ETV Bharat / sports

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ

ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ತಂಡಕ್ಕೆ 5 ವರ್ಷಗಳ ನಂತರ ಕಮ್​ಬ್ಯಾಕ್​ ಮಾಡಿದ್ದ ಆಲ್​ರೌಂಡರ್​ ಸ್ನೇಹ್​ ರಾಣಾ ಮತ್ತೆ ಎಲ್ಲ ಮಾದರಿಯ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

women team for Australia tour
ಭಾರತ ಮಹಿಳಾ ತಂಡ
author img

By

Published : Aug 24, 2021, 9:33 PM IST

ಮುಂಬೈ: ಭಾರತ ಮಹಿಳಾ ತಂಡದ ಆಯ್ಕೆ ಸಮಿತಿ ಮಂಗಳವಾರ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಪ್ರಕಟಿಸಿದೆ. ಎರಡು ತಂಡಗಳು 3 ಏಕದಿನ ಪಂದ್ಯ, ಒಂದು ಡೇ ಅಂಡ್ ನೈಟ್​ ಟೆಸ್ಟ್​ ಮತ್ತು 3 ಟಿ-20 ಪಂದ್ಯಗಳನ್ನಾಡಲಿವೆ.

ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ತಂಡಕ್ಕೆ 5 ವರ್ಷಗಳ ನಂತರ ಕಮ್​ಬ್ಯಾಕ್​ ಮಾಡಿದ್ದ ಆಲ್​ರೌಂಡರ್​ ಸ್ನೇಹ್​ ರಾಣಾ ಮತ್ತೆ ಎಲ್ಲ ಮಾದರಿಯ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಏಕೈಕ ಟೆಸ್ಟ್​ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಭಾರತ ತಂಡ , ಏಕದಿನ ಮತ್ತು ಟಿ-20 ಸರಣಿ ಸೋಲು ಕಂಡಿತ್ತು.

ಇನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿರುವ ಎಲ್ಲ ಆಟಗಾರ್ತಿಯರು ಬೆಂಗಳೂರಿನಿಂದ ಆಗಸ್ಟ್​ 29 ಮತ್ತು 30ರಂದು ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ನಂತರ ಸರಣಿ ಆರಂಭಿಸುವ ಮುನ್ನ 2 ವಾರಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗಲಿದೆ.

ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ಮಹಿಳಾ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್​ಪ್ರೀತ್ ಕೌರ್ (ಉಪ-ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಪೂನಮ್ ರಾವತ್, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಯಾಸ್ತಿಕಾ ಭಾಟಿಯಾ, ತಾನಿಯಾ ಭಾಟಿಯಾ ( ವಿಕೆಟ್ ಕೀಪರ್), ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ರಿಚಾ ಘೋಷ್, ಏಕ್ತಾ ಬಿಶ್ತ್

ಭಾರತ ಮಹಿಳಾ ಟಿ 20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ-ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಯಾಸ್ತಿಕಾ ಭಾಟಿಯಾ, ಶಿಖಾ ಪಾಂಡೆ, ಮೇಘನಾ ಸಿಂಗ್, ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕವಾಡ್, ಪೂನಂ ಯಾದವ್, ರಿಚಾ ಘೋಷ್ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ಅರುಂಧತಿ ರೆಡ್ಡಿ, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್.

ಇದನ್ನು ಓದಿ:ಆರ್ ಅಶ್ವಿನ್​ಗೆ ತಂಡದ ಬಾಗಿಲು ಮುಚ್ಚಿಲ್ಲ.. 3ನೇ ಟೆಸ್ಟ್​ಗೆ ಮುನ್ನ ಕೊಹ್ಲಿ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.