ತರೌಬಾ (ವೆಸ್ಟ್ಇಂಡೀಸ್): ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿಯ ಜೊತೆಗೆ ಏಕದಿನ ಸರಣಿಯನ್ನೂ ವಶಪಡಿಸಿಕೊಂಡಿದೆ. ವಿಂಡೀಸ್ ತವರಿನಲ್ಲಿ 6ನೇ ಸರಣಿಯ ಸೋಲು ಕಂಡರೆ, ಭಾರತ ಕೆರಿಬಿಯನ್ನರ ವಿರುದ್ಧ ಸತತ 13ನೇ ಸಿರೀಸ್ ಅನ್ನು ವಶಕ್ಕೆ ಪಡೆದು ಸಂತಸದ ನಗೆ ಬೀರಿತು. ಅಲ್ಲದೇ ವಿದೇಶದಲ್ಲಿ ಅತ್ಯಂತ ಹೆಚ್ಚು ರನ್ ಅಂತರದ ಗೆಲುವನ್ನು ಮೂರನೇ ಏಕದಿನ ಪಂದ್ಯದಲ್ಲಿ ಸಾಧಿಸಿ ರೆಕಾರ್ಡ್ ಬರೆಯಿತು.
-
Ishan Kishan joins the rare list. pic.twitter.com/gaIsixoZLf
— Mufaddal Vohra (@mufaddal_vohra) August 1, 2023 " class="align-text-top noRightClick twitterSection" data="
">Ishan Kishan joins the rare list. pic.twitter.com/gaIsixoZLf
— Mufaddal Vohra (@mufaddal_vohra) August 1, 2023Ishan Kishan joins the rare list. pic.twitter.com/gaIsixoZLf
— Mufaddal Vohra (@mufaddal_vohra) August 1, 2023
ಏಷ್ಯಾಕಪ್ ಮತ್ತು ವಿಶ್ವಕಪ್ ಹಿನ್ನೆಲೆಯಲ್ಲಿ ಮೂರನೇ ಏಕದಿನ ಪಂದ್ಯದಲ್ಲೂ ಭಾರತ ತಂಡ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಮೈದಾಕ್ಕೆ ಇಳಿದಿತ್ತು. ನಾಯಕನ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದರು. ತರೌಬಾದ ಲಾರಾ ಮೈದಾನದಲ್ಲಿ ಆಡಿದ ಮೊದಲ ಏಕದಿನ ಪಂದ್ಯ ಮೊದಲ ಇನ್ನಿಂಗ್ಸ್ನಲ್ಲಿ 351 ರನ್ ಬೃಹತ್ ಮೊತ್ತವನ್ನು ಕಂಡಿತು. ಭಾರತ ನೀಡಿದ್ದ ಈ ಗುರಿಯನ್ನು ಬೆನ್ನು ಹತ್ತಿದ್ದ ವಿಂಡೀಸ್ 151ಕ್ಕೆ ಸರ್ವಪತನ ಕಂಡಿದ್ದರಿಂದ 200 ರನ್ನ ಬೃಹತ್ ಗೆಲುವನ್ನು ಭಾರತ ಕಂಡಿತು. ಇದು ಭಾರತ ವಿದೇಶಿ ನೆಲದಲ್ಲಿ ಸಾಧಿಸಿದ ಬೃಹತ್ ಅಂತರದ ಗೆಲುವಾದರೆ, ವಿಂಡೀಸ್ ವಿರುದ್ಧದ ಎರಡನೇ ಬೃಹತ್ ಮೊತ್ತವಾಗಿದೆ.
ಧೋನಿಯ ದಾಖಲೆ ಪಟ್ಟಿ ಸೇರಿದ ಕಿಶನ್: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಕಿಶನ್ ಸತತ ಒನ್ಡೇ ಸಿರೀಸ್ನಲ್ಲಿ ಮೂರನೇ ಅರ್ಧಶತಕವನ್ನು ಗಳಿಸಿದರು. ಈ ಮೂಲಕ ದ್ವಿಪಕ್ಷೀಯ ಮೂರು ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಅರ್ಧಶತಕ ತಲುಪಿದ ಭಾರತೀಯ ಆಟಗಾರರ ಪಟ್ಟಿಯನ್ನು ಸೇರಿದ್ದಾರೆ. ಈ ಪಟ್ಟಿಯ್ಲ ಕ್ರಿಸ್ ಶ್ರೀಕಾಂತ್ (1982), ದಿಲೀಪ್ ವೆಂಗ್‌ಸರ್ಕರ್ (1985), ಮೊಹಮ್ಮದ್ ಅಜರುದ್ದೀನ್ (1993), ಎಂಎಸ್ ಧೋನಿ (2019) ಮತ್ತು ಶ್ರೇಯಸ್ ಅಯ್ಯರ್ (2020) ಇದ್ದಾರೆ. ಇವರ ಜೊತೆ ಆರನೇ ಆಟಗಾರನಾಗಿ ಕಿಶನ್ ಸೇರಿಕೊಂಡಿದ್ದಾರೆ.
