ETV Bharat / sports

ಐಸಿಸಿ ಏಕದಿನ ಬ್ಯಾಟ್ಸ್‌ಮನ್​ ಶ್ರೇಯಾಂಕದಲ್ಲಿ ಶುಭಮನ್ ಗಿಲ್​ಗೆ 4ನೇ ಸ್ಥಾನ.. - ಐಸಿಸಿ ಏಕದಿನ ಬ್ಯಾಟ್ಸ್‌ಮನ್​ ಶ್ರೇಯಾಂಕ

ಶುಭಮನ್ ಗಿಲ್ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಮೊದಲ, ಎರಡು ಮತ್ತು ಐದನೇ ಸ್ಥಾನಗಳನ್ನು ಪಾಕ್ ಬ್ಯಾಟ್ಸ್‌ಮನ್‌ಗಳು ಆಕ್ರಮಿಸಿಕೊಂಡಿದ್ದಾರೆ.

Shubman Gill
ಶುಭಮನ್ ಗಿಲ್​
author img

By

Published : May 4, 2023, 5:32 PM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಇತ್ತೀಚಿನ ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತದ ಶುಭ್‌ಮನ್ ಗಿಲ್ ಒಂದು ಸ್ಥಾನ ಜಿಗಿದಿದ್ದಾರೆ. ಅಗ್ರ ಮೊದಲ ಐದು ಸ್ಥಾನದೊಳಗೆ ಶ್ರೆಯಾಂಕ ಗಳಿಸಿದ್ದಾರೆ. ಶುಭಮನ್ ಗಿಲ್ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಅಗ್ರ ಎರಡು ಸ್ಥಾನಗಳಲ್ಲಿ ಇಬ್ಬರು ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಮೊದಲ ಸ್ಥಾನದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಇದ್ದರೆ, ಎರಡನೇ ಸ್ಥಾನದಲ್ಲಿ ಪಾಕ್ ಕ್ರಿಕೆಟಿಗ ಫಖರ್ ಜಮಾನ್ ಸ್ಥಾನ ಪಡೆದಿದ್ದಾರೆ. ಫಖರ್ 8 ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು-ಪೊಲೀಸರ ಮಧ್ಯೆ ಸಂಘರ್ಷ: ಇಬ್ಬರಿಗೆ ಗಾಯ

ಏಳನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ: ಫಖರ್ ಅವರು 8 ಪಾಯಿಂಟ್‌ ಗಳಿಸಿದ್ದರಿಂದ ಒಬ್ಬ ಬ್ಯಾಟ್ಸ್‌ಮನ್ ತನ್ನ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಫಖರ್​ಗೂ ಮುನ್ನ ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ರಾಸಿ ವಾನ್ ದಾರ್ ಡುಸೆನ್ ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಸದ್ಯ ಅವರು ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಒಂದು ಸ್ಥಾನ ಪಡೆದು ನಾಲ್ಕನೇ ಶ್ರೇಯಾಂಕ​ದಲ್ಲಿದ್ದಾರೆ. ಇನ್ನು ಪಾಕಿಸ್ತಾನದ ಇಮಾಮ್ ಉಲ್ ಹಕ್ ಐದನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೆವಿಡ್ ವಾರ್ನರ್ ಆರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಎಂಟನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಒಂಬತ್ತನೇ ಶ್ರೇಯಾಂಕ​ದಲ್ಲಿದ್ದಾರೆ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ 10ನೇ ಸ್ಥಾನದಲ್ಲಿದ್ದಾರೆ.

ICC ODI Batsmen Ranking
ಐಸಿಸಿ ಏಕದಿನ ಬ್ಯಾಟ್ಸ್‌ಮನ್​ಗಳ ಶ್ರೇಯಾಂಕದಲ್ಲಿ ಆಟಗಾರ ಮಾಹಿತಿ

ಇದನ್ನೂ ಓದಿ: ಹೆಸರು ಬಳಸದೇ ಗೂಢಾರ್ಥದ ಟ್ವೀಟ್​ ಮಾಡಿದ ಗಂಭೀರ್: ಯಾರಿಗೆ ಗೊತ್ತಾ?

ಐಸಿಸಿ ಏಕದಿನ ಬೌಲರ್ ಶ್ರೇಯಾಂಕದಲ್ಲಿ ಮೊಹಮ್ಮದ್ ಸಿರಾಜ್​ಗೆ 2ನೇ ಸ್ಥಾನ: ಟಾಪ್-4 ರಲ್ಲಿರುವ ಶುಭಮನ್ ಗಿಲ್ 738 ರೇಟಿಂಗ್‌ಗಳನ್ನು ಹೊಂದಿದ್ದಾರೆ. ಏಳನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 719 ರೇಟಿಂಗ್‌ಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ 707 ರೇಟಿಂಗ್‌ನೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ, ಐಸಿಸಿ ಏಕದಿನ ಬೌಲರ್ ಶ್ರೇಯಾಂಕದ ಬಗ್ಗೆ ತಿಳಿಯುವುದಾದರೆ, ಮೊಹಮ್ಮದ್ ಸಿರಾಜ್ ಟಾಪ್ ಟೆನ್​ನಲ್ಲಿರುವ ಏಕೈಕ ಭಾರತೀಯ ಆಟಗಾರ. ಸಿರಾಜ್ 619 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 705 ರೇಟಿಂಗ್‌ನೊಂದಿಗೆ ಜೋಶ್ ಹ್ಯಾಜಲ್‌ವುಡ್ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಜೊತೆಗೆ ಭಾರತೀಯ ಆಟಗಾರರು ಐಸಿಸಿ ಆಲ್‌ರೌಂಡರ್‌ಗಳಲ್ಲಿ ಅಗ್ರ ಹತ್ತು ಸ್ಥಾನಗಳಿಂದ ಹೊರಗೆ ಉಳಿದಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 13ನೇ ಶ್ರೇಯಾಂಕದಲ್ಲಿದ್ದಾರೆ.

ಇದನ್ನೂ ಓದಿ: ವೇಗವಾಗಿ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್; ಇನ್‌ಸ್ಟಾಗ್ರಾಮ್​ನಲ್ಲಿ ನ್ಯೂ ಲುಕ್..

ಇದನ್ನೂ ಓದಿ: ಮೊಯಿನ್​ ಅಲಿ ಹಿಡಿದ ಕ್ಯಾಚ್​ ನೋಡಿ ಬೆರಗಾದ ಧೋನಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.