ETV Bharat / sports

ಏಕದಿನ ಕ್ರಿಕೆಟ್​ನಲ್ಲಿ 2,000 ರನ್ ಗಡಿ ದಾಟಿದ ಗಿಲ್​: ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಸಾಧನೆ

ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ 14 ರನ್​ ಗಳಿಸುತ್ತಿದ್ದಂತೆ ಶುಭ್‌ಮನ್​ ಗಿಲ್​ ಏಕದಿನ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದರು.

Etv Bharat
Etv Bharat
author img

By ETV Bharat Karnataka Team

Published : Oct 22, 2023, 7:55 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಭಾರತ ಕ್ರಿಕೆಟ್​ ತಂಡದ ಭರವಸೆಯ ಬ್ಯಾಟರ್​ ಶುಭ್‌ಮನ್​ ಗಿಲ್​ ಪ್ರತಿ ಪಂದ್ಯದಲ್ಲೂ ಒಂದಲ್ಲೊಂದು ದಾಖಲೆ ಬರೆಯುತ್ತಿದ್ದಾರೆ. ಈ ವರ್ಷ ಗೋಲ್ಡನ್​ ಫಾರ್ಮ್‌ನಲ್ಲಿರುವ ಇವರು​ ಪ್ರಸಕ್ತ ವಿಶ್ವಕಪ್​ನಲ್ಲೂ ಅದೇ ಪ್ರದರ್ಶನ ಮುಂದುವರೆಸಿದ್ದಾರೆ. ತಮ್ಮದೇ ವಿಶಿಷ್ಟ ಆಟದ ಶೈಲಿಯಿಂದ 'ಪ್ರಿನ್ಸ್'​ ಎಂದು ಕರೆಸಿಕೊಳ್ಳುತ್ತಿರುವ ಗಿಲ್ ಅವರು ಕಿಂಗ್​ ಕೊಹ್ಲಿಯಂತೆ ದಾಖಲೆಗಳ ಪುಟ ಸೇರುತ್ತಿದ್ದಾರೆ.

ಗಿಲ್​ ಜ್ವರದಿಂದ ಮೊದಲೆರಡು ಪಂದ್ಯಕ್ಕೆ ಅಲಭ್ಯರಾದರು. ನಂತರ ಚೇತರಿಸಿಕೊಂಡು ಅಕ್ಟೋಬರ್​ 14 ಶನಿವಾರ ಅಹಮದಾಬಾದ್​ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ವಿಶ್ವಕಪ್​ಗೆ ಪಾದಾರ್ಪಣೆ ಮಾಡಿದರು. ಪಾಕಿಸ್ತಾನದ ವಿರುದ್ಧ 16 ರನ್​ಗಳಿಗೆ ವಿಕೆಟ್​ ಕೊಟ್ಟರೆ, ಬಾಂಗ್ಲಾದೆದುರು (53) ಅರ್ಧಶತಕದ ಇನ್ನಿಂಗ್ಸ್​ ಆಡಿದರು.

ಕಡಿಮೆ ಇನ್ನಿಂಗ್ಸ್​ನಲ್ಲಿ 2,000 ರನ್​: 20ನೇ ವಯಸ್ಸಿನಲ್ಲಿ ಟೀಮ್​ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ಶುಭ್‌ಮನ್​ ಗಿಲ್​, ಅನುಭವ ಮತ್ತು ಕೌಶಲ್ಯದಿಂದ ಬ್ಯಾಟಿಂಗ್​ ಪ್ರದರ್ಶಿಸುತ್ತಾ ಬಂದಿದ್ದಾರೆ. ಇದೇ ಕಾರಣಕ್ಕೆ ಮೂರು ಮಾದರಿಯ ಭಾರತದ ಕ್ರಿಕೆಟ್‌ ತಂಡದಲ್ಲಿ ಆರಂಭಿಕ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್​, ಟಿ20 ಮತ್ತು ಏಕದಿನ ತಂಡದಲ್ಲಿ ಖಾಯಂ ಸದಸ್ಯರಾಗುಳಿದರು.

2019ರಿಂದ ತಂಡದಲ್ಲಿ ಆಡುತ್ತಿರುವ ಗಿಲ್​ 38 ಏಕದಿನ ಇನ್ನಿಂಗ್ಸ್‌ನಲ್ಲಿ 2,000 ರನ್​ ಗಳಿಸಿದ ದಾಖಲೆ ಮಾಡಿದರು. ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ 14 ರನ್​ ಗಳಿಸುತ್ತಿದ್ದಂತೆ ಈ ಮೈಲುಗಲ್ಲು ತಲುಪಿದರು. 38 ಇನ್ನಿಂಗ್ಸ್​ನಲ್ಲಿ ಈ ಸಾಧನೆಯನ್ನು ಯಾವುದೇ ಭಾರತೀಯ ಆಟಗಾರ ಮಾಡಿರಲಿಲ್ಲ. ವಿಶ್ವ ಮಟ್ಟದಲ್ಲಿ 38 ಇನ್ನಿಂಗ್ಸ್​ನಿಂದ 2,000 ರನ್​ ಪೂರೈಸಿದ ಮೊದಲ ಆಟಗಾರನೂ ಗಿಲ್​ ಆಗಿದ್ದಾರೆ. ಇವರ​ ನಂತರದಲ್ಲಿ ಆಶೀಮ್​ ಆಮ್ಲಾ (40), ಜಹೀರ್ ಅಬ್ಬಾಸ್ (45), ಕೆವಿನ್​ ಪೀಟರ್ಸನ್​ (45), ಬಾಬರ್​ ಅಜಮ್​ (45) ಇದ್ದಾರೆ. ಇಂದಿನ ಇನ್ನಿಂಗ್ಸ್​ನಲ್ಲಿ ಗಿಲ್​ ಕಿವೀಸ್​ ವಿರುದ್ಧ 26 ರನ್​ ಗಳಿಸಿ ವಿಕೆಟ್​ ಕೊಟ್ಟರು.

ಈ ಸಾಧನೆ ಮಾಡಿರುವ 5ನೇ ಭಾರತೀಯ ಆಟಗಾರ ಶುಭ್ಮನ್​ ಗಿಲ್. 24 ವರ್ಷ 44ನೇ ದಿನದಂದು ಇವರು​ 2,000 ರನ್​ ಪೂರೈಸಿದ್ದಾರೆ. ಇವರಿಗಿಂತ ಸಣ್ಣ ವಯಸ್ಸಿನಲ್ಲಿ ಭಾರತದ ನಾಲ್ವರು ಆಟಗಾರರು ಈ ಮೈಲುಗಲ್ಲು ತಲುಪಿದ್ದರು. ಅದರಲ್ಲಿ ಸಚಿನ್​ ತೆಂಡೂಲ್ಕರ್​ (20 ವರ್ಷ್​ 354 ದಿನ) ಮೊದಲಿಗರು. ನಂತರ ಯುವರಾಜ್ ಸಿಂಗ್​ (22 ವರ್ಷ 51 ದಿನ), ವಿರಾಟ್​ ಕೊಹ್ಲಿ (22 ವರ್ಷ 215 ದಿನ), ಸುರೇಶ್​ ರೈನಾ (23 ವರ್ಷ 45 ದಿನ)​ ಇದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಮಿಚೆಲ್ ಶತಕದಾಟ, ಭಾರತಕ್ಕೆ 274 ರನ್​ ಗುರಿ ನೀಡಿದ ನ್ಯೂಜಿಲೆಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.