ಕೋಲ್ಕತ್ತಾ: ವಿಶ್ವಕಪ್ ಬಳಿಕ ನ್ಯೂಜಿಲ್ಯಾಂಡ್ ಏಕದಿನ, ಟಿ20 ಸರಣಿಗೆ ಆಯ್ಕೆಯಾಗಿರುವ ಭಾರತದ ಬ್ಯಾಟರ್ ಶುಭ್ಮನ್ ಗಿಲ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದರಿಂದ ಪಂಜಾಬ್ ತಂಡ ಕರ್ನಾಟಕ ವಿರುದ್ಧ 9 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿತು. ಅಲ್ಲದೇ, ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾದ ದಿನದ ಬಳಿಕ ಗಿಲ್ ಈ ಸಾಧನೆ ಮಾಡಿರುವುದು ಆಯ್ಕೆ ಸಮಿತಿಯ ನಂಬಿಕೆ ಉಳಿಸಿಕೊಂಡಂತಾಗಿದೆ.
-
💯 for @ShubmanGill! 👏 👏
— BCCI Domestic (@BCCIdomestic) November 1, 2022 " class="align-text-top noRightClick twitterSection" data="
What a cracking knock this has been from the right-hander in the #QF1 of the #SyedMushtaqAliT20! 👌 👌 #KARvPUN | @mastercardindia
Follow the match ▶️ https://t.co/be91GGi9k5 pic.twitter.com/OaECrucM6g
">💯 for @ShubmanGill! 👏 👏
— BCCI Domestic (@BCCIdomestic) November 1, 2022
What a cracking knock this has been from the right-hander in the #QF1 of the #SyedMushtaqAliT20! 👌 👌 #KARvPUN | @mastercardindia
Follow the match ▶️ https://t.co/be91GGi9k5 pic.twitter.com/OaECrucM6g💯 for @ShubmanGill! 👏 👏
— BCCI Domestic (@BCCIdomestic) November 1, 2022
What a cracking knock this has been from the right-hander in the #QF1 of the #SyedMushtaqAliT20! 👌 👌 #KARvPUN | @mastercardindia
Follow the match ▶️ https://t.co/be91GGi9k5 pic.twitter.com/OaECrucM6g
ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ 55 ಎಸೆತಗಳಲ್ಲಿ 126 ರನ್ ಗಳಿಸಿದ ಶುಭಮನ್ ಗಿಲ್ ಮೊದಲ ಟಿ20 ಶತಕ ಗಳಿಸಿದರು. ಪಂಜಾಬ್ ನಿಗದಿತ ಓವರ್ನಲ್ಲಿ 4 ವಿಕೆಟ್ಗೆ 225 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ಗೆ ಗಿಲ್ ವೈಭವದ ಶತಕದ ಇನಿಂಗ್ಸ್ ಕಟ್ಟಿದರು. ಗಿಲ್ ಬ್ಯಾಟ್ನಿಂದ 11 ಬೌಂಡರಿ, 9 ಸಿಕ್ಸರ್ಗಳು ಸಿಡಿದವು. ಇದಲ್ಲದೇ, ಅನ್ಮೋಲ್ ಪ್ರೀತ್ ಸಿಂಗ್ ಕೂಡ ಸಿಡಿದು 59 ರನ್ ಗಳಿಸಿದರು. ಕೊನೆಯಲ್ಲಿ ಸನ್ವೀರ್ ಸಿಂಗ್ರ 27 ರನ್ಗಳಿಂದ ತಂಡ ಒಟ್ಟಾರೆ 225 ರನ್ಗಳ ಶಿಖರ ಕಟ್ಟಿತು.
ಹೋರಾಡಿ ಸೋತ ಕರ್ನಾಟಕ: ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ನಾಯಕ ಮಯಾಂಕ್ ಅಗರ್ವಾಲ್, ರೋಹನ್ ಪಾಟೀಲ್, ಲವ್ನೀತ್ ಸಿಸೋಡಿಯಾ ಎರಡಂಕಿ ದಾಟದೇ ಔಟಾದರು. ಇದರಿಂದ 18 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಬಳಿಕ ಕ್ರೀಸ್ ಹಂಚಿಕೊಂಡ ಮನೀಶ್ ಪಾಂಡೆ, ಎಲ್ಆರ್ ಚೇತನ್ ತಂಡಕ್ಕೆ ಚೇತರಿಕೆ ನೀಡಿದರು. ಸೊಗಸಾಗಿ ಬ್ಯಾಟ್ ಬೀಸಿ ಪಾಂಡೆ 45, ಚೇತನ್ 33 ರನ್ ಮಾಡಿದರು.
ಅಭಿನವ್ "ಮನೋಹರ ಅರ್ಧಶತಕ": ಪಾಂಡೆ ಔಟಾದ ಬಳಿಕ ಬಂದ ಅಭಿನವ್ ಮನೋಹರ್ ಮನಮೋಹಕ ಅರ್ಧಶತಕ ಬಾರಿಸಿದರು. ತಲಾ 5 ಬೌಂಡರಿ, ಸಿಕ್ಸರ್ ನೆರವಿನಿಂದ ಔಟಾಗದೇ 62 ರನ್ ಗಳಿಸಿದರು. ಮನೋಜ್ ಭಾಂಗ್ಡೆ 25, ಕೃಷ್ಣಪ್ಪ್ ಗೌತಮ್ ಔಟಾಗದೇ 30 ರನ್ ಬಾರಿಸಿದರೂ ಗೆಲ್ಲಲು ಸಾಧ್ಯವಾಗದೇ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿತು.
ಓದಿ: ಗಬ್ಬಾದಲ್ಲಿ ಇಂಗ್ಲೆಂಡ್ಗೆ ಹಬ್ಬ: ಕಿವೀಸ್ ವಿರುದ್ಧ 20 ರನ್ ಗೆಲುವು.. 3 ತಂಡಗಳ ಮಧ್ಯೆ ಸೆಮೀಸ್ ಜಿದ್ದಾಜಿದ್ದಿ