ETV Bharat / sports

ಮಗುವಿನ ಪ್ರಾಣ ಉಳಿಸಲು WTCಯಲ್ಲಿ ಹಾಕಿದ್ದ ಜರ್ಸಿ ಹರಾಜಿಗಿಟ್ಟ ಸೌಥಿ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಹಾಕಿಕೊಂಡಿದ್ದ ಜರ್ಸಿ ಹರಾಜಿಗಿಟ್ಟಿರುವ ಸೌಥಿ, ಅದರಿಂದ ಬರುವ ಹಣ ಕ್ಯಾನ್ಸರ್​ ಪೀಡಿತ ಮಗುವಿನ ಚಿಕಿತ್ಸೆಗೆ ನೀಡಲು ನಿರ್ಧರಿಸಿದ್ದಾರೆ. ಇದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Southee
Southee
author img

By

Published : Jun 29, 2021, 4:51 PM IST

ಆಕ್ಲೆಂಡ್​: ಕಳೆದ ಕೆಲ ದಿನಗಳ ಹಿಂದೆ ನಡೆದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ನ್ಯೂಜಿಲ್ಯಾಂಡ್ ತಂಡ 8 ವಿಕೆಟ್​ಗಳ ಗೆಲುವು ಸಾಧಿಸಿದ್ದು, ಹೊಸ ಇತಿಹಾಸ ಸೃಷ್ಟಿಸಿದೆ. ಈ ನಡುವೆ ವೇಗದ ಬೌಲರ್​ ಥಿಮ್​ ಸೌಥಿ ಎಲ್ಲರೂ ಮೆಚ್ಚುವಂತಹ ಕೆಲಸವೊಂದನ್ನ ಮಾಡಿದ್ದಾರೆ.

ಟೀಂ ಇಂಡಿಯಾ ವಿರುದ್ಧ ನ್ಯೂಜಿಲ್ಯಾಂಡ್​ ಐತಿಹಾಸಿಕ 8 ವಿಕೆಟ್​​ಗಳ ಗೆಲುವು ದಾಖಲು ಮಾಡಲು ಕಾರಣವಾಗಿದ್ದ 32 ವರ್ಷದ ಸೌಥಿ, ಪಂದ್ಯದ ವೇಳೆ ಹಾಕಿಕೊಂಡಿದ್ದ ಜರ್ಸಿ ಹರಾಜಿಗಿಟ್ಟಿದ್ದಾರೆ. ಅದರಿಂದ ಬರುವ ಹಣವನ್ನ 8 ವರ್ಷದ ಮಗುವಿನ ಕ್ಯಾನ್ಸರ್​ ಚಿಕಿತ್ಸೆಗೆ ನೀಡಲು ಮುಂದಾಗಿದ್ದಾರೆ. ಥಿಮ್​ ಸೌಥಿ ಹಾಕಿಕೊಂಡಿದ್ದ ಜರ್ಸಿ ಮೇಲೆ ನ್ಯೂಜಿಲ್ಯಾಂಡ್​ನ ಎಲ್ಲ ಪ್ಲೇಯರ್ಸ್​​ ಸಹಿ ಮಾಡಿದ್ದು, ಇದೀಗ ಅದನ್ನ ಹರಾಜು ಮಾಡಲು ಮುಂದಾಗಿದ್ದಾರೆ.

ಹಾಲಿ ಬೀಟ್ಟಿ ಎಂಬ 8 ವರ್ಷದ ಮಗುವೊಂದು ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಇದೀಗ ಜರ್ಸಿ ಹರಾಜಿನಿಂದ ಬರುವ ಹಣ ಮಗುವಿನ ಚಿಕಿತ್ಸೆಗೆ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ಸೌಥಿ, ತಾವು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಹಾಕಿಕೊಂಡಿದ್ದ ಜರ್ಸಿ ಹರಾಜಿಗೆ ನಿರ್ಧರಿಸಿದ್ದು, ಅದರಿಂದ ಬರುವ ಹಣ ಬೀಟ್ಟಿ ಕುಟುಂಬಕ್ಕೆ ನೀಡಲಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿರಿ: ಪ್ರೀತ್ಸೋದ್​ ತಪ್ಪಾ?: ಲವರ್ಸ್​ಗಳನ್ನ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಮಿಂಚಿದ್ದ ಸೌಥಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.