ETV Bharat / sports

ಬಾರ್ಡರ್​ ಗವಾಸ್ಕರ್​ ಸರಣಿ: ಕುಂಬ್ಳೆ, ಅಶ್ವಿನ್​ ಬಳಿಕ 100 ವಿಕೆಟ್​ ಕಿತ್ತ ನಾಥನ್​ ಲಿಯಾನ್​

ಬಾರ್ಡರ್​ ಗವಾಸ್ಕರ್​ ಟ್ರೋಫಿ- ಆಸ್ಟ್ರೇಲಿಯಾ ಭಾರತ ಸರಣಿ- ಆಸ್ಟ್ರೇಲಿಯಾ ಭಾರತ 2ನೇ ಟೆಸ್ಟ್​ ಪಂದ್ಯ- ನಾಥನ್ ಲಿಯಾನ್‌ ವಿಕೆಟ್​ ದಾಖಲೆ- 100 ವಿಕೆಟ್​ ಪಡೆದ ಆಸೀಸ್​ ಮೊದಲ ಬೌಲರ್​ ಲಿಯಾನ್​- ಸ್ಪಿನ್ನರ್​ ನಾಥನ್​ ಲಿಯಾನ್​

nathan-lyon
ಸ್ಪಿನ್ನರ್​ ನಾಥನ್​ ಲಿಯಾನ್​
author img

By

Published : Feb 18, 2023, 9:21 PM IST

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್​ ಸ್ಪಿನ್ನರ್​ ನಾಥನ್ ಲಿಯಾನ್ ಮಹತ್ತರ ಸಾಧನೆ ಮಾಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 100 ವಿಕೆಟ್ ಪಡೆದ ಆಸ್ಟ್ರೇಲಿಯಾದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಲಿಯಾನ್ ಪಾತ್ರರಾದರು. ಅಲ್ಲದೇ, ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು.

ನಾಥನ್ ಲಿಯಾನ್‌ಗಿಂತ ಮೊದಲು ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ಬೌಲರ್ ರವಿಚಂದ್ರನ್ ಅಶ್ವಿನ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 100 ವಿಕೆಟ್‌ಗಳನ್ನು ಪಡೆದಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಕುಂಬ್ಳೆ ಒಟ್ಟಾರೆ 111 ವಿಕೆಟ್ ಪಡೆದಿದ್ದಾರೆ.

2 ನೇ ಟೆಸ್ಟ್​ ಮೊದಲ ದಿನದಂದು ಭಾರತದ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ ಕಾಂಗರೂ ಪಡೆಯ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆಯುವ ಮೂಲಕ 100 ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇಂದಿನ ಎರಡನೇ ದಿನದಾಟದಲ್ಲಿ ನಾಥನ್ ಲಿಯಾನ್ 100 ನೇ ವಿಕೆಟ್ ಪಡೆದರು. ಮೂರನೇ ಮತ್ತು ಮೊದಲ ಆಸ್ಟ್ರೇಲಿಯಾದ ಬೌಲರ್ ಎನಿಸಿಕೊಂಡಿದ್ದಾರೆ.

ಲಿಯಾನ್​ ಮಾರಕ ಬೌಲಿಂಗ್​ ದಾಳಿ: ಬಾರ್ಡರ್​ ಗವಾಸ್ಕರ್​ ಸರಣಿಯ 20ನೇ ಪಂದ್ಯವನ್ನಾಡುತ್ತಿರುವ ನಾಥನ್ ಲಿಯಾನ್ ಎರಡನೇ ಟೆಸ್ಟ್​ನ 2ನೇ ದಿನದಂದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ರೋಹಿತ್​ ಶರ್ಮಾ, ಕೆಎಲ್ ರಾಹುಲ್​, ಚೇತೇಶ್ವರ್​ ಪೂಜಾರಾ, ಶ್ರೇಯಸ್​ ಅಯ್ಯರ್​, ವಿಕೆಟ್ ಕೀಪರ್​ ಶ್ರೀಕರ್​ ಭರತ್​ ಸೇರಿ 5 ವಿಕೆಟ್ ಪಡೆಯುವ ಮೂಲಕ ಭಾರತ ತಂಡದ ಬ್ಯಾಟಿಂಗ್​ ಬೆನ್ನೆಲುಬು ಮುರಿದರು. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶ್ರೀಕರ್ ಭರತ್ ಅವರ ವಿಕೆಟ್ ಪಡೆದ ನಂತರ ಲಿಯಾನ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 100 ನೇ ವಿಕೆಟ್ ಪಡೆದ ಸಾಧನೆ ಮಾಡಿದರು.

