ETV Bharat / sports

2 ಪಂದ್ಯಗಳಿಂದ 180 ರನ್​.. ಶುಬ್ಮನ್​ ಗಿಲ್​ ಆಟದಲ್ಲಿ ಪರಿಣಾಮಕಾರಿ ಬದಲಾವಣೆ!

ಎರಡು ಇನ್ನಿಂಗ್ಸ್​ಗಳಿಂದ ಗಿಲ್ 105 ಎಸೆತಗಳಲ್ಲಿ ಕೇವಲ 17 ಎಸೆತಗಳನ್ನು ಮಾತ್ರ ಡಾಟ್​ ಮಾಡಿದ್ದಾರೆ. ಅಂದರೆ ಅವರು ಡಾಟ್​ ಬಾಲ್​ ಪರ್ಸೆಂಟೇಜ್​ ಕೇವಲ 10 ರಷ್ಟಿದೆ. ಎರಡೂ ಪಂದ್ಯಗಳಿಂದ ಒಟ್ಟಾರೆ ಸ್ಟ್ರೈಕ್​ರೇಟ್​ 166 ಇದ್ದು, 2022ರಲ್ಲಿ ಅವರ ಬ್ಯಾಟಿಂಗ್​ನಲ್ಲಿ ಪರಿಣಾಮಕಾರಿ ಬದಲಾವಣೆಯಾಗಿದೆ ಎಂದು ತೋರಿಸುತ್ತದೆ..

author img

By

Published : Apr 9, 2022, 7:25 PM IST

Shubman gill change his batting Style in 2022 IPL
ಶುಬ್ಮನ್ ಗಿಲ್ ಬ್ಯಾಟಿಂಗ್

ಮುಂಬೈ : ಶುಬ್ಮನ್​ ಗಿಲ್​ ಭಾರತ ತಂಡದ ಕ್ಲಾಸಿಕ್ ಬ್ಯಾಟರ್​, ಟೆಸ್ಟ್​ ತಂಡದಲ್ಲಿ ಈಗಾಗಲೇ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಯುವ ಬ್ಯಾಟರ್​, ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೂ, ಕೆಲ ಪಂದ್ಯಗಳಲ್ಲಿ ಲೋ ಸ್ಟ್ರೈಕ್​ ರೇಟ್​ನಿಂದ ಟೀಕೆಗೆ ಗುರಿಯಾಗುತ್ತಿದ್ದರು.

ಕೆಟ್ಟ ಹೊಡೆತಗಳಿಗೆ ಕೈ ಹಾಕದ ನೆಲದಲ್ಲೇ ಹೊಡೆದು ಬೌಂಡರಿ ಬಾರಿಸುತ್ತಿದ್ದ ಗಿಲ್​ ಸ್ಟ್ರೈಕ್​ ಬದಲಾವಣೆಯಲ್ಲಿ ಚುರುಕು ಪ್ರದರ್ಶನ ತೋರುತ್ತಿಲ್ಲ. ಹೆಚ್ಚು ಎಸೆತಗಳನ್ನು ವ್ಯರ್ಥ ಮಾಡುತ್ತಾರೆ ಎಂದು ಟೀಕಿಸಲಾಗುತ್ತಿತ್ತು. ಆದರೆ, ಈ ಬಾರಿ ಪಂಜಾಬ್ ಸ್ಟೈಲಿಷ್‌​ ಬ್ಯಾಟರ್​ ತಮ್ಮ ಟೀಕಾಕಾರರಿಗೆ ಬ್ಯಾಟ್​ ಮೂಲಕ ಉತ್ತರಿಸಿದ್ದಾರೆ. ಆ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅದಕ್ಕೆ ಸೂಕ್ತ ಉದಾಹರಣೆಯೆಂದರೆ ಅವರು ಕಳೆದ ಎರಡು ಪಂದ್ಯಗಳಲ್ಲಿ 105 ಎಸೆತಗಳನ್ನೆದುರಿಸಿ ಬರೋಬ್ಬರಿ 180 ರನ್​ಗಳಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಡಕ್​ ಔಟ್​ ಆಗಿದ್ದ 22 ವರ್ಷದ ರೈಟ್​ ಹ್ಯಾಂಡ್ ಬ್ಯಾಟರ್​, ನಂತರ ಎರಡು ಪಂದ್ಯಗಳಲ್ಲಿ ಕ್ರಮವಾಗಿ 84 ಮತ್ತು 96 ರನ್​ಗಳಿಸಿದ್ದರು. ಡೆಲ್ಲಿ ವಿರುದ್ಧ 46 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 84 ರನ್​ಗಳಿಸಿದರೆ, ನಿನ್ನೆ ಪಂಜಾಬ್ ವಿರುದ್ಧ 59 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 96 ರನ್​ಗಳಿಸಿದರು.

ಎರಡು ಇನ್ನಿಂಗ್ಸ್​ಗಳಿಂದ ಗಿಲ್ 105 ಎಸೆತಗಳಲ್ಲಿ ಕೇವಲ 17 ಎಸೆತಗಳನ್ನು ಮಾತ್ರ ಡಾಟ್​ ಮಾಡಿದ್ದಾರೆ. ಅಂದರೆ ಅವರು ಡಾಟ್​ ಬಾಲ್​ ಪರ್ಸೆಂಟೇಜ್​ ಕೇವಲ 10 ರಷ್ಟಿದೆ. ಎರಡೂ ಪಂದ್ಯಗಳಿಂದ ಒಟ್ಟಾರೆ ಸ್ಟ್ರೈಕ್​ರೇಟ್​ 166 ಇದ್ದು, 2022ರಲ್ಲಿ ಅವರ ಬ್ಯಾಟಿಂಗ್​ನಲ್ಲಿ ಪರಿಣಾಮಕಾರಿ ಬದಲಾವಣೆಯಾಗಿದೆ ಎಂದು ತೋರಿಸುತ್ತದೆ.

2018ರಿಂದ 1.8 ಕೋಟಿ ರೂ. ಪಡೆದು ಕೆಕೆಆರ್​ ತಂಡದಲ್ಲಿ ಆಡುತ್ತಿದ್ದ ಶುಬ್ಮನ್​ ಗಿಲ್​ರನ್ನು ಈ ಬಾರಿ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿರಲಿಲ್ಲ. ಹೊಸದಾಗಿ ಐಪಿಎಲ್ ಸೇರಿದ್ದ ಗುಜರಾತ್ ತಂಡ 8 ಕೋಟಿ ರೂ.ಗಳಿಗೆ ಅವರನ್ನು ಡ್ರಾಫ್ಟ್​ ಮಾಡಿಕೊಂಡಿತ್ತು.

ಇದನ್ನೂ ಓದಿ: ಐಪಿಎಲ್​ನಲ್ಲಿ ಯುವ ಆಟಗಾರರ ದರ್ಬಾರ್​.. ಭೀತಿಯಿಲ್ಲದೆ ಬ್ಯಾಟ್ ಬೀಸುವ ಉದಯೋನ್ಮುಖ ಕ್ರಿಕೆಟಿಗರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.