ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಮೈದಾನಕ್ಕಿಳಿಯಲು ಸಜ್ಜಾಗಿದೆ. 1992ರ ನಂತರ 9ನೇ ಬಾರಿಗೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, 31 ವರ್ಷಗಳ ಕಾಯುವಿಕೆ ಕೊನೆಗೊಳಿಸಲು ತಂಡ ಕಠಿಣ ತಯಾರಿ ನಡೆಸಿದೆ.
-
Preps in full swing for the Boxing Day Test 🙌#TeamIndia sharpen their fielding skills ahead of the first #SAvIND Test tomorrow in Centurion 👌👌 pic.twitter.com/SftEN2kDED
— BCCI (@BCCI) December 25, 2023 " class="align-text-top noRightClick twitterSection" data="
">Preps in full swing for the Boxing Day Test 🙌#TeamIndia sharpen their fielding skills ahead of the first #SAvIND Test tomorrow in Centurion 👌👌 pic.twitter.com/SftEN2kDED
— BCCI (@BCCI) December 25, 2023Preps in full swing for the Boxing Day Test 🙌#TeamIndia sharpen their fielding skills ahead of the first #SAvIND Test tomorrow in Centurion 👌👌 pic.twitter.com/SftEN2kDED
— BCCI (@BCCI) December 25, 2023
ನಾಳೆಯಿಂದ (ಮಂಗಳವಾರ) ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಬೌನ್ಸ್ ಮತ್ತು ಸ್ವಿಂಗ್ ಹೆಚ್ಚಿರುವ ಪಿಚ್ಗಳಲ್ಲಿ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಿದೆ. ಏಕದಿನ ವಿಶ್ವಕಪ್ನ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದೇ ಫಾರ್ಮ್ ಅನ್ನು ಇಲ್ಲಿಯೂ ಮುಂದುವರೆಸಿದಲ್ಲಿ ದಕ್ಷಿಣ ಆಫ್ರಿಕಾದ ಯುವ ಪಡೆಯನ್ನು ಮಣಿಸುವ ಅವಕಾಶವಿದೆ. ಆದರೆ ಮಳೆ ಕಾಡುವ ಮುನ್ಸೂಚನೆಯು ಅಡಚಣೆ ಇಲ್ಲದೇ ಪಂದ್ಯ ನಡೆಯುವ ಬಗ್ಗೆ ಅನುಮಾನ ಉಂಟುಮಾಡಿದೆ.
ದಕ್ಷಿಣ ಆಫ್ರಿಕಾದ ಗುಡ್ಡಗಾಡು ಪ್ರದೇಶದ ನಡುವೆ ಇರುವ ಸೆಂಚುರಿಯನ್ ಮೈದಾನದಲ್ಲಿ ವೇಗವಾಗಿ ಗಾಳಿ ಬೀಸುತ್ತದೆ. ಪಿಚ್ ಹೆಚ್ಚಿನ ಬೌನ್ಸ್ ಲಕ್ಷಣ ಹೊಂದಿದೆ. ಅಲ್ಲದೇ ಎತ್ತರದ ಜಾಗದಲ್ಲಿ ಮೈದಾನ ಇರುವುದು ಆಟಗಾರರ ಉಸಿರಾಟದ ಮೇಲೂ ಒತ್ತಡ ತರುತ್ತದೆ. ಈ ಎಲ್ಲಾ ಸವಾಲುಗಳನ್ನು ಭಾರತೀಯರು ಒಟ್ಟಿಗೆ ಎದುರಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರೋಹಿತ್ ಶರ್ಮಾ, ಇಲ್ಲಿ ಬೌನ್ಸಿ ಪಿಚ್ ಇರುತ್ತದೆ. ಹಾಗೆಯೇ ಉತ್ತಮ ಕೌಶಲ್ಯದಿಂದ ಬ್ಯಾಟಿಂಗ್ ಮಾಡಿದರೆ ರನ್ ಗಳಿಸಬಹುದು. ಆದರೆ ಪಿಚ್ ಅರಿಯುವುದು ಅತ್ಯಂತ ಮುಖ್ಯ ಎಂದರು. ಅಲ್ಲದೇ ಮಳೆ ಪಿಚ್ನ ವರ್ತನೆಯ ಮೇಲೆ ಪರಿಣಾಮ ಬೀರುವುದರಿಂದ ಬೌಲಿಂಗ್ ವಿಭಾಗದ ಆಯ್ಕೆಯ ಗೊಂದಲವನ್ನು ಅವರು ತೆರೆದಿಟ್ಟಿದ್ದಾರೆ.