-
Ishan kishan in the last 4 innings in West Indies tour:
— Johns. (@CricCrazyJohns) August 1, 2023 " class="align-text-top noRightClick twitterSection" data="
- 52*(34) in 2nd Test.
- 52(46) in 1st ODI.
- 55(55) in 2nd ODI.
- 77(64) in 3rd ODI.
Incredible run for Ishan Kishan. pic.twitter.com/KJfKfjLldU
">Ishan kishan in the last 4 innings in West Indies tour:
— Johns. (@CricCrazyJohns) August 1, 2023
- 52*(34) in 2nd Test.
- 52(46) in 1st ODI.
- 55(55) in 2nd ODI.
- 77(64) in 3rd ODI.
Incredible run for Ishan Kishan. pic.twitter.com/KJfKfjLldUIshan kishan in the last 4 innings in West Indies tour:
— Johns. (@CricCrazyJohns) August 1, 2023
- 52*(34) in 2nd Test.
- 52(46) in 1st ODI.
- 55(55) in 2nd ODI.
- 77(64) in 3rd ODI.
Incredible run for Ishan Kishan. pic.twitter.com/KJfKfjLldU
10 ವರ್ಷದ ನಂತರ ಏಕದಿನ ಆಡಿದ ಉನಾದ್ಕತ್: ತೃತೀಯ ಏಕದಿನ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಬದಲಿಗೆ ತಂಡಕ್ಕೆ ಸೇರಿಕೊಂಡ ಜಯದೇವ್ ಉನಾದ್ಕತ್ 27 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 2013 ನವೆಂಬರ್ನಲ್ಲಿ ಕೊನೆಯ ಏಕದಿನ ಪಂದ್ಯವಾಗಿದ್ದ ಜಯದೇವ್ 3,539 ದಿನಗಳ ನಂತರ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಭಾರತದ ಮಾಜಿ ಆಟಗಾರ ರಾಬಿನ್ ಸಿಂಗ್ 2,786 ದಿನಗಳ ನಂತರ ಪಂದ್ಯವಾಡಿದ ದಾಖಲೆಯನ್ನು ಬರೆದಿದ್ದರು.
ಪಾಕ್ ಬ್ಯಾಟರ್ ಇಮಾನ್-ಉಲ್-ಹಕ್ ದಾಖಲೆ ಮುರಿದ ಗಿಲ್: ವಿಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 27ನೇ ಇನ್ನಿಂಗ್ಸ್ ಆಡಿದ ಶುಭಮನ್ ಗಿಲ್ ಪಾಕ್ ಬ್ಯಾಟರ್ ದಾಖಲೆಯನ್ನು ಮುರಿದರು. 27ನೇ ಇನ್ನಿಂಗ್ಸ್ನಲ್ಲಿ ಅಧಿಕ ಏಕದಿನ ರನ್ ದಾಖಲಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 27 ಏಕದಿನ ಪಂದ್ಯಗಳಲ್ಲಿ 62.48 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಗಿಲ್ 1,437 ರನ್ ಗಳಿಸಿದ್ದಾರೆ. ಇದರೊಂದಿಗೆ ಪಾಕ್ ಬ್ಯಾಟರ್ ಇಮಾನ್-ಉಲ್-ಹಕ್ರ 4 ವರ್ಷಗಳ ಸಾಧನೆ ಮುರಿದಿದ್ದಾರೆ. ಇಮಾನ್ 27 ಏಕದಿನ ಪಂದ್ಯಗಳಲ್ಲಿ 1381 ರನ್ ಮಾಡಿದ್ದರು.
ಇದನ್ನೂ ಓದಿ: 3ನೇ ಏಕದಿನ: ವೆಸ್ಟ್ ಇಂಡೀಸ್ ವಿರುದ್ಧ 200 ರನ್ ಜಯ: 2-1 ರಿಂದ ಭಾರತಕ್ಕೆ ಸರಣಿ, ಸತತ 13ನೇ ಸಿರೀಸ್ ಗೆಲುವು