ETV Bharat / sports

ಆಫ್ರಿಕಾ - ಆಸ್ಟ್ರೇಲಿಯಾ ಏಕದಿನ ಸರಣಿ ರದ್ದು: ಹರಿಣಗಳ ತಂಡದ ವಿಶ್ವಕಪ್​ ನೇರ ಅರ್ಹತೆ ಡೌಟ್​!

2023ರ ಜನವರಿ ತಿಂಗಳಲ್ಲಿ ಆಸ್ಟ್ರೇಲಿಯಾ - ದಕ್ಷಿಣ ಆಫ್ರಿಕಾ ನಡುವೆ ನಡೆಯಬೇಕಾಗಿದ್ದ ಮೂರು ಏಕದಿನ ಪಂದ್ಯಗಳ ಸರಣಿ ರದ್ಧಾಗಿದೆ. ಹೀಗಾಗಿ, ಹರಿಣಗಳ ತಂಡ ಏಕದಿನ ವಿಶ್ವಕಪ್​​​ಗೆ ನೇರವಾಗಿ ಅರ್ಹತೆ ಪಡೆದುಕೊಳ್ಳುವುದು ಬಹುತೇಕ ಡೌಟ್​ ಎನ್ನಲಾಗ್ತಿದೆ.

ಆಫ್ರಿಕಾ-ಆಸ್ಟ್ರೇಲಿಯಾ ಏಕದಿನ ಸರಣಿ ರದ್ದು
ಆಫ್ರಿಕಾ-ಆಸ್ಟ್ರೇಲಿಯಾ ಏಕದಿನ ಸರಣಿ ರದ್ದು
author img

By

Published : Jul 13, 2022, 3:50 PM IST

ಹೈದರಾಬಾದ್​​: ದಕ್ಷಿಣ ಆಫ್ರಿಕಾ - ಆಸ್ಟ್ರೇಲಿಯಾ ನಡುವೆ ಜನವರಿ 12,14 ಮತ್ತು 17ರಂದು ನಡೆಯಬೇಕಾಗಿದ್ದ ಏಕದಿನ ಕ್ರಿಕೆಟ್ ಸರಣಿ ರದ್ದುಗೊಂಡಿದೆ. ಹೀಗಾಗಿ, ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್​ ಕ್ರಿಕೆಟ್ ಟೂರ್ನಿಗೆ ಹರಿಣಗಳ ತಂಡ ನೇರವಾಗಿ ಅರ್ಹತೆ ಪಡೆದುಕೊಳ್ಳುವುದು ಡೌಟ್​ ಎಂದು ಹೇಳಲಾಗ್ತಿದೆ. ಆಸ್ಟ್ರೇಲಿಯಾ ಪ್ರವಾಸದಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ಹೊರಡಿಸಿದ್ದು, ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಏಕದಿನ ವಿಶ್ವಕಪ್ ಹಾದಿ ದುರ್ಗಮವಾಗಿದೆ.

ದಕ್ಷಿಣ ಆಫ್ರಿಕಾ ಜನವರಿ ತಿಂಗಳಲ್ಲಿ ದೇಶೀಯ ಟಿ-20 ಕ್ರಿಕೆಟ್ ಲೀಗ್​ನಲ್ಲಿ ಭಾಗಿಯಾಗಲಿದೆ. ಹೀಗಾಗಿ, ದಿನಾಂಕ ಬದಲಾವಣೆ ಮಾಡುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಬೋರ್ಡ್ ಮನವಿ ಮಾಡಿಕೊಂಡಿತ್ತು. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಳಾಪಟ್ಟಿ ಈಗಾಗಲೇ ಸಿದ್ಧಗೊಂಡಿದ್ದು, ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ. ಉಭಯ ತಂಡಗಳ ನಡುವಿನ ಈ ಏಕದಿನ ಸರಣಿ ಐಸಿಸಿ ಸೂಪರ್​ ಲೀಗ್​ನ ಭಾಗವಾಗಿದ್ದು, 2023ರ ವಿಶ್ವಕಪ್​​ಗೆ ನೇರ ಅರ್ಹತೆ ನಿರ್ಧರಿಸುವ ಭಾಗವಾಗಿತ್ತು.

ಆಸ್ಟ್ರೇಲಿಯಾ ತಂಡಕ್ಕೆ 3 ಅಂಕ ಬಿಟ್ಟುಕೊಡಲು ಒಪ್ಪಿದ ಆಫ್ರಿಕಾ: ಈ ಏಕದಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿರುವ ದಕ್ಷಿಣ ಆಫ್ರಿಕಾ ಇದೀಗ ಅಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ಅಂಕ ಬಿಟ್ಟುಕೊಡಲು ಒಪ್ಪಿಕೊಂಡಿದೆ. ಹೀಗಾಗಿ, ದಕ್ಷಿಣ ಆಫ್ರಿಕಾ ತಂಡದ ವಿಶ್ವಕಪ್ ನೇರ ಅರ್ಹತೆ ಮೇಲೆ ಕರಿನೆರಳು ಬಿದ್ದಿದೆ. ಹೀಗಾಗಿ, ಏಕದಿನ ವಿಶ್ವಕಪ್​​ ಕ್ರಿಕೆಟ್ ಟೂರ್ನಿಗೋಸ್ಕರ ಹರಿಣಗಳ ತಂಡ ಅರ್ಹತಾ ಪಂದ್ಯಗಳನ್ನು ಆಡಬೇಕಾಗುತ್ತದೆ.

ಇದನ್ನೂ ಓದಿರಿ: ಗುರು ಪೌರ್ಣಿಮೆ: ಶಿವಸೇನೆ ಬಂಡಾಯ ಗುಂಪು ಗುರಿಯಾಗಿಸಿ ಸಂಜಯ್ ರಾವುತ್​ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.