ಗುವಾಹಟಿ (ಅಸ್ಸೋಂ): ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದ ವೇಳೆ ಹಾವು ನುಗ್ಗಿದೆ. ಮೈದಾನದಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ಒಂದೆರಡು ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಬೇಕಾಯಿತು. ನಂತರ ಪಂದ್ಯವನ್ನು ಪುನರಾರಂಭಿಸಲಾಯಿತು.
ಪಂದ್ಯದ ವೇಳೆ ಮಳೆಯ ನಿರೀಕ್ಷೆಯಿತ್ತು. ಆದರೆ, ಭಾರತದ ತಂಡ ತನ್ನ ಇನಿಂಗ್ಸ್ ಆರಂಭಿಸಿದ ಏಳನೇ ಓವರ್‌ನಲ್ಲಿ ಏಕಾಏಕಿ ಹಾವು ಕಾಣಿಸಿಕೊಂಡಿದೆ. ಈ ವೇಳೆ ದಕ್ಷಿಣ ಆಫ್ರಿಕಾದ ಆಟಗಾರರು ನೋಡಿ ಕ್ರೀಸ್ನಲ್ಲಿದ್ದ ಕೆಎಲ್ ರಾಹುಲ್ ಮತ್ತು ಆನ್ ಫೀಲ್ಡ್ ಅಂಪೈರ್‌ಗಳಿಗೆ ಗಮನಕ್ಕೆ ತಂದರು.
ನಂತರ ತಕ್ಷಣವೇ ಮೈದಾನದ ಸಿಬ್ಬಂದಿ ಧಾವಿಸಿ, ಒಂದೆರಡು ನಿಮಿಷದಲ್ಲಿ ಸಮಸ್ಯೆ ಬಗೆಹರಿಸಿದರು. ಏತನ್ಮಧ್ಯೆ, ಆಟಗಾರರು ಸಹ ಡ್ರಿಂಕ್ಸ್ ಬ್ರೇಕ್ ತೆಗೆದುಕೊಂಡರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದೆ.
ಇದನ್ನೂ ಓದಿ: 2ನೇ ಸಲ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಗೆದ್ದ ಇಂಡಿಯಾ ಲೆಜೆಂಡ್ಸ್.. ಲಂಕಾ ಲೆಜೆಂಡ್ಸ್ಗೆ ನಿರಾಸೆ