ಭಾರತದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರ ಬೌಲಿಂಗ್ ಮ್ಯಾಜಿಕ್ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯೂಜಿಲೆಂಡ್ ಎ ವಿರುದ್ಧ ಭಾರತ ಎ ತಂಡ ಎರಡನೇ ಅನಧಿಕೃತ ODI ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ಗಳನ್ನ ಕಬಳಿಸಿದರು. ಈ ಭಾರತೀಯ ಚೈನಾಮನ್ ಬೌಲರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಈ ಸಾಧನೆ ಮಾಡಿದ್ದಾರೆ.
ಎ ಟೀಂನಲ್ಲಿ ಕುಲದೀಪ್ ಯಾದವ್ ಮೊದಲ ಹ್ಯಾಟ್ರಿಕ್: ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಎ ತಂಡವು 7 ವಿಕೆಟ್ ನಷ್ಟಕ್ಕೆ 219 ರನ್‌ಗಳನ್ನು ಗಳಿಸಿ ಮುಂದೆ ಸಾಗುತ್ತಿತ್ತು. ಆದರೆ ಕುಲದೀಪ್ ಯಾದವ್ ಇದಕ್ಕೆ ಬ್ರೇಕ್ ಹಾಕಿದರು. ಸತತ 3 ಎಸೆತಗಳಲ್ಲಿ 3 ಆಟಗಾರರನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್ ಎ ತಂಡದ ಇನ್ನಿಂಗ್ಸ್ ಅನ್ನು 219 ರನ್‌ಗಳಿಗೆ ಕಟ್ಟಿಹಾಕಿದರು. ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಪ್ರದರ್ಶನದ ಬಗ್ಗೆ ಮಾತನಾಡುತ್ತ, ಅವರು 10 ಓವರ್‌ಗಳಲ್ಲಿ 51 ರನ್‌ಗಳನ್ನು ನೀಡಿ 4 ಆಟಗಾರರನ್ನು ಔಟ್ ಮಾಡಿದರು. ನ್ಯೂಜಿಲೆಂಡ್ ಎ ತಂಡ 47 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟ್ ಆಯಿತು. ಕುಲದೀಪ್ ಯಾದವ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ನಾಲ್ಕು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ ಕುಲದೀಪ್: ಮೊದಲ ಬಾರಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ಸಾಧಿಸಿದ್ದರು. ಇದಾದ ನಂತರ ಕುಲದೀಪ್ 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಕುಲದೀಪ್ ಯಾದವ್ ಅಂಡರ್ 19 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ 3 ಎಸೆತಗಳಲ್ಲಿ 3 ಆಟಗಾರರನ್ನು ಔಟ್ ಮಾಡಿದ್ದರು. ಇದೀಗ ಅವರು ನ್ಯೂಜಿಲೆಂಡ್ ಎ ವಿರುದ್ಧ ಭಾರತ ಎ ಪರ ಎರಡನೇ ಅನಧಿಕೃತ ODI ಪಂದ್ಯದಲ್ಲಿ 3 ಎಸೆತಗಳಲ್ಲಿ 3 ಆಟಗಾರರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಆದ್ರೂ ಇದು ಅಂತಾರಾಷ್ಟ್ರೀಯ ಪಂದ್ಯವಲ್ಲ. ಆದರೆ ಅದನ್ನು ಲಿಸ್ಟ್ ಎ ನಲ್ಲಿ ಪರಿಗಣಿಸಲಾಗುತ್ತದೆ. ಈ ಮೂಲಕ ಕುಲದೀಪ್ ಯಾದವ್ 4 ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಿದೆ.
ಓದಿ: ವಿರಾಟ್ ಕೈತಪ್ಪಿದ ಶ್ರೇಷ್ಠ ದಾಖಲೆ.. ಈವರೆಗೆ ಯಾವ ಭಾರತೀಯ ಬ್ಯಾಟರ್ಗಳ ಹೆಸರಿನಲ್ಲಿಲ್ಲ ಈ ರೆಕಾರ್ಡ್!