರಂಗ ಎಲ್‌ಪಿಎಲ್ ಸಮಯದಲ್ಲಿ ತೊಡೆಯ ಭಾಗದ ಗಾಯಕ್ಕೆ ಒಳಗಾಗಿದ್ದರು, ಇದರಿಂದ ಎಲ್‌ಪಿಎಲ್ ಲೀಗ್​ನಿಂದ ಹೊರಗುಳಿಯಬೇಕಾಯಿತು. ಪುನರ್ವಸತಿಯಲ್ಲಿರುವ ಹಸರಂಗ ಸಂಪೂರ್ಣ ಚೇತರಿಸಿಕೊಳ್ಳದಿರುವುದರಿಂದ ಏಷ್ಯಾಕಪ್​ನಿಂದಲೂ ಹೊರಗುಳಿಯ ಬೇಕಾದ ಪ್ರಸಂಗ ಬಂದಿದೆ. ವಿಶ್ವಕಪ್​ ವೇಳೆಗೆ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಚಮೀರಾಗೆ ಎದೆಯ ಭಾಗದ ಸ್ನಾಯುವಿನಲ್ಲಿ ನೋವು ಕಾಣಿಸಿಕೊಂಡಿದೆ. ಕಳೆದ ವಾರ ಅಭ್ಯಾಸ ಪಂದ್ಯದ ವೇಳೆ ಮಧುಶಂಕ ಗಾಯಕ್ಕೆ ತುತ್ತಾಗಿದ್ದಾರೆ. ಲಹಿರು ಕುಮಾರ್​ ಅವರು ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ. ತಂಡದ ನಾಯಕತ್ವವನ್ನು ದಸುನ್ ಶನಕ ವಹಿಸಿದ್ದು, ಕುಸಾಲ್ ಮೆಂಡಿಸ್ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ ಜೊತೆಗೆ ಶನಕ ತಂಡಕ್ಕೆ ಸೇರ್ಪಡೆಗೊಂಡ ಆಲ್‌ರೌಂಡರ್‌ ಆಗಿದ್ದಾರೆ. ದುನಿತ್ ವೆಲ್ಲಲಗೆ ಮತ್ತು ದುಶಾನ್ ಹೇಮಂತ ಅವರ ನೆರವಿನೊಂದಿಗೆ ಹಸರಂಗ ಅವರ ಅನುಪಸ್ಥಿತಿಯಲ್ಲಿ ಮಹೇಶ್ ತೀಕ್ಷಣ ಅವರು ಸ್ಪಿನ್ ವಿಭಾಗವನ್ನು ನಿರ್ವಹಿಸಲಿದ್ದಾರೆ. ಶ್ರೀಲಂಕಾ ಏಷ್ಯಾ ಕಪ್​ನ ತನ್ನ ಮೊದಲ ಪಂದ್ಯವನ್ನು ನಾಳೆ (ಗುರುವಾರ) ಬಾಂಗ್ಲಾದೇಶದ ವಿರುದ್ಧ ಪಲ್ಲೆಕೆಲೆ ಮೈದಾನದಲ್ಲಿ ಆಡಲಿದೆ.

ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾನಕ, ದಿಮುತ್ ಕರುಣರತ್ನೆ, ಕುಸಲ್ ಜನಿತ್ ಪೆರೇರಾ, ಕುಸಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ, ಮಹೇಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಮತೀಶ ಪತಿರಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫೆರ್ನಾಂಡೋ ಮತ್ತು ಪ್ರಮೋದ್ ಮದುಶನ್. (ಎಎನ್​ಐ)

ಇದನ್ನೂ ಓದಿ: ಏಷ್ಯಾಕಪ್​ ಆರಂಭಕ್ಕೂ ಮುನ್ನ ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ.. ಸ್ಟಾರ್​ ಆಟಗಾರ ಅಲಭ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.