ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನ ಸೋಲಿನ ನಂತರ ಭಾರತ ತಂಡ ಮೊದಲ ಒನ್ಡೇ ಪಂದ್ಯವನ್ನು ಆಡುತ್ತಿದೆ. ಭಾನುವಾರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ರಹಿತವಾಗಿ ಕೆಎಲ್ ರಾಹುಲ್ ನಾಯಕತಯತ್ವದಲ್ಲಿ ಮುಂದಿನ ಭರವಸೆಯ ಯುವ ತಂಡ ಮೈದಾನಕ್ಕಿಳಿಯಲು ಸಜ್ಜಾಗಿದೆ.
-
Our ODI group has arrived in Johannesburg! 🙌🏽
— BCCI (@BCCI) December 15, 2023 " class="align-text-top noRightClick twitterSection" data="
Preparations have begun. 1st one-day on Sunday.#TeamIndia #SAvIND pic.twitter.com/82ho3o8qQK
">Our ODI group has arrived in Johannesburg! 🙌🏽
— BCCI (@BCCI) December 15, 2023
Preparations have begun. 1st one-day on Sunday.#TeamIndia #SAvIND pic.twitter.com/82ho3o8qQKOur ODI group has arrived in Johannesburg! 🙌🏽
— BCCI (@BCCI) December 15, 2023
Preparations have begun. 1st one-day on Sunday.#TeamIndia #SAvIND pic.twitter.com/82ho3o8qQK
ಏಕದಿನ ಸರಣಿಗೂ ಮುನ್ನ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-1 ರಿಂದ ಸಮಬಲ ಸಾಧಿಸಿದೆ. ಮೊದಲ ಪಂದ್ಯ ಟಾಸ್ ಕೂಡಾ ಕಾಣದೇ ಮಳೆಗೆ ಆಹುತಿ ಆದರೆ, ಎರಡನೇ ಪಂದ್ಯವನ್ನು ಸೋತರೂ ಅಂತಿಮ ಸವಾಲನ್ನು ಗೆದ್ದು ಸರಣಿ ಸೋಲಿನಿಂದ ತಪ್ಪಿಸಿಕೊಂಡಿತು. ಸೂರ್ಯ ನಾಯಕತ್ವದಲ್ಲಿ ತಂಡ ಆಸ್ಟ್ರೇಲಿಯಾ ನಂತರ ಹರಿಣಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿತು.
ರಾಷ್ಟ್ರೀಯ ತಂಡಗಳು ಒಂದೆಡೆ 2024ರ ಟಿ20 ವಿಶ್ವಕಪ್, ಮತ್ತೊಂದೆಡೆ 2025ರ ಚಾಂಪಿಯನ್ಸ್ ಟ್ರೋಫಿಗೆ ತಯಾರಿಗಳನ್ನು ಮಾಡುತ್ತಿದೆ. ಅನುಭವಿ ಆಟಗಾರರ ಹೊರತಾಗಿ ಐಸಿಸಿ ಟ್ರೋಫಿಯಲ್ಲಿ ಕಣಕ್ಕಿಳಿಯಲು ಬಿಸಿಸಿಐ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಅಲ್ಲದೇ, ಯುವ ತಂಡವನ್ನು ಸಿದ್ಧಪಡಿಸುತ್ತಿದೆ.
ಆರಂಭಿಕರು ಯಾರು?: ಹರಿಣಗಳ ವಿರುದ್ಧದ ಸರಣಿಗೆ ಆಯ್ಕೆ ಸಮಿತಿ ರುತುರಾಜ್ ಗಾಯಕ್ವಾಡ್ ಮತ್ತು ಸಾಯಿ ಸುದರ್ಶನ್ ಅವರನ್ನು ಮಾತ್ರ ಆರಂಭಿಕರನ್ನಾಗಿ ಆಯ್ಕೆ ಮಾಡಿದೆ. ಅಗತ್ಯ ಬಿದ್ದಲ್ಲಿ ನಾಯಕ ಕೆ ಎಲ್ ರಾಹುಲ್ ಪಂದ್ಯ ತೆರೆಯುವ ಸಾಮರ್ಥ್ಯ ಹೊಂದಿದ್ದಾರೆ. ಸಾಯಿ ಸುದರ್ಶನ್ ಪದಾರ್ಪಣೆಯ ಪಂದ್ಯ ಎದುರು ನೋಡುತ್ತಿದ್ದಾರೆ. 5ನೇ ಏಕದಿನ ಪಂದ್ಯದಲ್ಲಿ ಖಾತೆ ತೆರೆಯಲು ರುತುರಾಜ್ ಗಾಯಕ್ವಾಡ್ ಕಾತರದಿಂದ ಇದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಆಡಿದ ತಿಲಕ್ ವರ್ಮಾ ಮತ್ತೆ ಅದೇ ಸ್ಥಾನದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದರೆ, ಏಕದಿನ ವಿಶ್ವಕಪ್‌ನಲ್ಲಿ 4 ಮತ್ತು 5ನೇ ಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಕೆಳ ಕ್ರಮಾಂಕದಲ್ಲಿ ಮೂವರು ಬ್ಯಾಟರ್ಗಳ ನಡುವೆ ಪೈಪೋಟಿ ನಡೆಯಲಿದೆ. ಹಲವು ಬಾರಿ ಅವಕಾಶ ವಂಚಿತರಾಗಿರುವ ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಮತ್ತು ರಜತ್ ಪಾಟಿದಾರ್ ಸ್ಪರ್ಧೆಯಲ್ಲಿದ್ದಾರೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಯಲ್ಲಿ 6ನೇ ಸ್ಥಾನದಲ್ಲಿ ಅಬ್ಬರಿಸಿ ಫಿನಿಶರ್ ಸ್ಥಾನವನ್ನು ಪಡೆದುಕೊಂಡಿರುವ ರಿಂಕು ಏಕದಿನಕ್ಕೂ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಕೀಪಿಂಗ್ ನಿರ್ವಹಣೆ ಮಾಡುವುದರಿಂದ ಸಂಜುಗೆ ಸ್ಥಾನ ಸಿಗುವುದು ಅನುಮಾನವಾಗಿದೆ.
