ETV Bharat / sports

ಶುಭ್‌ಮನ್​ ಗಿಲ್​ಗೆ 'ಐಸಿಸಿ ತಿಂಗಳ ಆಟಗಾರ' ಗೌರವ; ನಾಳೆ ಪಾಕಿಸ್ತಾನ ವಿರುದ್ಧ ಆಡಿದರೆ ನಂ.1 ಪಟ್ಟ - Cricket World Cup 2023

ವಿಶ್ವಕಪ್​ಗೂ ಮೊದಲು ನಡೆದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕ್ರಿಕೆಟಿಗ ಶುಭ್‌ಮನ ಗಿಲ್​ ಅವರನ್ನು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ನೀಡಿ ಗೌರವಿಸಿದೆ.

Shubman Gill
Shubman Gill
author img

By ETV Bharat Karnataka Team

Published : Oct 13, 2023, 7:11 PM IST

ದುಬೈ: ಭಾರತ ಕ್ರಿಕೆಟ್ ತಂಡದ ಸ್ಟೈಲಿಶ್​ ಆಟಗಾರ ಶುಭ್‌ಮನ್​ ಗಿಲ್​ ಅವರನ್ನು ಐಸಿಸಿ 2023ರ ಸೆಪ್ಟೆಂಬರ್ ತಿಂಗಳ ಆಟಗಾರ ಎಂದು ಗುರುತಿಸಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ನ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಹೊಂದಿರುವ ಇವರು​ ಸೆಪ್ಟೆಂಬರ್ ತಿಂಗಳೊಂದರಲ್ಲಿ ಏಕದಿನ ಪಂದ್ಯಗಳಿಂದ 80ರ ಸರಾಸರಿಯಲ್ಲಿ 480 ರನ್​ ಕಲೆಹಾಕಿದ್ದಾರೆ. ತಿಂಗಳ ಆಟಗಾರ ಪ್ರಶಸ್ತಿಗೆ ಮೊಹಮ್ಮದ್​ ಸಿರಾಜ್​ ಮತ್ತು ಡೇವಿಡ್ ಮಲಾನ್ ಸ್ಪರ್ಧಿಗಳಾಗಿದ್ದರು.

ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಿಲ್​ ಉತ್ತಮ ಪ್ರದರ್ಶನ ನೀಡಿದ್ದರು. ಏಷ್ಯಾಕಪ್​ನಲ್ಲಿ 75.5ರ ಸರಾಸರಿಯಲ್ಲಿ 302 ರನ್ ಗಳಿಸಿದರು. ಫೈನಲ್​ ಪಂದ್ಯದಲ್ಲಿ ಅಜೇಯ 27 ರನ್ ಪೇರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 74 ರನ್​ ಮತ್ತು 104 ರನ್​ಗಳ ಇನ್ನಿಂಗ್ಸ್ ಕಟ್ಟಿದ್ದರು.

24 ವರ್ಷ ವಯಸ್ಸಿನ ಯುವ ಆಟಗಾರ 35 ಏಕದಿನ ಪಂದ್ಯಗಳನ್ನಾಡಿದ್ದು, 66.1 ಸರಾಸರಿಯಲ್ಲಿ ಮತ್ತು 102.84 ಸ್ಟ್ರೈಕ್‌ರೇಟ್‌ನಲ್ಲಿ 1917 ರನ್‌ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಒಂದು ದ್ವಿಶತಕ, 6 ಶತಕ ಮತ್ತು 9 ಅರ್ಧಶತಕ ಗಳಿಸಿದ್ದಾರೆ. ಐಸಿಸಿ ಶ್ರೇಯಾಂಕದಲ್ಲಿ ಗಿಲ್​ ಎರಡನೇ ಸ್ಥಾನದಲ್ಲಿದ್ದಾರೆ.

ವಿಶ್ವಕಪ್​ ವೇಳೆ ಅನಾರೋಗ್ಯಕ್ಕೆ ತುತ್ತಾದ ಗಿಲ್: ಈ ವರ್ಷ ಗೋಲ್ಡನ್​ ಫಾರ್ಮ್​ನಲ್ಲಿರುವ ಗಿಲ್​ ವಿಶ್ವಕಪ್​ಗೂ ಮುನ್ನ ಅನಾರೋಗ್ಯಕ್ಕೆ ತುತ್ತಾದರು. ಇದರಿಂದ ವಿಶ್ವಕಪ್​ನ ಆರಂಭಿಕ ಎರಡು ಪಂದ್ಯಗಳಾದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅಹಮದಾಬಾದ್​ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಗೆ ಗಿಲ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಬುಧವಾರ ಗುಜರಾತ್​ ತಲುಪಿರುವ ಗಿಲ್​ ಗುರುವಾರ ನೆಟ್ಸ್​​ನಲ್ಲಿ ಬೆವರಿಳಿಸಿದ್ದಾರೆ.

ಚೇತರಿಸಿಕೊಂಡು ಗಿಲ್​ ತಂಡಕ್ಕೆ ಮರಳಿದಲ್ಲಿ ಬಾಬರ್​ ಅಜಮ್​ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್​ನ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಳ್ಳುವುದು ಖಚಿತ. ಏಕೆಂದರೆ, ಬಾಬರ್​ ಅವರಿಗಿಂತ ಗಿಲ್​ ಕೇಲವ 5 ರೇಟಿಂಗ್​ ಪಾಯಿಂಟ್​ನಿಂದ ಹಿಂದಿದ್ದಾರೆ. ಹೀಗಾಗಿ ತಂಡಕ್ಕೆ ಮರಳಿ ಒಂದು ಅರ್ಧಶತಕ ದಾಖಲಿಸಿದಲ್ಲಿ ನಂ.1 ಪಟ್ಟ ಅಲಂಕರಿಸುವರು. ವಿಶ್ವಕಪ್​ನ ಎರಡು ಪಂದ್ಯದಲ್ಲಿ ಬಾಬರ್​ ಅಜಮ್​ 10 ಮತ್ತು 15 ರನ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಅವರ ಬ್ಯಾಟ್​ನಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿಲ್ಲ. ಶನಿವಾರ ನಡೆಯುವ ಪಂದ್ಯದಲ್ಲಿ ಬಾಬರ್​ ವಿಫಲರಾದರೆ, ಗಿಲ್​​ ಅಗ್ರಸ್ಥಾನ ಪಡೆಯುವ ಸಾಧ್ಯತೆಯೂ ಇದೆ.

ವನಿತೆಯ ಕ್ರಿಕೆಟ್​ನಲ್ಲಿ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಪತ್ತು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಲಂಕಾ ತಂಡ ಇಂಗ್ಲೆಂಡ್​ಗೆ ತೆರಳಿ ಆಡಿದ ಸರಣಿಯಲ್ಲಿ 2-1ರ ಐತಿಹಾಸಿಕ ಜಯ ದಾಖಲಿಸಿತ್ತು.

ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌: ನ್ಯೂಜಿಲೆಂಡ್‌ಗೆ ಸಾಧಾರಣ ಗುರಿ ನೀಡಿದ ಬಾಂಗ್ಲಾದೇಶ; ಹ್ಯಾಟ್ರಿಕ್‌ ವಿಜಯ ಸಾಧಿಸುವುದೇ ಕೇನ್‌ ಟೀಂ??

ETV Bharat Logo

Copyright © 2025 Ushodaya Enterprises Pvt. Ltd., All Rights Reserved.