ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ 'ವಿವಾದಿತ ಔಟ್' ಸದ್ದು ಮಾಡಿದ್ದು ಗೊತ್ತೇ ಇದೆ. ಈ ಬಗ್ಗೆ ಭಾರತದ ಹಿರಿಯ ಆಟಗಾರರೂ ಸೇರಿದಂತೆ ಗಿಲ್ ಕೂಡ ಚಿತ್ರ ಸಮೇತ ಟ್ವೀಟ್ ಮಾಡಿ ಆಕ್ಷೇಪಿಸಿದ್ದರು. ಕ್ರಿಕೆಟಿಗನ ಈ ನಡೆ ದುಬಾರಿಯಾಗಿದ್ದು ಐಸಿಸಿ ಭಾರೀ ದಂಡ ವಿಧಿಸಿದೆ. ಅಲ್ಲದೇ, ನಿಧಾನಗತಿಯ ಬೌಲಿಂಗ್ ಕಾರಣಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೂ ದಂಡದ ಬರೆ ಬಿದ್ದಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಗಿಲ್ 18 ರನ್ ಗಳಿಸಿ ಆಡುತ್ತಿದ್ದಾಗ ಬೋಲೆಂಡ್ ಎಸೆತದಲ್ಲಿ ಬ್ಯಾಟ್ಗೆ ಸವರಿಕೊಂಡು ಹೋದ ಚೆಂಡು ಅಲ್ಲೇ ಕಾಯುತ್ತಿದ್ದ ಕ್ಯಾಮರೂನ್ ಗ್ರೀನ್ ಕೈ ಸೇರಿತು. ಅದ್ಭುತ ಯತ್ನದಿಂದ ಗ್ರೀನ್ ಚೆಂಡನ್ನು ಹಿಡಿದರು. ಆದರೆ, ಅದು ನೆಲಕ್ಕೆ ಬಡಿದಂತೆ ಟಿವಿ ರಿಪ್ಲೈಗಳಲ್ಲಿ ಕಾಣುತ್ತಿತ್ತು. ಆದರೆ, ಮೂರನೇ ಅಂಪೈರ್ ರಿಚರ್ಡ್ ಕೆಟಲ್ಬರೋ ಐಸಿಸಿ ನಿಯಮಗಳನ್ವಯ ಔಟ್ ಎಂದು ಘೋಷಿಸಿದರು. ಇದು ತೀವ್ರ ವಿವಾದವನ್ನು ಸೃಷ್ಟಿಸಿತು.
-
🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023 " class="align-text-top noRightClick twitterSection" data="
">🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023🔎🔎🤦🏻♂️ pic.twitter.com/pOnHYfgb6L
— Shubman Gill (@ShubmanGill) June 10, 2023
ಚೆಂಡು ಬೆರಳುಗಳ ಮಧ್ಯೆ ನೆಲಕ್ಕೆ ತಾಕುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದವು. ಇದನ್ನು ವೀರೇಂದ್ರ ಸೆಹ್ವಾಗ್, ವಾಸೀಂ ಜಾಫರ್ ಸೇರಿದಂತೆ ಹಲವಾರು ಹಿರಿಯ ಕ್ರಿಕೆಟಿಗರು ಟೀಕಿಸಿದ್ದರು. ಸ್ವತಃ ಶುಭ್ಮನ್ ಗಿಲ್ ಕೂಡ ಪಂದ್ಯದ ಮಧ್ಯೆಯೇ ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಅಂಪೈರ್ ನಿರ್ಧಾರವನ್ನು ದೂಷಿಸಿದ್ದರು.
ಇದು ಐಸಿಸಿ ನಿಯಮಗಳ ವಿರುದ್ಧವಾಗಿದ್ದು, ಯುವ ಕ್ರಿಕೆಟಿಗನಿಗೆ ಪಂದ್ಯದ ಮೊತ್ತದ ಜೊತೆಗೆ 15 ಪ್ರತತಿಶತ ಹೆಚ್ಚುವರಿ ದಂಡ ವಿಧಿಸಿದೆ. ಅಂದರೆ ಶೇಕಡಾ 115 ರಷ್ಟು ದಂಡ ಹಾಕಿದೆ. ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಟೀಕೆ ಅಥವಾ ಅನುಚಿತ ಕಾಮೆಂಟ್‌ಗೆ ಸಂಬಂಧಿಸಿದ ನಿಯಮ 2.7 ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಭಾರತ- ಆಸೀಸ್ ತಂಡಗಳಿಗೆ ದಂಡ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಿಗದಿತ ಸಮಯಕ್ಕಿಂತಲೂ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದಂಡ ವಿಧಿಸಿದೆ. ಭಾರತ ಮೀಸಲು ಅವಧಿಗಿಂತ 5 ಓವರ್ ಹಿಂದೆ ಇತ್ತು. ಹೀಗಾಗಿ ತಂಡಕ್ಕೆ ಶೇ.100ರಷ್ಟು ದಂಡ ಹಾಕಲಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ನಿಗದಿತ ಸಮಯಕ್ಕಿಂತಲೂ 4 ಓವರ್ ಕಡಿಮೆ ಬೌಲ್ ಮಾಡಿತ್ತು. ಹೀಗಾಗಿ ಆ ತಂಡಕ್ಕೆ ಪಂದ್ಯ ಶುಲ್ಕದ ಮೇಲೆ ಶೇ. 80 ರಷ್ಟು ದಂಡವನ್ನು ವಿಧಿಸಲಾಗಿದೆ.
ಐಸಿಸಿ ನೀತಿ ಸಂಹಿತೆ 2.22 ರ ಪ್ರಕಾರ, ಯಾವುದೇ ತಂಡ ಹಾಗೂ ಆಟಗಾರರು ನಿಗದಿತ ಅವಧಿಯಲ್ಲಿ ಬೌಲಿಂಗ್ ಮಾಡದಿದ್ದರೆ, ಸಮಯ ಮೀರಿದಲ್ಲಿ ಪ್ರತಿ ಓವರ್‌ಗೆ ಪಂದ್ಯ ಶುಲ್ಕದ 20 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗುತ್ತದೆ. ನಾಯಕನಿಗೆ ಶೇ.25 ರಷ್ಟು ದಂಡ ಹಾಕಲಾಗುತ್ತಿದೆ.
ಟೀಕೆಗೆ ಗುರಿಯಾದ ಭಾರತ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹೀನಾಯ ಸೋಲು ಭಾರತ ಕ್ರಿಕೆಟ್ ತಂಡವನ್ನು ಕಂಗೆಡಿಸಿದೆ. ಕಳೆದ ಬಾರಿ ನ್ಯೂಜಿಲ್ಯಾಂಡ್ಗೆ ಸೋತಿದ್ದರೆ, ಈ ಬಾರಿ ಆಸ್ಟ್ರೇಲಿಯಾ ಎದುರು ಮಂಡಿಯೂರುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: WTC final: ವಿರಾಟ್ ಶಾಟ್ ಸೆಲೆಕ್ಷನ್ ರಾಂಗ್.. ಅವರ ಆ ಶಾಟ್ ಆಯ್ಕೆಗೆ ಕಾರಣ ಏನೆಂದು ಪ್ರಶ್ನಿಸಬೇಕು.. ಗವಾಸ್ಕರ್