ಹೈದರಾಬಾದ್: ನ್ಯೂಜಿಲ್ಯಾಂಡ್ ವಿರುದ್ಧ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್(208, 149 ಎಸೆತ) ಅಬ್ಬರದ ದ್ವಿಶತಕ ಸಿಡಿಸಿದ್ದಾರೆ. ಗಿಲ್ 145 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಸಂಭ್ರಮಿಸಿದರು. ಈ ಸಾಧನೆ ಮಾಡಿದ ಅತ್ಯಂತ ಯುವ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಬಾರಿಸಿದೆ. ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಸಮಯೋಚಿತ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದರು. ತಂಡದ ಮೊತ್ತ 60 ರನ್ ಆಗಿದ್ದಾಗ, 34 ರನ್ ಬಾರಿಸಿದ್ದ ರೋಹಿತ್ ಶರ್ಮಾ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟ್ ಆದರು. ಬಳಿಕ ವಿರಾಟ್ ಕೊಹ್ಲಿ(8) ಹಾಗೂ ಇಶಾನ್ ಕಿಶನ್(8) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಸ್ಯಾಂಟ್ನರ್ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆದರೆ, ಕಿಶನ್ ಫರ್ಗ್ಯುಸನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದರು.
-
2⃣0⃣0⃣ !🔥 🎇
— BCCI (@BCCI) January 18, 2023 " class="align-text-top noRightClick twitterSection" data="
𝑮𝒍𝒐𝒓𝒊𝒐𝒖𝒔 𝑮𝒊𝒍𝒍!🙌🙌
One mighty knock! 💪 💪
The moment, the reactions & the celebrations 🎉 👏
Follow the match 👉 https://t.co/IQq47h2W47 #TeamIndia | #INDvNZ | @ShubmanGill pic.twitter.com/sKAeLqd8QV
">2⃣0⃣0⃣ !🔥 🎇
— BCCI (@BCCI) January 18, 2023
𝑮𝒍𝒐𝒓𝒊𝒐𝒖𝒔 𝑮𝒊𝒍𝒍!🙌🙌
One mighty knock! 💪 💪
The moment, the reactions & the celebrations 🎉 👏
Follow the match 👉 https://t.co/IQq47h2W47 #TeamIndia | #INDvNZ | @ShubmanGill pic.twitter.com/sKAeLqd8QV2⃣0⃣0⃣ !🔥 🎇
— BCCI (@BCCI) January 18, 2023
𝑮𝒍𝒐𝒓𝒊𝒐𝒖𝒔 𝑮𝒊𝒍𝒍!🙌🙌
One mighty knock! 💪 💪
The moment, the reactions & the celebrations 🎉 👏
Follow the match 👉 https://t.co/IQq47h2W47 #TeamIndia | #INDvNZ | @ShubmanGill pic.twitter.com/sKAeLqd8QV
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಸಹ, ಮತ್ತೊಂದು ತುದಿಯಲ್ಲಿ ಭದ್ರವಾಗಿ ನಿಂತು ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆ ಉಪಯುಕ್ತ ಜೊತೆಯಾಟ ಆಡಿದರು. ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ 26 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಬಳಿಕ ಹಾರ್ದಿಕ್ ಪಾಂಡ್ಯ 38 ಬಾಲ್ಗಳಲ್ಲಿ 28 ರನ್ ಬಾರಿಸಿ ಗಿಲ್ಗೆ ಸಾಥ್ ನೀಡಿದರು.
