ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕಾರಯುತ ಗೆಲುವು ಸಾಧಿಸಿತು. ಸೋಫಿ ಡಿವೈನ್ರ ಆರ್ಭಟದ ಬ್ಯಾಟಿಂಗ್ ಮುಂದೆ ಗುಜರಾತ್ ಸೊಲ್ಲೆತ್ತಲಿಲ್ಲ. ಪಂದ್ಯದಲ್ಲಿ ಸೋಫಿ 8 ಸಿಕ್ಸರ್ ಬಾರಿಸಿ ಕ್ರಿಕೆಟ್ ರಸದೌತಣ ನೀಡಿದರು. ಇದೇ ವೇಳೆ ಚೆಂಡನ್ನು 94 ಮೀಟರ್ ದೂರ ಹೊಡೆದು ಅಚ್ಚರಿ ಮೂಡಿಸಿದರು.
ಸೋಫಿ ಹೊಡೆದ ಭರ್ಜರಿ ಸಿಕ್ಸರ್ ಸಾಮಾಜಿಕ ಜಾಲತಾಣದಲ್ಲಿ ಪಟಾಕಿ ಹಚ್ಚಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಸಿಕ್ಸರ್ ಹೊಡೆದ ಬಳಿಕ ಸೋಫಿಯೇ ಒಂದು ಕ್ಷಣ ಅಚ್ಚರಿಪಟ್ಟರು. ಇನ್ನು ಡಗೌಟ್ನಲ್ಲಿದ್ದ ಎಲ್ಲ ಆಟಗಾರ್ತಿಯರು ಸೋಫಿ ಪಂಚ್ಗೆ ಬೆಕ್ಕಸಬೆರಗಾದರು. ಇದಕ್ಕೂ ಮೊದಲು ಪಾಕಿಸ್ತಾನದ ಆಯೇಷಾ ನಸೀಮ್ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ 81 ಮೀಟರ್ ದೂರ ಸಿಕ್ಸರ್ ಬಾರಿಸಿದ್ದರು.
-
𝟗𝟒𝐌 long SIX by Sophie Devine ❤️👏#WPL2023 #CricketTwitter pic.twitter.com/F8nS7C5gAj
— Female Cricket (@imfemalecricket) March 18, 2023 " class="align-text-top noRightClick twitterSection" data="
">𝟗𝟒𝐌 long SIX by Sophie Devine ❤️👏#WPL2023 #CricketTwitter pic.twitter.com/F8nS7C5gAj
— Female Cricket (@imfemalecricket) March 18, 2023𝟗𝟒𝐌 long SIX by Sophie Devine ❤️👏#WPL2023 #CricketTwitter pic.twitter.com/F8nS7C5gAj
— Female Cricket (@imfemalecricket) March 18, 2023
6,4,4,6,4: ಗುಜರಾತ್ ನೀಡಿದ್ದ 189 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಸ್ಫೋಟಕ ಆರಂಭ ಕಂಡಿತು. ಆರಂಭಿಕರಾದ ಸೋಫಿ ಡಿವೈನ್ ಮತ್ತು ಸ್ಮೃತಿ ಮಂಧಾನ ಗುಜರಾತ್ ಜೈಂಟ್ಸ್ ಬೌಲರ್‌ಗಳ ಮೇಲೆರಗಿದರು. ಅದರಲ್ಲೂ ಸೋಫಿ, ಮೊದಲ ಓವರ್ನಿಂದಲೇ ಅಬ್ಬರಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಅವರು ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಆಶ್ಲೀ ಗಾರ್ಡ್ನರ್ ಎಸೆದ 2ನೇ ಓವರ್ನಲ್ಲಿ ಸೋಫಿ ತನ್ನ ಅಸಲಿ ಖದರ್ ತೋರಿಸಿದರು. ಮೊದಲ ಎಸೆತ ಡಾಟ್ ಮಾಡಿದರೆ, ಉಳಿದ ಐದು ಎಸೆತಗಳನ್ನು 6,4,4,6,4 ಬಾರಿಸಿ 24 ರನ್ ಗಳಿಸಿದರು. ಇದು ಮೈದಾನದಲ್ಲಿದ್ದ ಆರ್‌ಸಿಬಿ ಅಭಿಮಾನಿಗಳನ್ನು ರಂಜಿಸಿತು.
ಆರ್‌ಸಿಬಿ ಆಟಗಾರ್ತಿಯರ ಆರ್ಭಟದಿಂದ ಕೇವಲ 3.4 ಓವರ್‌ಗಳಲ್ಲಿ ತಂಡ 50 ರನ್ ಗಡಿ ದಾಟಿತು. ಆರು ಓವರ್‌ಗಳ ಪವರ್‌ಪ್ಲೇ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ, 77 ರನ್ ದಾಖಲಿಸಿತ್ತು. ಇದು ಮಹಿಳಾ ಐಪಿಎಲ್ನಲ್ಲಿ ತಂಡವೊಂದು ಪವರ್ಪ್ಲೇಯಲ್ಲಿ ಬಾರಿಸಿದ ಅತ್ಯಧಿಕ ಮೊತ್ತವಾಯಿತು.
