ರಾಜ್ ಕೋಟ್: ಕೇರಳ ತಂಡದ ವೇಗಿ ಎಸ್.ಶ್ರೀಶಾಂತ್ ನಿಷೇಧ ಮುಕ್ತರಾದ ನಂತರ ಮೊದಲ ಬಾರಿಗೆ ರಣಜಿ ಕ್ರಿಕೆಟ್ ಆಡುತ್ತಿದ್ದು, ಕಳೆದ ವಾರ ಮೇಘಾಲಯ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 9 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವಿಕೆಟ್ ಪಡೆದಿದ್ದರು. ಈ ವಿಕೆಟ್ ಪಡೆಯುತ್ತಿದ್ದಂತೆ ಶ್ರೀಶಾಂತ್ ಕ್ರಿಕೆಟ್ ಪಿಚ್ಗೆ ನಮಸ್ಕರಿಸಿ ಮುತ್ತಿಟ್ಟು ಸಂಭ್ರಮಿಸಿದ್ದರು.
ಮೇಘಾಲಯದ ಬ್ಯಾಟರ್ ಆರ್ಯನ್ ಬೋರಾ ವಿಕೆಟ್ ಪಡೆದಿದ್ದ ವಿಡಿಯೋವನ್ನು ಶ್ರೀಶಾಂತ್ ಬುಧವಾರ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ " ಅದು 9 ವರ್ಷಗಳ ನಂತರ ನನ್ನ ಮೊದಲ ವಿಕೆಟ್ ಆಗಿದೆ. ದೇವರ ದಯೆಗೆ ನಾನು ತುಂಬಾ ಸಂತೋಷಪಟ್ಟೆ ಮತ್ತು ಅದಕ್ಕಾಗಿ ನಾನು ಪಿಚ್ಗೆ ನನ್ನ ಪ್ರಣಾಮವನ್ನು ಅರ್ಪಿಸಿದೆ" ಎಂದು ಶ್ರೀಶಾಂತ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
-
Now that’s my 1st wicket after 9 long years..gods grace I was just over joyed and giving my Pranaam to the wicket ..❤️❤️❤️❤️❤️❤️❤️ #grateful #cricket #ketalacricket #bcci #india #Priceless pic.twitter.com/53JkZVUhoG
— Sreesanth (@sreesanth36) March 2, 2022 " class="align-text-top noRightClick twitterSection" data="
">Now that’s my 1st wicket after 9 long years..gods grace I was just over joyed and giving my Pranaam to the wicket ..❤️❤️❤️❤️❤️❤️❤️ #grateful #cricket #ketalacricket #bcci #india #Priceless pic.twitter.com/53JkZVUhoG
— Sreesanth (@sreesanth36) March 2, 2022Now that’s my 1st wicket after 9 long years..gods grace I was just over joyed and giving my Pranaam to the wicket ..❤️❤️❤️❤️❤️❤️❤️ #grateful #cricket #ketalacricket #bcci #india #Priceless pic.twitter.com/53JkZVUhoG
— Sreesanth (@sreesanth36) March 2, 2022
2013ರ ನಂತರ ಶ್ರೀಶಾಂತ್ ತಮ್ಮ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. 38 ವರ್ಷದ ವೇಗಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 213 ವಿಕೆಟ್ ಪಡೆದಿದ್ದರು.
ಶ್ರೀಶಾಂತ್ 2013ರ ಐಪಿಎಲ್ನ ಸ್ಪಾಟ್ ಫಿಕ್ಸಿಂಗ್ ನಂತರ ಅಜೀವ ನಿಷೇಧಕ್ಕೆ ಒಳಗಾಗಿದ್ದರು. ಹಲವು ಮನವಿಗಳ ನಂತರ ಅದನ್ನು 7 ವರ್ಷಗಳಿಗೆ ಇಳಿಸಲಾಗಿತ್ತು. ಭಾರತದ ಪರ ಅವರು 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 87,75 ಮತ್ತು 7 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ರಣಜಿ ಟ್ರೋಫಿ: ಪಾಂಡಿಚೇರಿ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ದೇವದತ್ ಪಡಿಕ್ಕಲ್