ಇನ್ನು ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್​ನ 263 ರನ್​ಗಳ ಗುರಿಗೆ ಭಾರತ ಬ್ಯಾಟಿಂಗ್​ ವೈಫಲ್ಯದಿಂದಾಗಿ 262 ರನ್​ಗಳಿಗೆ ಸರ್ವಪತನ ಕಂಡಿತು. ನಾಯಕ ರೋಹಿತ್​ ಶರ್ಮಾ 32, ವಿರಾಟ್​ ಕೊಹ್ಲಿ 44, ಅಕ್ಷರ್​ ಪಟೇಲ್​ 74, ಆರ್​ ಅಶ್ವಿನ್​ 37 ರನ್​, ರವೀಂದ್ರ ಜಡೇಜಾ 26 ರನ್​ ಗಳಿಸಿದರೆ, ಉಳಿದವರು ಎರಡಂಕಿ ಮೊತ್ತ ಗಳಿಸಲು ಪರದಾಡಿದರು.

ದಿನದಾಟದ ಕೊನೆಯಲ್ಲಿ 2ನೇ ಇನಿಂಗ್ಸ್​ ಆರಂಭಿಸಿರುವ ಆಸ್ಟ್ರೇಲಿಯಾ 12 ಓವರ್​ಗಳಲ್ಲಿ 1 ವಿಕೆಟ್​ ನಷ್ಟಕ್ಕೆ 61 ರನ್​ ಗಳಿಸಿದೆ. ಮೊದಲ ಇನಿಂಗ್ಸ್​ನ 1 ರನ್​ ಮುನ್ನಡೆ ಸೇರಿ 62 ರನ್​ಗಳ ಮುನ್ನಡೆ ಸಾಧಿಸಿದೆ. 5 ನೇ ಓವರ್​ನಲ್ಲಿ ರವೀಂದ್ರ ಜಡೇಜಾ ಉಸ್ಮಾನ್​ ಖವಾಜಾರ ವಿಕೆಟ್​ ಪಡೆದು ದಿನದಂತ್ಯದಲ್ಲಿ ಮೇಲುಗೈ ಸಾಧಿಸಿದರು.

ವಿರಾಟ್​ ಕೊಹ್ಲಿ ವಿವಾದಿತ ಔಟ್​: ಪಂದ್ಯದಲ್ಲಿ ವಿರಾಟ್​ ಕೊಹ್ಲಿ ವಿವಾದಿತ ಅಂಪೈರ್​ ತೀರ್ಪಿಗೆ ಬಲಿಯಾದರು. 44 ರನ್​ ಗಳಿಸಿ ನೆಲೆಯೂರಿದ್ದ ವಿರಾಟ್​​ ಮ್ಯಾಥ್ಯೂ ಎಸೆತದಲ್ಲಿ ಎಲ್​ಬಿ ಆದರು. ಆದರೆ, ಚೆಂಡು ಬ್ಯಾಟ್​ ಮತ್ತು ಪ್ಯಾಡ್​ ಮಧ್ಯೆ ತಾಗಿತ್ತು. ಪ್ಯಾಡ್​​ಗೂ ತಾಕುವ ಮೊದಲು ಬ್ಯಾಟ್​ ಅಂಚಿಗೆ ಬಡಿದಿದ್ದು ಟಿವಿ ರಿಪ್ಲೈನಲ್ಲಿ ಕಾಣಿಸುತ್ತಿತ್ತು. ಇದು ವಿವಾದಕ್ಕೆ ಕಾರಣವಾಗಿದ್ದು, ಅಂಪೈರ್​ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಓದಿ: ಅಂಪೈರ್​ ನಿತಿನ್​ ಮೆನನ್​​ ಬಂಧಿಸಿ: ವಿರಾಟ್​ ಕೊಹ್ಲಿ ವಿವಾದಿತ ಔಟ್​ಗೆ ನೆಟ್ಟಿಗರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.