ETV Bharat / sports

ಜಾಕ್​ ಕಾಲೀಸ್​ಗೆ​ 21 ನೇ ಶತಮಾನದ ಶ್ರೇಷ್ಠ All rounder​ ಗೌರವ - ಆ್ಯಂಡ್ರ್ಯೂಫ್ಲಿಂಟಾಫ್

ಜಾಕ್ ಕಾಲೀಸ್ 1995ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ದೇಶದ ದ. ಆಫ್ರಿಕಾ ಪರ 166 ಟೆಸ್ಟ್​, 328 ಏಕದಿನ ಪಂದ್ಯ ಹಾಗೂ 25 ಟಿ-20 ಪಂದ್ಯಗಳನ್ನಾಡಿದ್ದು, 25,534 ರನ್​ ಮತ್ತು 580 ವಿಕೆಟ್​ ಪಡೆದಿದ್ದಾರೆ. ಎರಡೂ ಮಾದರಿಯಲ್ಲೂ 10 ಸಾವಿರ ರನ್ ಮತ್ತು 250 ವಿಕೆಟ್​ ಪಡೆದಿರುವ ವಿಶ್ವದ ಏಕೈಕ ಕ್ರಿಕೆಟರ್​ ಎಂಬ ವಿಶ್ವದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ.

ಜಾಕ್​ ಕಾಲೀಸ್
ಜಾಕ್​ ಕಾಲೀಸ್
author img

By

Published : Jun 23, 2021, 8:29 PM IST

Updated : Jun 23, 2021, 8:45 PM IST

ಸೌತಾಂಪ್ಟನ್​: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ವಿಶ್ವ ಟೆಸ್ಟ್​ ಫೈನಲ್ ಪಂದ್ಯ ಕ್ರಿಕೆಟ್​ ಅಭಿಮಾನಿಗಳನ್ನು ತನ್ನತ್ತ ಆಕರ್ಷಿಸಿದೆ. ಇದೇ ಸಂದರ್ಭದಲ್ಲಿ 21 ನೇ ಶತಮಾನದ ಶ್ರೇಷ್ಠ ಆಲ್​ರೌಂಡರ್​ಗಾಗಿ ಸ್ಟಾರ್ ಸ್ಪೋರ್ಟ್​ ನಡೆಸಿದ ಸಮೀಕ್ಷೆ ಹೊರಬಿದ್ದಿದ್ದು, ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್​ ಅವರಿಗೆ ಈ ಮಹತ್ವದ​ ಗೌರವ ಸಂದಿದೆ.

ಸ್ಟಾರ್​ ಸ್ಪೋರ್ಟ್ಸ್​ ಕಳೆದ ವಾರ ಬೆನ್​ಸ್ಟೋಕ್ಸ್​, ಭಾರತೀಯ ಆಲ್​ರೌಂಡರ್​ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಆ್ಯಂಡ್ರ್ಯೂ ಫ್ಲಿಂಟಾಫ್​ ಮತ್ತು ಜಾಕ್ ಕಾಲೀಸ್​ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.

ಈ ನಾಲ್ವರಲ್ಲಿ ಒಬ್ಬರಿಗೆ ಅಭಿಮಾನಿಗಳು ಮತ್ತು ಕ್ರಿಕೆಟ್ ಕಾಮೆಂಟೇಟರ್​ಗಳಿಗೆ ಮತ ಚಲಾಯಿಸಲು ಕೋರಲಾಗಿತ್ತು. ಇದೀಗ ಅದರ ಫಲಿತಾಂಶ ಹೊರ ಬಂದಿದ್ದು, ಜಾಕ್​ ಕಾಲೀಸ್​ಗೆ ಗೌರವ ಸಂದಿದೆ.

ಕಾಲೀಸ್ ಈ ವರ್ಷ ಐಸಿಸಿ ಘೋಷಿಸಿದ ಹಾಲ್​ ಆಫ್​ ಫೇಮ್ 2020ರ​ ಗೌರವಕ್ಕೂ ಪಾತ್ರರಾಗಿದ್ದರು. ಈ ಮೂಲಕ ಪ್ರತಿಷ್ಠಿತರ ಪಟ್ಟಿ ಸೇರಿದ ದಕ್ಷಿಣ ಆಫ್ರಿಕಾದ 4ನೇ ಆಟಗಾರ ಎನಿಸಿಕೊಂಡಿದ್ದರು.

ಜಾಕ್ ಕಾಲೀಸ್ 1995ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ದೇಶದ ದ. ಆಫ್ರಿಕಾ ಪರ 166 ಟೆಸ್ಟ್​, 328 ಏಕದಿನ ಪಂದ್ಯ ಹಾಗೂ 25 ಟಿ-20 ಪಂದ್ಯಗಳನ್ನಾಡಿದ್ದು, 25,534 ರನ್​ ಮತ್ತು 580 ವಿಕೆಟ್​ ಪಡೆದಿದ್ದಾರೆ. ಎರಡೂ ಮಾದರಿಯಲ್ಲೂ 10 ಸಾವಿರ ರನ್ ಮತ್ತು 250 ವಿಕೆಟ್​ ಪಡೆದಿರುವ ವಿಶ್ವದ ಏಕೈಕ ಕ್ರಿಕೆಟರ್​ ಎಂಬ ವಿಶ್ವದಾಖಲೆ ಇನ್ನೂ ಅವರ ಹೆಸರಿನಲ್ಲಿಯೇ ಇದೆ.

ಇದನ್ನು ಓದಿ:ಸಚಿನ್ ತೆಂಡೂಲ್ಕರ್​ಗೆ 21ನೇ ಶತಮಾನದ ಶ್ರೇಷ್ಠ ಟೆಸ್ಟ್​ ಬ್ಯಾಟ್ಸ್​ಮನ್​ ಗೌರವ

Last Updated : Jun 23, 2021, 8:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.