ದುಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತಿರಿಸಿದ ಸನ್ರೈಸರ್ಸ್ ಹೈದರಾಬಾದ್ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 5ರನ್ಗಳಿಗೆ ಕುಸಿತ ಕಂಡಿದೆ.
ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ಆದರೆ ಅವರ ಲೆಕ್ಕಾಚಾರನ್ನು ಕೆಕೆಆರ್ ಬೌಲರ್ಗಳು ಮೊದಲ ಓವರ್ನಲ್ಲೇ ತಲೆಕೆಳಗಾಗುವಂತೆ ಮಾಡಿದರು.
ಆರಂಭಿಕ ಬ್ಯಾಟ್ಸ್ಮನ್ ವೃದ್ದಿಮಾನ್ ಸಹಾ ಖಾತೆ ತೆರೆಯದೇ ಸೌಥಿ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರ 4ನೇ ಓವರ್ನಲ್ಲಿ ಜೇಸನ್ ರಾಯಲ್ ಶಿವಂ ಮಾವಿ ಬೌಲಿಂಗ್ನಲ್ಲಿ ಸೌಥಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
-
INNINGS BREAK!
— IndianPremierLeague (@IPL) October 3, 2021 " class="align-text-top noRightClick twitterSection" data="
Impressive bowling performance from @KKRiders against #SRH! 👌 👌
2⃣ wickets each for @chakaravarthy29, Tim Southee & @ShivamMavi23. 👍 👍
Stay tuned for #KKR chase. #VIVOIPL #KKRvSRH
Scorecard 👉 https://t.co/Z5rRXTNps5 pic.twitter.com/G303wuh2R1
">INNINGS BREAK!
— IndianPremierLeague (@IPL) October 3, 2021
Impressive bowling performance from @KKRiders against #SRH! 👌 👌
2⃣ wickets each for @chakaravarthy29, Tim Southee & @ShivamMavi23. 👍 👍
Stay tuned for #KKR chase. #VIVOIPL #KKRvSRH
Scorecard 👉 https://t.co/Z5rRXTNps5 pic.twitter.com/G303wuh2R1INNINGS BREAK!
— IndianPremierLeague (@IPL) October 3, 2021
Impressive bowling performance from @KKRiders against #SRH! 👌 👌
2⃣ wickets each for @chakaravarthy29, Tim Southee & @ShivamMavi23. 👍 👍
Stay tuned for #KKR chase. #VIVOIPL #KKRvSRH
Scorecard 👉 https://t.co/Z5rRXTNps5 pic.twitter.com/G303wuh2R1
26 ರನ್ ಉತ್ತಮವಾಗಿ ಆಡುತ್ತಿದ್ದ ನಾಯಕ ಕೇನ್ ವಿಲಿಯಮ್ಸನ್ ರನ್ಔಟಾಗುತ್ತಿದ್ದಂತೆ ಹೈದರಾಬಾದ್ ಪತನ ಆರಂಭವಾಯಿತು. ಕೆಕೆಆರ್ ಬೌಲರ್ಗಳು ಒಂದು ಕಡೆ ನಿರಂತರ ವಿಕೆಟ್ ಪಡೆಯುವ ಜೊತೆಗೆ ರನ್ಗತಿಗೂ ಕಡಿವಾಣ ಹಾಕಿದರು.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಯುವ ಬ್ಯಾಟರ್ ಪ್ರಿಯಂ ಗರ್ಗ್ ರನ್ಗಳಿಸಲು ಪರದಾಡಿದರು. ಬರೋಬ್ಬರಿ 31 ಎಸೆತಗಳನ್ನೆದುರಿಸಿ ಕೇವಲ 21 ರನ್ಗಳಿಸಿ ಔಟಾದರು. ಓವರ್ಗಳು ಅಂತ್ಯವಾಗುತ್ತಿದ್ದ ಕಾರಣ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದ ಅಬ್ದುಲ್ ಸಮದ್ 18 ಎಸೆತಗಳಲ್ಲಿ 3 ಸಿಕ್ಸರ್ಗಳ ನೆರವಿನಿಂದ 25 ರನ್ಗಳಿಸಿ ಸೌತಿಗೆ ವಿಕೆಟ್ ಒಪ್ಪಿಸಿದರು.
ಆಲ್ರೌಂಡರ್ಗಳಾದ ಅಭಿಷೇಕ್ ಶರ್ಮಾ(6), ಜೇಸನ್ ಹೋಲ್ಡರ್(2), ರಶೀದ್ ಖಾನ್(8) ಕೂಡ ವೈಫಲ್ಯ ಅನುಭವಿಸಿದರು.
ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್ ತಂಡದ ಬೌಲರ್ಗಳಾದ ಟಿಮ್ ಸೌಥಿ 25ಕ್ಕೆ 2, ಶಿವಂ ಮಾವಿ 29ಕ್ಕೆ 2, ವರುಣ್ ಚಕ್ರವರ್ತಿ 26ಕ್ಕೆ 2 ಮತ್ತು ಶಕಿಬ್ ಅಲ್ ಹಸನ್ 20ಕ್ಕೆ 1 ವಿಕೆಟ್ ಪಡೆದು ಸನ್ರೈಸರ್ಸ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.