ಮುಂಬೈ (ಮಹಾರಾಷ್ಟ್ರ): ಇಂಗ್ಲೆಂಡ್ ವಿರುದ್ಧ ಭರ್ಜರಿ ರನ್ ಅಂತರದ ಗೆಲುವು ದಾಖಲಿಸಿದರುವ ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬೇಸರದ ಸಂಗತಿ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರ 9 ವಿಕೆಟ್ಗಳ ಬೌಲಿಂಗ್ ಕೊಡುಗೆ ಮತ್ತು ಉತ್ತಮ ಬ್ಯಾಟಿಂಗ್ ಸಹಾಯದಿಂದ ಟೀಮ್ ಇಂಡಿಯಾ 347 ರನ್ಗಳ ದಾಖಲೆಯ ಗೆಲುವು ದಾಖಲಿಸಿತು. ಆದರೆ ಆಂಗ್ಲರ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಬ್ಯಾಟಿಂಗ್ ಆಲ್‌ರೌಂಡರ್ ಶುಭಾ ಸತೀಶ್ ಗಾಯಗೊಂಡಿದ್ದಾರೆ.
-
We have just witnessed the biggest victory margin being recorded in women's Tests. Congratulations @BCCIWomen on a fabulous show. 🙌🙌 #TeamIndia https://t.co/2MVZyXStRX
— BCCI (@BCCI) December 16, 2023 " class="align-text-top noRightClick twitterSection" data="
">We have just witnessed the biggest victory margin being recorded in women's Tests. Congratulations @BCCIWomen on a fabulous show. 🙌🙌 #TeamIndia https://t.co/2MVZyXStRX
— BCCI (@BCCI) December 16, 2023We have just witnessed the biggest victory margin being recorded in women's Tests. Congratulations @BCCIWomen on a fabulous show. 🙌🙌 #TeamIndia https://t.co/2MVZyXStRX
— BCCI (@BCCI) December 16, 2023
ಭಾರತ ಮುಂದಿನ ವಾರ ಆಸ್ಟ್ರೇಲಿಯಾದ ವಿರುದ್ಧ ಏಕೈಕ ಟೆಸ್ಟ್ ಅನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ. ಡಿ. 21 ರಿಂದ 24ರ ವರೆಗೆ ನಡೆಯಲಿರುವ ಪಂದ್ಯಕ್ಕೆ ಶುಭಾ ಸತೀಶ್ ಅವರ ಲಭ್ಯತೆ ಅನುಮಾನ ಎಂದು ಹೇಳಲಾಗುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದ ಶುಭ ಎರಡನೇ ಇನ್ನಿಂಗ್ಸ್ನಲ್ಲಿ ಮೈದಾನಕ್ಕೆ ಬರಲಿಲ್ಲ. ಶುಭ ಸತೀಶ್ ಅವರ ಬೆರಳಿಗೆ ಗಂಭೀರ ಗಾಯವಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಶುಭಾ ನೆರವಾಗಿದ್ದರು. ಜೆಮಿಮಾ ರಾಡ್ರಿಗಸ್ ಜೊತೆಗೂಡಿದ ಶುಭಾ 115 ರನ್ಗಳ ಪಾಲುದಾರಿಕೆ ಹಂಚಿಕೊಂಡು ತಂಡಕ್ಕೆ ಆಸರೆ ಆದರು. ಆರಂಭಿಕ ಎರಡು ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ತಂಡಕ್ಕೆ ಜೊತೆಯಾಟ ನೆರವಾಯಿತು. ಇನ್ನಿಂಗ್ಸ್ನಲ್ಲಿ 76 ಬಾಲ್ ಆಡಿದ ಶುಭಾ ಸತೀಶ್ 13 ಬೌಂಡರಿಯ ಸಹಾಯದಿಂದ 69 ರನ್ಗಳನ್ನ ಕಲೆಹಾಕಿ ಔಟ್ ಆದರು.
ದಾಖಲೆಯ ಜಯ ಸಾಧಿಸಿದ ಭಾರತ: ಮಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾದ ಸ್ಮೃತಿ ಮಂಧಾನ (17) ಮತ್ತು ಶಫಾಲಿ ವರ್ಮಾ (19) ಅವರ ವೈಫಲ್ಯತೆಯ ನಡುವೆಯೂ ಟೀಮ್ ಇಂಡಿಯಾ ಶುಭಾ ಸತೀಶ್ (69), ಜೆಮಿಮಾ ರಾಡ್ರಿಗಸ್ (68), ಯಾಸ್ತಿಕಾ ಭಾಟಿಯಾ (66) ಮತ್ತು ದೀಪ್ತಿ ಶರ್ಮಾ (67) ಅವರ ಅರ್ಧಶತಕ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ 49 ರನ್ ಬಲದಿಂದ 428 ರನ್ಗೆ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಮೊದಲ ಇನ್ನಿಂಗ್ಸ್ ಆಡಿದ ಇಂಗ್ಲೆಂಡ್ಗೆ ದೀಪ್ತಿ ಶರ್ಮಾ 5 ವಿಕೆಟ್ ಪಡೆದು ಕಾಡಿದರು. ಇದರಿಂದ 136 ರನ್ಗೆ ಆಂಗ್ಲರು ಆಲ್ಔಟ್ಗೆ ಶರಣಾದರು. 292 ರನ್ಗಳ ಮುನ್ನಡೆ ಪಡೆದುಕೊಂಡು ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಎರಡನೇ ದಿನದ ಮುಕ್ತಾಯದ ವರೆಗೆ ಬ್ಯಾಟಿಂಗ್ ಮಾಡಿದ ತಂಡ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಡಿಕ್ಲೇರ್ ಮಾಡಿತು. ಇದರಿಂದ ಇಂಗ್ಲೆಂಡ್ ಗೆಲುವಿಗೆ 478 ರನ್ಗಳ ಅವಶ್ಯಕತೆ ಇತ್ತು.
478 ರನ್ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ದೀಪ್ತಿ ಶರ್ಮಾ 4 ಮತ್ತು ಪೂಜಾ ವಸ್ತ್ರಕರ್ 3 ವಿಕೆಟ್ ಕಿತ್ತು ಕಾಡಿದರು. ಇಂಗ್ಲೆಂಡ್ 131ಕ್ಕೆ ಆಲ್ಔಟ್ ಆಯಿತು. ಭಾರತ 347 ರನ್ಗಳ ಭರ್ಜರಿ ಜಯ ದಾಖಲಿಸಿತು.
ಇದನ್ನೂ ಓದಿ: ಮಹಿಳಾ ಟೆಸ್ಟ್ನಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು: ಆಂಗ್ಲರ ವಿರುದ್ಧ ಕೌರ್ ಪಡೆಗೆ 347 ರನ್ ಜಯ