ಹ್ಯಾಟ್ರಿಕ್ ಸಿಕ್ಸರ್: ಪಾಂಡ್ಯ ಔಟಾದ ಬಳಿಕ ರನ್ ಗಳಿಕೆ ವೇಗ ಹೆಚ್ಚಿಸಿದ ಗಿಲ್ ಎದುರಾಳಿ ಬೌಲರ್ಗಳನ್ನು ಕಾಡಿದರು. ಪಂದ್ಯದ 30ನೇ ಓವರ್ನಲ್ಲಿ 87 ಎಸೆತಗಳಲ್ಲಿ ಶತಕದ ಗೆರೆ ದಾಟಿದ ಗಿಲ್ ಸಂಭ್ರಮಾಚರಣೆ ಮಾಡಿದರು. ಬಳಿಕ ಅಬ್ಬರದ ಬ್ಯಾಟಿಂಗ್ ಮುಂದುವರೆಸಿ, 145ನೇ ಎಸೆತದಲ್ಲಿ ಡಬಲ್ ಸೆಂಚುರಿ ಬಾರಿಸಿದರು. ಶುಭಮನ್ ಇನ್ನಿಂಗ್ಸ್ನಲ್ಲಿ 19 ಬೌಂಡರಿ ಹಾಗೂ 9 ಸಿಕ್ಸರ್ ಸೇರಿವೆ. 142 ಎಸೆತಗಳಲ್ಲಿ 182 ರನ್ ಗಳಿಸಿ ಆಡುತ್ತಿದ್ದ ಗಿಲ್, ಫರ್ಗ್ಯುಸನ್ ಎಸೆದ 49ನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮೈಲಿಗಲ್ಲು ತಲುಪಿ ಸಂಭ್ರಮಿಸಿದರು. ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಗಿಲ್ ಪಾತ್ರರಾಗಿದ್ದಾರೆ. ಕೆಲ ದಿನಗಳ ಹಿಂದೆ ಮತ್ತೋರ್ವ ಯುವ ಆಟಗಾರ ಇಶಾನ್ ಕಿಶನ್ ಬಾಂಗ್ಲಾದೇಶದ ವಿರುದ್ಧ ಅತಿವೇಗದ ದ್ವಿಶತಕ(126 ಎಸೆತ) ಬಾರಿಸಿ ದಾಖಲೆ ಬರೆದಿದ್ದರು.
ವಿಶ್ವದ 8ನೇ ಆಟಗಾರ : ಗಿಲ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಾಧಿಸಿದ ವಿಶ್ವದ 8ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ನಾಲ್ವರು ಭಾರತೀಯರು 200 ರನ್ ಗಡಿ ತಲುಪಿದ್ದಾರೆ. ಇವರಲ್ಲಿ ರೋಹಿತ್ ಶರ್ಮಾ 3 ದ್ವಿಶಕ ಬಾರಿಸಿರುವ ದಾಖಲೆ ಹೊಂದಿದ್ದಾರೆ. ದ್ವಿಶತಕ ಗಳಿಸಿದವರ ಮಾಹಿತಿ ಹೀಗಿದೆ.. 1. ಸಚಿನ್ ತೆಂಡೂಲ್ಕರ್ 200*, 2. ವೀರೇಂದ್ರ ಸೆಹ್ವಾಗ್ 219, 3. ರೋಹಿತ್ ಶರ್ಮಾ 208*, 209, 264, 4. ಇಶಾನ್ ಕಿಶನ್ 210, 5. ಮಾರ್ಟಿನ್ ಗುಪ್ತಿಲ್ 237 6. ಕ್ರಿಸ್ ಗೇಲ್ 215 7. ಫಖರ್ ಝಮಾನ್ 201*, 8. ಶುಭಮನ್ ಗಿಲ್ 208 ರನ್
ಇದನ್ನೂ ಓದಿ: ಐಸಿಸಿ ರ್‍ಯಾಂಕಿಂಗ್: ಲಂಕಾ ಮೇಲಿನ ವಿರಾಟ ಪ್ರದರ್ಶನಕ್ಕೆ ಕೊಹ್ಲಿ ಸ್ಥಾನದಲ್ಲಿ ಭಾರಿ ಏರಿಕೆ, ಸಿರಾಜ್ ಟಾಪ್ 3