-
Test Match Mode 🔛#TeamIndia batters are geared up for the Boxing Day Test 😎#SAvIND pic.twitter.com/Mvkvet6Ed9
— BCCI (@BCCI) December 25, 2023 " class="align-text-top noRightClick twitterSection" data="
">Test Match Mode 🔛#TeamIndia batters are geared up for the Boxing Day Test 😎#SAvIND pic.twitter.com/Mvkvet6Ed9
— BCCI (@BCCI) December 25, 2023Test Match Mode 🔛#TeamIndia batters are geared up for the Boxing Day Test 😎#SAvIND pic.twitter.com/Mvkvet6Ed9
— BCCI (@BCCI) December 25, 2023
ಸರಣಿ ಗೆಲ್ಲದ ಆರು ನಾಯಕರು: ಮೊಹಮ್ಮದ್ ಅಜರುದ್ದೀನ್ (1992), ಸಚಿನ್ ತೆಂಡೂಲ್ಕರ್ (1996), ಸೌರವ್ ಗಂಗೂಲಿ (2001) ನಾಯಕತ್ವದಲ್ಲಿ ಸರಣಿಯ ಒಂದು ಪಂದ್ಯವನ್ನೂ ಭಾರತ ಗೆದ್ದಿರಲಿಲ್ಲ. ರಾಹುಲ್ ದ್ರಾವಿಡ್ (2006-07), ಧೋನಿ (2010-11 ಮತ್ತು 2013-14), ವಿರಾಟ್ ಕೊಹ್ಲಿ (2018-19 ಮತ್ತು 2021-22) ನಾಯಕತ್ವದಲ್ಲಿ ತಂಡ ಒಂದೊಂದು ಪಂದ್ಯಗಳನ್ನು ಗೆದ್ದಿತ್ತು. ಆದರೆ 6 ನಾಯಕರು ಸರಣಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಕಠಿಣ ಬೌಲಿಂಗ್ ದಾಳಿ: ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರು ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್‌ಸೆನ್ ಮತ್ತು ಜೆರಾಲ್ಡ್ ಕೊಯೆಟ್ಜಿ ಅವರ ಪರೀಕ್ಷೆಯನ್ನು ಎದುರಿಸಬೇಕಿದೆ. ದೇಶೀ ನೆಲದಲ್ಲಿ ಟೆಸ್ಟ್ನಲ್ಲಿ ಉತ್ತಮ ಅಂಕಿಅಂಶ ಹೊಂದಿರುವ ಗಿಲ್ ವಿದೇಶದಲ್ಲಿ ಸಾಬೀತುಪಡಿಸಿಕೊಳ್ಳಬೇಕಿದೆ. ಗಾಯದಿಂದ ಚೇತರಿಸಿಕೊಂಡು ಏಕದಿನ ಮಾದರಿಯಲ್ಲಿ ಕಮ್ಬ್ಯಾಕ್ ಮಾಡಿರುವ ಶ್ರೇಯಸ್ ಅಯ್ಯರ್ಗೆ ಹೊಸ ಸವಾಲು ಮುಂದಿದೆ. ಇತ್ತೀಚೆಗೆ ಅಯ್ಯರ್ ಅವರ ಮೇಲೆ ಬೌನ್ಸ್ ಬಾಲ್ಗಳಿಗೆ ವಿಕೆಟ್ ಕೊಡುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇದನ್ನು ಅವರು ಸುಳ್ಳೆಂದು ಸಾಬೀತು ಮಾಡಬೇಕಿದೆ.
-
It is time for the Test series and Captain Rohit Sharma is READY! 💪🏾🙌🏽#TeamIndia | @ImRo45 | #SAvIND pic.twitter.com/EYwvGjuKGw
— BCCI (@BCCI) December 24, 2023 " class="align-text-top noRightClick twitterSection" data="
">It is time for the Test series and Captain Rohit Sharma is READY! 💪🏾🙌🏽#TeamIndia | @ImRo45 | #SAvIND pic.twitter.com/EYwvGjuKGw
— BCCI (@BCCI) December 24, 2023It is time for the Test series and Captain Rohit Sharma is READY! 💪🏾🙌🏽#TeamIndia | @ImRo45 | #SAvIND pic.twitter.com/EYwvGjuKGw
— BCCI (@BCCI) December 24, 2023
ಭಾರತದ ಪ್ರದರ್ಶನವು ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ. ನಾಯಕ ರೋಹಿತ್ ಶರ್ಮಾ ತನ್ನ ಹುಕ್ ಮತ್ತು ಪುಲ್ ಶಾಟ್‌ಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತಾರೆ, ವಿರಾಟ್ ಕೊಹ್ಲಿ ಆಫ್ ಸ್ಟಂಪ್‌ನ ಹೊರಗಿನ ಚೆಂಡನ್ನು ಎಷ್ಟು ಚಾಣಕ್ಷತೆಯಿಂದ ಎದುರಿಸುತ್ತಾರೆ ಮತ್ತು ತಂಡವು ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯನ್ನು ಯಾವ ರೀತಿ ತುಂಬುತ್ತದೆ ಎಂಬುದು ಮುಖ್ಯವಾಗಿದೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಎಲ್ಲರೂ ತಿಳಿದಿರುವಂತೆ ಪ್ರಮುಖ ವೇಗಿಗಳು. ಮುಖೇಶ್ ಕುಮಾರ್ ಮತ್ತು ಪ್ರಸಿದ್ಧ್ ಕೃಷ್ಣ ನಡುವೆ ಆಯ್ಕೆಯ ಗೊಂದಲ ಇನ್ನೂ ಮುಂದುವರೆದಿದೆ.
