ನವದೆಹಲಿ: ಐರ್ಲೆಂಡ್ ಎದುರು ಭಾರತೀಯ ವನಿತೆಯರು ವರುಣನ ಅಡ್ಡಿಯ ನಡುವೆಯೂ ಗೆಲುವು ಸಾಧಿಸಿದ್ದು, ಬಿ ಗುಂಪಿನಿಂದ ಸೆಮೀಸ್ಗೆ ಪ್ರವೇಶಿಸಿದೆ. ಮಳೆಯ ಪರಿಣಾಮ 5 ರನ್ನಿಂದ ಐರ್ಲೆಂಡ್ ಸೋಲನುಭವಿಸಿತು. ಬಿರುಸಿನ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಮಂಧಾನ 87 ರನ್ ಗಳಿಸಿದ್ದಾರೆ. ಈ ಮೂಲಕ ಮಂಧಾನ 2023ರ ಟಿ20 ವಿಶ್ವಕಪ್ನ ಇದುವರೆಗಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
-
I. C. Y. M. I
— BCCI Women (@BCCIWomen) February 20, 2023 " class="align-text-top noRightClick twitterSection" data="
3️⃣0️⃣0️⃣0️⃣ T20I runs for @ImHarmanpreet! 🙌 🙌
Follow the match ▶️ https://t.co/rmyQRfmmLk #TeamIndia | #T20WorldCup | #INDvIRE pic.twitter.com/cveMzpcou1
">I. C. Y. M. I
— BCCI Women (@BCCIWomen) February 20, 2023
3️⃣0️⃣0️⃣0️⃣ T20I runs for @ImHarmanpreet! 🙌 🙌
Follow the match ▶️ https://t.co/rmyQRfmmLk #TeamIndia | #T20WorldCup | #INDvIRE pic.twitter.com/cveMzpcou1I. C. Y. M. I
— BCCI Women (@BCCIWomen) February 20, 2023
3️⃣0️⃣0️⃣0️⃣ T20I runs for @ImHarmanpreet! 🙌 🙌
Follow the match ▶️ https://t.co/rmyQRfmmLk #TeamIndia | #T20WorldCup | #INDvIRE pic.twitter.com/cveMzpcou1
ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ಅವರು ಮೂರು ಪಂದ್ಯದಿಂದ 54,37 ಮತ್ತು 55 ರನ್ನಿಂದ ಒಟ್ಟು 146 ರನ್ಗಳಿಸಿದ್ದಾರೆ. ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ನಂತರದ ಮೂರು ಪಂದ್ಯದಲ್ಲಿ 87, 10 ಮತ್ತು 52 ರನ್ನಿಂದ ಒಟ್ಟು 149 ಮೊತ್ತ ಕಲೆ ಹಾಕಿದ್ದಾರೆ. ಈ ಮೂಲಕ 2023ರ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
150 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ ದಾಖಲೆ: ನಿನ್ನೆ ನಾಯಕಿ ಹರ್ಮನ್ಪ್ರಿತ್ ಕೌರ್ ಅವರು ಅಂತಾರಾಷ್ಟ್ರೀಯ 150 ಪಂದ್ಯವನ್ನು ಆಡಿದರು. ಈ ಮೂಲಕ ಪುರುಷ ಮತ್ತು ಮಹಿಳಾ ವಿಭಾಗದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 150 ಪಂದ್ಯ ಆಡಿದ ಮೊದಲ ಪ್ಲೇಯರ್ ಎಂಬ ದಾಖಲೆ ಬರೆದರು. ಟೀ ಇಂಡಿಯಾ ನಾಯಕ ರೋಹಿತ್ ಶರ್ಮಾ 148 ಪಂದ್ಯಗಳನ್ನು ಆಡಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. 143 ಟಿ20 ಪಂದ್ಯಗಳನ್ನು ಆಡಿರುವ ನ್ಯೂಜಿಲ್ಯಾಂಡ್ನ ಮಾಜಿ ನಾಯಕಿ ಸೂಝಿ ಬೇಟ್ಸ್ ಮೂರನೇ ಸ್ಥಾನದಲ್ಲಿದ್ದಾರೆ.
ಅತೀ ಹೆಚ್ಚು ರನ್ ದಾಖಲೆ: ಅಂತಾರಾಷ್ಟ್ರೀಯ ಟಿ20ಯಲ್ಲಿ ಹರ್ಮನ್ಪ್ರಿತ್ ಕೌರ್ 3000 ರನ್ ಪೂರೈಸಿದ್ದಾರೆ. ಮೂರು ಸಹಸ್ರ ರನ್ಗಳಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಮತ್ತೊಂದೆಡೆ 3 ಸಾವಿರ ರನ್ ಗಳಿಸಿದ ವಿಶ್ವ ಕ್ರಿಕೆಟ್ನ 4ನೇ ಪ್ಲೇಯರ್ ಆಗಿದ್ದಾರೆ. ನ್ಯೂಜಿಲ್ಯಾಂಡ್ನ ಮಾಜಿ ನಾಯಕಿ ಸೂಝಿ ಬೇಟ್ಸ್ 3,820 ರನ್ನಿಂದ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಲ್ಯಾನಿಂಗ್ 3,346, ವೆಸ್ಟ್ ಇಂಡೀಸ್ನ ಸ್ಟೆಫಾನಿ 3,166 ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
ಮಂಧಾನ ಆಟಕ್ಕೆ ಒಲಿದ ಜಯ: ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಡಕ್ವರ್ತ್ ಲೂಯಿಸ್ (DLS) ನಿಯಮದಡಿ ಭಾರತ ತಂಡ 5 ರನ್ಗಳಿಂದ ಜಯಗಳಿಸುವ ಮೂಲಕ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ದೊರೆಯಿತು.
ಓಪನರ್ ಶಫಾಲಿ ವರ್ಮಾ ಅಬ್ಬರದ ಬ್ಯಾಟಿಂಗ್ ತೋರದಿದ್ದರೂ 24 ರನ್ ಬಾರಿಸಿದರು. ಇನ್ನೊಂದೆಡೆ, ಸ್ಮೃತಿ ಮಂಧಾನ ಬಿರುಸಿನ ಆಟವಾಡಿ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸುವ ಮೂಲಕ 87 ರನ್ಗಳನ್ನು ಕಲೆ ಹಾಕಿದರು. ಈ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಭಾರತ