ETV Bharat / sports

ಟಾಸ್​ ಗೆದ್ದು  ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಸನ್​ರೈಸರ್ಸ್​ ಹೈದರಾಬಾದ್​: ಶಕಿಬ್​​ಗೆ ಅವಕಾಶ ನೀಡಿದ ಕೆಕೆಆರ್​​ - ಎಸ್​ಆರ್​ ಹೆಚ್ vs ಕೆಕೆಆರ್​ ಟೀಮ್ ಅಪ್​ಡೇಟ್​

ಕೋಲ್ಕತ್ತಾ ನೈಟ್​ ರೈಡರ್ಸ್​ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಮತ್ತು 7 ಸೋಲು ಕಂಡಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರ ಪ್ಲೇ ಆಪ್ ಪ್ರವೇಶಿಸುವ ಆಸೆ ಜೀವಂತವಾಗಿರಲಿದೆ.

KKR vs SRH
KKR vs SRH
author img

By

Published : Oct 3, 2021, 7:16 PM IST

Updated : Oct 3, 2021, 7:25 PM IST

ದುಬೈ: ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಕೇನ್ ವಿಲಿಯಮ್ಸನ್​ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​ ಆಡಿರುವ 11 ಪಂದ್ಯಗಳಲ್ಲಿ 9 ಸೋಲು ಹಾಗೂ 2 ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿದೆ. ಈ ಪಂದ್ಯಗಳ ಗೆಲುವು ಸೋಲು ತಂಡಕ್ಕೆ ಯಾವುದೇ ಬದಲಾವಣೆ ತರುವುದಿಲ್ಲ. ಹಾಗಾಗಿ ಬೆಂಚ್​ ಕಾದಿರುವ ಆಟಗಾರರಿಗೆ ಅವಕಾಶ ಮಾಡಿಕೊಟ್ಟು ಅವರ ಬೆಳವಣಿಗೆಗೆ ಸಹಕಾರಿಯಾಗುವ ಉದ್ದೇಶವನ್ನು ಹೊಂದಿದೆ. ಸಂದೀಪ್​ ಶರ್ಮಾ ಬದಲಿಗೆ ಉಮರ್ ಮಲಿಕ್​ಗೆ ಅವಕಾಶ ನೀಡಿದೆ.

ಕೆಕೆಆರ್​ ಆಡಿರುವ 12 ಪಂದ್ಯಗಳಲ್ಲಿ 5 ಜಯ, 7 ಸೋಲುಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇಷ್ಟೇ ಜಯ ಮತ್ತು ಸೋಲು ಕಂಡಿರುವ ಮುಂಬೈ, ಕೆಕೆಆರ್​, ರಾಜಸ್ಥಾನ್​ ತಂಡಗಳು ಸಹಾ ಪ್ಲೇ ಆಫ್​ನ 4ನೇ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿವೆ. ಒಂದು ವೇಳೆ ಈ ಪಂದ್ಯದಲ್ಲಿ ಸೋಲು ಕಂಡರೆ ಕೋಲ್ಕತ್ತಾ ಪ್ಲೇ ಆಫ್​ ಕನಸು ಇತರೆ ತಂಡಗಳ ಫಲಿತಾಂಶದ ಮೇಲೆ ಅವಲಂಭಿತವಾಗಿರುತ್ತದೆ.

ಆಲ್​ರೌಂಡರ್​ ಆ್ಯಂಡ್ರೆ ರಸೆಲ್ ಮತ್ತು ಲಾಕಿ ಫರ್ಗುಸನ್​ ಗಾಯಕ್ಕೆ ಒಳಗಾಗಿದ್ದಾರೆ. ಕಳೆದ ಪಂದ್ಯದಲ್ಲಿ ಆಡಿದ್ದ ಸೀಫರ್ಟ್​ ಬದಲಿಗೆ ಶಕಿಬ್​ ಅಲ್ ಹಸನ್​ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ.

ಮುಖಾಮುಖಿ

ಎರಡೂ ತಂಡಗಳು 20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೋಲ್ಕತ್ತಾ ನೈಟ್​ ರೈಡರ್ಸ್​ 13 ರಲ್ಲಿ ಮತ್ತು ಹೈದರಾಬಾದ್​ 7ರಲ್ಲಿ ಜಯಸಾಧಿಸಿವೆ.

ಕೋಲ್ಕತ್ತಾ ನೈಟ್​ ರೈಡರ್ಸ್​: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೀ), ಶಕಿಬ್ ಅಲ್ ಹಸನ್, ಸುನೀಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕ್ರವರ್ತಿ

ಸನ್​ರೈಸರ್ಸ್​ ಹೈದರಾಬಾದ್​: ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿಕೀ), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮರ್ ಮಲಿಕ್​

Last Updated : Oct 3, 2021, 7:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.