ETV Bharat / sports

ದಕ್ಷಿಣ ಆಫ್ರಿಕಾದ ಎದುರಿನ ಉಳಿದೆರಡು ಪಂದ್ಯಗಳಿಗೆ ಬುಮ್ರಾ ಜಾಗಕ್ಕೆ ಸಿರಾಜ್​ - ಈಟಿವಿ ಭಾರತ ಕನ್ನಡ

ಬೆನ್ನು ನೋವಿನ ಕಾರಣ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿದ್ದಿದ್ದಾರೆ. ಅವರ ಜಾಗಕ್ಕೆ ಬಿಸಿಸಿಐ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ.

t20i-series-against-sa
ದಕ್ಷಿಣ ಆಫ್ರಿಕಾದ ಎದುರಿನ ಉಳಿದೆರಡು ಪಂದ್ಯಗಳಿಗೆ ಬೂಮ್ರಾ ಜಾಗಕ್ಕೆ ಸಿರಾಜ್​
author img

By

Published : Sep 30, 2022, 4:16 PM IST

ಗುವಾಹಟಿ: ಭಾರತದ ಪ್ರಮುಖ ವೇಗಿ, ಬೌಲಿಂಗ್​ ಟ್ರಂಪ್​ ಕಾರ್ಡ್​ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಿಂದ ಹೊರಹೋಗಿದ್ದಾರೆ. ಬೂಮ್ರಾ ಜಾಗಕ್ಕೆ ಬದಲಿಯಾಗಿ ಮೊಹಮ್ಮದ್ ಸಿರಾಜ್ ಆಯ್ಕೆ ಮಾಡಿರುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಖಚಿತಪಡಿಸಿದೆ .

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಯಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶಿಸಿ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಭಾನುವಾರ ರೋಹಿತ್​ ನಾಯಕತ್ವದಲ್ಲಿ ಗುವಾಹಟಿಯಲ್ಲಿ ಎರಡನೇ ಪಂದ್ಯ ಹಾಗೂ ಮಂಗಳವಾರ ಇಂದೋರ್‌ನಲ್ಲಿ ಮೂರನೇ ಟಿ 20 ಪಂದ್ಯ ನಡೆಯಲಿದೆ.

ಜಸ್ಪ್ರೀತ್ ಬುಮ್ರಾ ಅವರು ಗಾಯದಿಂದಾಗಿ ಇನ್ನು ಆರು ತಿಂಗಳು ಕ್ರಿಕೆಟ್​ನಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಅಕ್ಟೋಬರ್​ 16ರಿಂದ ನಡೆಯುವ ಟಿ-20 ವಿಶ್ವಕಪ್​ನಿಂದಲೂ ಹೊರಗುಳಿದಿದ್ದಾರೆ. ​ಏಷ್ಯಾ ಕಪ್​ ವೇಳೆಯೂ ಬೂಮ್ರಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದ್ದಿದ್ದರು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್ ಮತ್ತು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ ; ಭಾರತ ತಂಡಕ್ಕೆ ಶಾಕ್​..ಬೆನ್ನುಮೂಳೆ ಗಾಯದಿಂದ ಜಸ್ಪ್ರೀತ್​ ಬೂಮ್ರಾ ವಿಶ್ವಕಪ್​ನಿಂದ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.