ಹರಿಣಗಳ ಬ್ಯಾಟಿಂಗ್ ಬಲ: ಅನುಭವಿ ತೆಂಬಾ ಬವುಮಾ, ನಿವೃತ್ತಿಯಾಗುತ್ತಿರುವ ಡೀನ್ ಎಲ್ಗರ್, ಸ್ಟೈಲಿಶ್ ಐಡೆನ್ ಮಾರ್ಕ್ರಾಮ್, ಟೋನಿ ಡಿ ಜೊರ್ಜಿ ಮತ್ತು ಕೀಗನ್ ಪೀಟರ್‌ಸನ್ ಅವರಿಗೆ ಭಾರತೀಯ ಬೌಲರ್‌ಗಳು ಕಠಿಣ ಸವಾಲುಗಳನ್ನು ನೀಡಬೇಕಿದೆ. ತವರು ಮೈದಾನದಲ್ಲಿ ಉತ್ತಮ ಅನುಭವ ಹೊಂದಿರುವ ಹರಿಣ ಪಡೆ ಭಾರತವನ್ನು ಕಾಡುವ ಸಾಧ್ಯತೆ ಹೆಚ್ಚಿದೆ.
-
#TeamIndia members are here at the SuperSport Park, as they gear up for the 1st Test against South Africa.#SAvIND pic.twitter.com/NEKEpSqL7s
— BCCI (@BCCI) December 24, 2023 " class="align-text-top noRightClick twitterSection" data="
">#TeamIndia members are here at the SuperSport Park, as they gear up for the 1st Test against South Africa.#SAvIND pic.twitter.com/NEKEpSqL7s
— BCCI (@BCCI) December 24, 2023#TeamIndia members are here at the SuperSport Park, as they gear up for the 1st Test against South Africa.#SAvIND pic.twitter.com/NEKEpSqL7s
— BCCI (@BCCI) December 24, 2023
ಅಶ್ವಿನ್ಗೆ ಸ್ಥಾನ ಅನುಮಾನ: ವೇಗಿಗಳಿಗೆ ಹೆಚ್ಚು ಸಹಕಾರಿಯಾಗುವ ಪಿಚ್ನಲ್ಲಿ ಐಸಿಸಿ ನಂ. 1 ಶ್ರೇಯಾಂಕದ ಬೌಲರ್ ರವಿಚಂದ್ರನ್ ಅಶ್ವಿನ್ ಆಡುವುದು ಅನುಮಾನ. ಬ್ಯಾಟಿಂಗ್ ಬಲದ ಜೊತೆಗೆ ಹೆಚ್ಚಿನ ವೇಗದ ಬೌಲಿಂಗ್ ದಾಳಿ ಬಳಸಿಕೊಳ್ಳುವ ದೃಷ್ಟಿಕೋನದಿಂದ 7ನೇ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್ ತಂಡದ ಸ್ಥಾನದಲ್ಲಿ ಪಡೆದುಕೊಳ್ಳುವ ನಿರೀಕ್ಷೆ ಇದೆ. ಸ್ಪಿನ್ ವಿಭಾಗದಲ್ಲಿ ಐಸಿಸಿ ಟೆಸ್ಟ್ ನಂ.1 ಆಲ್ರೌಂಡರ್ ಜಡೇಜಾ ಆಡಬಹುದು.
ಸಂಭಾವ್ಯ ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್, ಐಡೆನ್ ಮಾರ್ಕ್ರಾಮ್, ಟೋನಿ ಡಿ ಜೊರ್ಜಿ, ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ
ಪಂದ್ಯ: ಸೆಂಚುರಿಯನ್ನ ಸೂಪರ್‌ಸ್ಪೋರ್ಟ್ ಪಾರ್ಕ್
ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ
ಹವಾಮಾನ ವರದಿ: ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, 26ರಿಂದ 3 ದಿನಗಳ ಕಾಲ ಮಳೆ ಬೀಳುವ ಮುನ್ಸೂಚನೆ ಇದೆ.
ನೇರಪ್ರಸಾರ: ಡಿಸ್ನಿ+ ಹಾಟ್ಸ್ಟಾರ್ ಡಿಜಿಟಲ್ ವೇದಿಕೆ ಮತ್ತು ಸ್ಟಾರ್ಸ್ಪೋರ್ಟ್ಸ್ ವಾಹಿನಿ
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ: ವಿರಾಟ್ ಕೊಹ್ಲಿಯಿಂದ ಹಲವು ದಾಖಲೆಗಳ ನಿರೀಕ್ಷೆ