-
BOOM 💥
— Women's Premier League (WPL) (@wplt20) March 18, 2023 " class="align-text-top noRightClick twitterSection" data="
6️⃣4️⃣4️⃣6️⃣4️⃣@RCBTweets have crossed FIFTY in the fourth over 🔥🔥
Follow the match ▶️ https://t.co/uTxwwRnRxl#TATAWPL | #RCBvGG pic.twitter.com/8B18NN4TRI
">BOOM 💥
— Women's Premier League (WPL) (@wplt20) March 18, 2023
6️⃣4️⃣4️⃣6️⃣4️⃣@RCBTweets have crossed FIFTY in the fourth over 🔥🔥
Follow the match ▶️ https://t.co/uTxwwRnRxl#TATAWPL | #RCBvGG pic.twitter.com/8B18NN4TRIBOOM 💥
— Women's Premier League (WPL) (@wplt20) March 18, 2023
6️⃣4️⃣4️⃣6️⃣4️⃣@RCBTweets have crossed FIFTY in the fourth over 🔥🔥
Follow the match ▶️ https://t.co/uTxwwRnRxl#TATAWPL | #RCBvGG pic.twitter.com/8B18NN4TRI
ನ್ಯೂಜಿಲ್ಯಾಂಡ್ನ ಸೋಫಿ ಡಿವೈನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಈ ವೇಳೆಗಾಗಲೇ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಅವರ ಬ್ಯಾಟ್ನಿಂದ ಸಿಡಿದಿದ್ದವು. ಇನ್ನೊಂದು ತುದಿಯಲ್ಲಿ ನಾಯಕಿ ಸ್ಮೃತಿ ಮಂಧಾನ ಆಗಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ, ಹೆಚ್ಚಿನ ಸ್ಟ್ರೈಕ್ ಅನ್ನು ಡಿವೈನ್ ಅವರಿಗೆ ನೀಡಿದರು. ಇದರಿಂದ ಆರ್‌ಸಿಬಿ ಕೇವಲ 8 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು.
ಆಕಾಶಕ್ಕೆ ಸಿಡಿದ ಚೆಂಡು: ಒಂಬತ್ತನೇ ಓವರ್ ಎಸೆಯಲು ಬಂದ ತನುಜಾ ಕನ್ವರ್ಗೆ ಡಿವೈನ್ ಬೆವರಿಳಿಸಿದರು. 3 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು. ಇದರಲ್ಲಿ ಒಂದು ಸಿಕ್ಸರ್ 94 ಮೀಟರ್ ದೂರ ದಾಖಲಾಯಿತು. ಇದು ಈವರೆಗಿನ ಅತ್ಯಧಿಕ ಅಂತರದ ಸಿಕ್ಸರ್ ಎಂದು ಪರಿಗಣಿತವಾಯಿತು. ಆರ್‌ಸಿಬಿ ಈ ಓವರ್ನಲ್ಲಿ 25 ರನ್ ಗಳಿಸಿತು. ತಂಡ ಒಟ್ಟಾರೆ 125 ರನ್ ಗಳಿಸಿತ್ತು. ಇದೇ ವೇಳೆ ನಾಯಕಿ ಮಂಧಾನ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ನೀಡಿದರು.
ಪ್ಲೇಆಫ್ ಕನಸು ಜೀವಂತ!: ಇಷ್ಟಾದರೂ ಬಿಡದ ಡಿವೈನ್ ಬ್ಯಾಟಿಂಗ್ ಅಬ್ಬರ ಮುಂದುವರಿಸಿದರು. ತಂಡ 11.1 ಓವರ್‌ಗಳಲ್ಲಿ 150 ರನ್ ಗಳಿಸಿತ್ತು. ಸೋಫಿ ಡಿವೈನ್ 36 ಎಸೆತಗಳಲ್ಲಿ 99 ರನ್ ಗಳಿಸಿದ್ದರು. ಶತಕದ ಅಂಚಿನಲ್ಲಿದ್ದ ಆಟಗಾರ್ತಿಗೆ ಕಿಮ್ ಗಾರ್ತ್ ಶಾಕ್ ನೀಡಿದರು. ತೇಲಿಬಂದ ಚೆಂಡನ್ನು ಬಾರಿಸಲು ಮುಂದಾದ ಡಿವೈನ್ ಅಶ್ವನಿ ಕುಮಾರಿಗೆ ಕ್ಯಾಚಿತ್ತು ಔಟಾದರು. ಇದರಿಂದ ಸೋಫಿ 1 ರನ್ನಿಂದ ಶತಕ ವಂಚಿತರಾದರು. ಕೊನೆಯಲ್ಲಿ ಹೀಥರ್ ನೈಟ್ ಮತ್ತು ಪೆರ್ರಿ ಉಳಿದ ರನ್ ಕಲೆ ಹಾಕಿ 27 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆಲ್ಲಿಸಿಕೊಟ್ಟರು. ಆರ್‌ಸಿಬಿ ಸತತ ಐದು ಸೋಲಿನ ಬಳಿಕ 2ನೇ ಗೆಲುವು ದಾಖಲಿಸಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿತು.
ಇದನ್ನೂ ಓದಿ: 36 ಎಸೆತ 99 ರನ್! ಸೋಫಿ ಡಿವೈನ್ RCBಯ ಕ್ರಿಸ್ ಗೇಲ್ ಎಂದ ನೆಟ್ಟಿಗರು! ಪ್ಲೇ ಆಫ್‌ಗೇರುತ್ತಾ ಮಂಧಾನ ಟೀಂ?