ಗ್ಕೆಬರ್ಹಾ (ದಕ್ಷಿಣ ಆಫ್ರಿಕಾ): 2024ರ ಟಿ20 ವಿಶ್ವಕಪ್ ತಯಾರಿ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ 3 ಪಂದ್ಯಗಳ ಸರಣಿ ನಡೆಯುತ್ತಿದೆ. ಮೊದಲ ಪಂದ್ಯ ಮಳೆಗೆ ಆಹುತಿ ಆಯುತು. ತುಂತುರು ಮಳೆ ಮತ್ತು ಮೋಡದ ನಡುವೆಯೇ ಎರಡನೇ ಪಂದ್ಯದ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿದೆ.
ಆಸ್ಟ್ರೇಲಿಯಾ ಸರಣಿಯ ವೇಳೆ ವಿಶ್ರಾಂತಿಯಲ್ಲಿದ್ದ ಶುಭಮನ್ ಗಿಲ್ ತಂಡಕ್ಕೆ ಮರಳುತ್ತಿದ್ದಂತೆ ಆಡುವ ಬಳಗಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರನ್ನು ಕೈಬಿಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ರವಿ ಬಿಷ್ಣೋಯ್ ಕೈಬಿಟ್ಟು ಉಪನಾಯಕ ರವೀಂದ್ರ ಜಡೇಜಾ ಎರಡನೇ ಸ್ಪಿನ್ನರ್ ಆಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
-
🚨 Here's #TeamIndia's Playing XI 🔽
— BCCI (@BCCI) December 12, 2023 " class="align-text-top noRightClick twitterSection" data="
Follow the Match 👉 https://t.co/4DtSrebAgI
𝗡𝗢𝗧𝗘: Ruturaj Gaikwad was unavailable for selection for the 2nd #SAvIND T20I due to illness. pic.twitter.com/K52YOOgbwn
">🚨 Here's #TeamIndia's Playing XI 🔽
— BCCI (@BCCI) December 12, 2023
Follow the Match 👉 https://t.co/4DtSrebAgI
𝗡𝗢𝗧𝗘: Ruturaj Gaikwad was unavailable for selection for the 2nd #SAvIND T20I due to illness. pic.twitter.com/K52YOOgbwn🚨 Here's #TeamIndia's Playing XI 🔽
— BCCI (@BCCI) December 12, 2023
Follow the Match 👉 https://t.co/4DtSrebAgI
𝗡𝗢𝗧𝗘: Ruturaj Gaikwad was unavailable for selection for the 2nd #SAvIND T20I due to illness. pic.twitter.com/K52YOOgbwn
ಏಕದಿನ ವಿಶ್ವಕಪ್ನಲ್ಲಿ ಆಡಿದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ಗೆ ಅವಕಾಶ ಸಿಕ್ಕಿಲ್ಲ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಆಡಿದ್ದರು. ಕೊನೆಯ ಪಂದ್ಯದಲ್ಲಿ ಅರ್ಧಶತಕವನ್ನೂ ದಾಖಲಿಸಿದ್ದರು. ಆದರೆ ಅವರನ್ನು ಕೈಬಿಟ್ಟು, ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾಗೆ ಅವಕಾಶ ಸಿಕ್ಕಿದೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಜಿತೇಶ್ ಶರ್ಮಾ ತವರಿನ ಟಿ20 ಸರಣಿಯ ನಂತರ ಮುಂದುವರೆದಿದ್ದಾರೆ.
ಭಾರತ ಈ ಪಂದ್ಯ ಸೇರಿದಂತೆ ಒಟ್ಟು 5 ಅಂತಾರಾಷ್ಟ್ರೀಯ ಪಂದ್ಯಗಳನ್ನು ಟಿ20 ವಿಶ್ವಕಪ್ಗೂ ಮುನ್ನ ಆಡುತ್ತದೆ. ಹೀಗಾಗಿ ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾಗೆ ವಿದೇಶಿ ಪಿಚ್ಗಳಲ್ಲಿ ಅನುಭವಕ್ಕಾಗಿ ಕೋಚ್ ದ್ರಾವಿಡ್ ಅವಕಾಶ ಮಾಡಿಕೊಟ್ಟಂತಿದೆ. ದಕ್ಷಿಣ ಆಫ್ರಿಕಾದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದ್ದು, ಕೆಲ ಪ್ರಯೋಗಗಳನ್ನು ಆ ಪಂದ್ಯದಲ್ಲೂ ನಿರೀಕ್ಷಿಸಬಹುದಾಗಿದೆ.
ತಂಡಗಳು ಇಂತಿವೆ.. ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಮುಖೇಶ್ ಕುಮಾರ್
ದಕ್ಷಿಣ ಆಫ್ರಿಕಾ: ಮ್ಯಾಥ್ಯೂ ಬ್ರೀಟ್ಜ್ಕೆ, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಲಿಜಾಡ್ ವಿಲಿಯಮ್ಸ್, ತಬ್ರೈಜ್ ಶಮ್ಸಿ
ಇದನ್ನೂ ಓದಿ: ರಿಷಭ್ ಪಂತ್ ನಾಯಕತ್ವದಲ್ಲೇ 2024ರ ಐಪಿಎಲ್ ಆಡಲಿದೆ ಡೆಲ್ಲಿ ಕ್ಯಾಪಿಟಲ್ಸ್..!