ಹರಿಣಗಳಿಗೆ ಬೌಲರ್ಗಳ ಕೊರತೆ: ದಕ್ಷಿಣ ಆಫ್ರಿಕಾ ತಂಡಕ್ಕೆ ಮೈನಸ್ ಆಗಿರುವುದು ಅನುಭವಿ ಬೌಲರ್ಗಳ ಕೊರತೆ. ವಿಶ್ರಾಂತಿ ಪಡೆದ ಕಗಿಸೊ ರಬಾಡ ಮತ್ತು ಗಾಯಗೊಂಡ ಅನ್ರಿಚ್ ನಾರ್ಟ್ಜೆ ಅವರ ಅನುಪಸ್ಥಿತಿ ಹರಿಣಗಳ ತಂಡವನ್ನು ದುರ್ಬಲಗೊಳಿಸಿದೆ. ಅಲ್ಲದೇ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಬ್ಯಾಟರ್ಗಳೂ ಸಹ ದಕ್ಷಿಣ ಆಫ್ರಿಕಾಕ್ಕೆ ಇಲ್ಲ. ವಿಶ್ವಕಪ್ ನಂತರ ಡಿ ಕಾಕ್ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಐಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ತಂಡದಲ್ಲಿರುವ ಅನುಭವಿ ಆಟಗಾರರಾಗಿದ್ದಾರೆ.
ಭಾರತಕ್ಕೂ ಇಲ್ಲ ಅನುಭವಿ ಬೌಲರ್ಗಳು: ಇತ್ತೀಚಿಗೆ ನಡೆದ ಏಕದಿನ ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ ಭಾರತದ ತ್ರಿವಳಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಂಡದ ಭಾಗವಾಗಿಲ್ಲ. ಟೆಸ್ಟ್ ಪಂದ್ಯದಲ್ಲಿ ಸಿರಾಜ್, ಬುಮ್ರಾ ಆಡಲಿರುವ ಕಾರಣ ಏಕದಿನ ಆಡಿಸುತ್ತಿಲ್ಲ. ಅನಾರೋಗ್ಯದಿಂದಾಗಿ ಮೊಹಮ್ಮದ್ ಶಮಿ ಹರಿಣಗಳ ವಿರುದ್ಧದ ಸರಣಿಯಲ್ಲಿ ಆಡುತ್ತಿಲ್ಲ. ಯುವ ಬೌಲಿಂಗ್ ಪಡೆಯಾದ ಅವೇಶ್ ಖಾನ್, ಮುಖೇಶ್ ಕುಮಾರ್, ಅರ್ಶದೀಪ್ ಸಿಂಗ್ ಮತ್ತು ಆಕಾಶ್ ದೀಪ್ ಮೇಲೆ ಬಿಸಿಸಿಐ ಭರವಸೆ ಇಟ್ಟಿದೆ.
ಸ್ಪಿನ್ ವಿಭಾಗ: ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಹರಿಣಗಳ ನಾಡಿನಲ್ಲಿ ಬಾಲ್ ತಿರುಗಿಸಲು ಆಯ್ಕೆ ಆಗಿದ್ದಾರೆ. ಹೆಚ್ಚು ಕಡಿಮೆ 3 ವರ್ಷಗಳ ನಂತರ 'ಕುಲ್ಚಾ' ಜೋಡಿ ಒಂದಾಗಿದ್ದು ಮತ್ತೆ ಕಮಾಲ್ ಮಾಡುತ್ತಾರಾ ಎಂದು ಕಾದು ನೋಡಬೇಕದೆ.
ಪಂದ್ಯ: ಡಿಸೆಂಬರ್ 17 ಭಾನುವಾರ, ಜೋಹಾನ್ಸ್ಬರ್ಗ್ನ ನ್ಯೂ ವಾಂಡರರ್ಸ್ ಸ್ಟೇಡಿಯಂ
ಸಮಯ: 1:30 ಭಾರತೀಯ ಕಾಲಮಾನ, ಡಿಸ್ನಿ+ ಹಾಟ್ಸ್ಟಾರ್ನಲ್ಲಿ ನೇರಪ್ರಸಾರ ಲಭ್ಯ.
ತಂಡಗಳು ಇಂತಿವೆ.. ಭಾರತ: ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಆಕಾಶ್ ದೀಪ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮನ್, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಟ್ಯುಬ್ರೇಸ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ, ಲಿಜಾಡ್ ವಿಲಿಯಮ್ಸ್.
ಇದನ್ನೂ ಓದಿ: ದಾಖಲೆಯ ಜಯ ದಾಖಲಿಸಿದ ವನಿತೆಯರು: ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮಿಸಿದ ತಂಡ